ರಿಯಾಗೆ ಮನೆ ಬಾಗಿಲಲ್ಲಿ ಸನ್ಮಾನ…

311

ನಗರದ ಸಾಂದೀಪನಿ ಆಂಗ್ಲ ಪ್ರೌಢಶಾಲೆಯ ವಿದ್ಯಾರ್ಥಿನಿ ಪತ್ರಕರ್ತ ಆಲ್ಫೋನ್ಸ್ ರಾಕೇಶ್ ಡಿಸೋಜ ಹಾಗೂ ಅಸುಂತ ಸಿಕ್ವೇರಾ ದಂಪತಿಗಳ ಪುತ್ರಿ ರಿಯಾ ಡಿಸೋಜಾ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೧ಅಂಕ ಗಳಿಸಿ ಶಾಲೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇವರ ಪ್ರತಿಭೆ ಗುರುತಿಸಿ ಇಂದು ಅವರ ಮನೆಗೆ ಭೇಟಿ ನೀಡಿದ ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್, ಕ್ರೈಸ್ತ ಸಮಾಜದ ಮುಖಂಡ ಚಿನ್ನಪ್ಪ, ಮಾಜಿ ನಗರಸಭಾ ಸದಸ್ಯ ಎನ್.ಕೆ. ಶಾಮ್‌ಸುಂದರ್, ಆರ್.ಕೆ. ಉಮೇಶ್ ಹಾಗೂ ಯೋಗೀಶ್ ಗೌಡ ಪ್ರತಿಭಾನ್ವಿತೆ ರಿಯಾ ಡಿಸೋಜಾರಿಗೆ ಸನ್ಮಾನಿಸಿ ಶುಭ ಹಾರೈಸಿದರು.