ರೇಪ್ ಕೇಸ್ ಹಾಕ್ತೀನಿ ಹುಷಾರ್; ಬ್ಯಾಂಕ್ ಅಧಿಕಾರಿಗೆ ಬೆದರಿಕೆ

404

ಬೆಂಗಳೂರು: ಸಾಲ ವಾಪಸ್ ಕೇಳಲು ಬಂದ ಬ್ಯಾಂಕ್ ಸಿಬ್ಬಂದಿಗೆ ಅತ್ಯಾಚಾರದ ಕೇಸ್ ಹಾಕುತ್ತೇನೆ ಎಂದು ಮಹಿಳೆ ಅವಾಜ್ ಹಾಕಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಬ್ಯಾಂಕಿನಲ್ಲಿ ಪಡೆದ ಸಾಲವನ್ನು ವಾಪಸ್ ಕೊಡಿ ಎಂದು ಕೇಳಲು ಮೂರು ಜನ ಬ್ಯಾಂಕ್ ಸಿಬ್ಬಂದಿ ಮಹಿಳೆಯ ಮನೆಗೆ ಬಂದಿzರೆ. ಈ ವೇಳೆ ಮಹಿಳೆ ಸುಮ್ಮನೆ ಜಗಳ ಮಾಡಿ ನಿಮ್ಮ ಮೇಲೆ ಅತ್ಯಾಚಾರದ ಕೇಸ್ ಹಾಕುತ್ತೇನೆ ಎಂದು ಅವಾಜ್ ಹಾಕಿzಳೆ. ಮಹಿಳೆಯ ಈ ವಿಡಿಯೋ ಸಾಮಾಜಿಕ ಜಲತಾಣದಲ್ಲಿ ವೈರಲ್ ಆಗಿದೆ.
ಬ್ಯಾಂಕ್ ಸಿಬ್ಬಂದಿಯನ್ನು ತಾನೇ ಎಳೆದಾಡಿ ನಿನ್ನ ಮೇಲೆ ಅತ್ಯಾಚಾರ ಕೇಸ್ ಹಾಕುತ್ತೇನೆ. ನನ್ನ ಮೇಲೆ ಹ ಮಾಡಿzರೆ ಎಂದು ದೂರು ನೀಡುತ್ತೇನೆ ಎಂದು ಮಹಿಳೆ ಬೆದರಿಕೆ ಹಾಕಿzಳೆ.
ಅಲ್ಲದೇ ನಿಮ್ಮ ಫೋಟೋವನ್ನು ಫೇಸ್‌ಬುಕ್‌ಗೆ ಹಾಕಿ ಅರೆಸ್ಟ್ ಮಾಡಿಸುತ್ತೇನೆ ಎಂದಿzಳೆ. ಈ ವೇಳೆ ಸಿಬ್ಬಂದಿಯೋರ್ವರು ಮಹಿಳೆಯ ಕಾಲಿಗೆ ಬಿದ್ದು ನಮ್ಮನ್ನು ಬಿಟ್ಟು ಬಿಡಿ ಎಂದು ಕೇಳಿಕೊಂಡರು ಮಹಿಳೆ ದರ್ಪ ತೋರಿzಳೆ. ಹಿರಿಯ ನಾಗರೀಕರು ಎಂಬ ಅರಿವಿಲ್ಲದೇ ಮಹಿಳೆ ನಡೆದುಕೊಂಡ ರೀತಿಗೆ ನೆಟ್ಟಗರು ಛೀಮಾರಿ ಹಾಕುತ್ತಿzರೆ.