ರೈತರಿಗಾಗಿ ತೋಟಗಾರಿಕೆ ಸಹಾಯವಾಣಿ

469

ದಾವಣಗೆರೆ: ಕೋವಿಡ್-೧೯ ನಿಯಂತ್ರಣ ಹಿನ್ನೆಲೆ ರೈತರು ಬೆಳೆದ ತೋಟಗಾರಿಕೆ ಉತ್ಪನ್ನಗಳಿಗೆ ಮಾರುಕಟ್ಟೆ, ಸರಬರಾಜು ವ್ಯವಸ್ಥೆ ಹಾಗೂ ಮಾಹಿತಿ ಕೊರೆತೆಯಿದ್ದರೆ ಕಟಾವಿಗೆ ಬಂದಿರುವ ತರಕಾರಿ ಮತ್ತು ಹಣ್ಣು ಬೆಳೆಗಳಿದ್ದರೆ, ರೈತರ ನೆರವಿಗೆ ದಾವಣಗೆರೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯು ಸಹಾಯವಾಣಿ ಆರಂಭಿಸಿದೆ.
ದಾವಣಗೆರೆ ತಾಲ್ಲೂಕಿನ ರೈತರು ಸಹಾಯವಾಣಿ ಸಂಖ್ಯೆ ೦೮೧೯೨-೨೯೭೦೯೧ ಈ ಸಂಖ್ಯೆಗೆ ಬೆಳಿಗ್ಗೆ ೯ ರಿಂದ ಸಂಜೆ ೬ ರವರೆಗೆ ಕರೆ ಮಾಡಿ ನೆರವು ಪಡೆಯಬಹುದು ಎಂದು ಹಿರಿಯ ಸಹಾಯಕ ನಿರ್ದೇಶಕಿ ಶಶಿಕಲಾ ಅವರು ತಿಳಿಸಿದ್ದಾರೆ.