ರೈತರು ಬೆಳೆದ ತರಕಾರಿ ನೇರ ಮಾರಾಟಕ್ಕೆ ಅವಾಕಾಶ

608

ಶಿವಮೊಗ್ಗ: ಶಿಕಾರಿಪುರ ತಾಲೂಕು ತೋಟಕಾರಿಕೆ ಇಲಾಖೆಯು ತಾಲೂಕಿನ ರೈತರು ತಾವು ಬೆಳೆದ ಹೂವು, ಹಣ್ಣು, ತರಕಾರಿಗಳನ್ನು ಗ್ರಾಹಕರಿಗೆ ನೇರ ಮಾರಾಟ ಮಾಡಲು ಶಿಕಾರಿಪುರು ಹಾಗೂ ಶಿರಾಳಕೊಪ್ಪ ಪಟ್ಟಣದಲ್ಲಿ ನಂದಿನಿ ಹಾಲು ಮಾರಾಟ ಮಳಿಗೆ ಹತ್ತಿರದಲ್ಲಿ ಸ್ಥಳಾವಕಾಶವನ್ನು ಕಲ್ಪಿಸಲಾಗಿದೆ. ರೈತರು ಇಲಾಖೆಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು. ಮೆದಲು ಹೆಸರು ನೊಂದಾಯಿಸಿಕೊಂಡವರು ಮೆದಲ ಆದ್ಯತೆ ನೀಡಿ ಸ್ಥಳಾವಕಾಶ ನೀಡಲಾಗುವುದು. ತಾಲೂಕಿನ ರೈತರು ಈ ಅವಕಾಶದ ಸದುಪಯೋಗ ಪಡೆದುಕೊಳ್ಳುವಂತೆ ಹಿರಿಯ ಸಹಾಯಕ ತೋಟಕಾರಿಕೆ ನಿರ್ದೇಶಕರು ತಿಳಿಸಿರುತ್ತಾರೆ.
ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ಹಿ.ಸ.ತೋ.ನಿ. ಪ್ರಭುಶಂಕರ್ ಮೊ: ೯೬೬೩೬೩೪೩೮೮ ನ್ನು ಸಂಪರ್ಕಿಸುವುದು.