ರೈತರಿಗೆ ಮಾರ್ಗದರ್ಶನ ನೀಡಲು ಹೆಲ್ಪ್‌ಲೈನ್

174

ದಾವಣಗೆರೆ : ಕೋವಿಡ್-೧೯ ಎರಡನೆಯ ಅಲೆಯ ಪರಿಣಾಮದ ಲಾಕ್‌ಡೌನ್‌ನಿಂದಾಗಿ ಜಿಯಲ್ಲಿ ರೈತರು ಬೆಳೆದ ಹಾಗೂ ಕಟಾವಿಗೆ ಬಂದಿರುವ ತರಕಾರಿ, ಹೂ ಮತ್ತು ಹಣ್ಣುಗಳ ಮಾರಾಟಕ್ಕೆ/ ಸಾಗಾಣೆಗೆ ಸೂಕ್ತ ವ್ಯವಸ್ಥೆ ಹಾಗೂ ಸೂಕ್ತ ಮಾರುಕಟ್ಟೆ ಕಲ್ಪಿಸುವ ಸಲುವಾಗಿ ಯಾವುದೇ ತೊಂದರೆಗಳು ಆಗದಂತೆ ರೈತರಿಗೆ ಮಾರ್ಗದರ್ಶನಕ್ಕಾಗಿ ಹಾಗೂ ರೈತರ ತೋಟಗಾರಿಕೆ ಉತ್ಪನ್ನಗಳ ವಿಲೇವಾರಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಇಲಾಖೆಯಿಂದ ಜಿಯ ಎ ತಾಲ್ಲೂಕುಗಳ ಕಚೇರಿ ಗಳಲ್ಲಿ ಹೆಲ್ಪ್‌ಲೈನ್ ಸ್ಥಾಪಿಸಲಾಗಿದೆ.
ಜಿಯ ರೈತರು ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ), ಕಚೇರಿಗಳ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾರ್ಗದರ್ಶನ ಪಡೆಯಬಹುದಾಗಿದೆ. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ), ದಾವಣಗೆರೆ ಸಂಖ್ಯೆ ೦೮೧೯೨-೨೯೨೦೯೧ ಮೆ.ನಂ ೯೯೮೦೪೨೧೭೫೬, ಹಿ.ಸ.ತೋ.ನಿ. (ಜಿಪಂ), ಚನ್ನಗಿರಿ ೦೮೧೮೯-೨೨೮೧೭೦ ಮೊ. ೮೩೧೦೬೬೨೯೭೨, ಹಿ.ಸ.ತೋ.ನಿ. (ಜಿಪಂ), ಹೊನ್ನಾಳಿ ೦೮೧೮೯- ೨೫೨೯೯೦ ಮೊ. ೯೫೩೫೯೯೮೮೨೯, ಹಿ.ಸ.ತೋ.ನಿ.(ಜಿಪಂ), ಹರಿಹರ ೦೮೧೯೨-೨೪೨೮೦೩, ಮೊ. ೯೯೦೦೫೨೬೦೫೯ ಹಿ.ಸ.ತೋ.ನಿ. (ಜಿಪಂ), ಜಗಳೂರು ೦೮೧೯೬- ೨೨೭೩೮೯, ಮೊ. ೭೦೨೨೦೫೮೬೫೬ ಸಂಪರ್ಕಿಸಬಹುದೆಂದು ತೋಟ ಗಾರಿಕೆ ಉಪನಿರ್ದೇಶಕರು ಲಕ್ಷ್ಮೀ ಕಾಂತ ಬೊಮ್ಮನ್ನಾರ್ ತಿಳಿಸಿzರೆ.