ರಾವತ್ ಸಾವಿನ ಸಂಭ್ರಮ: ಕಿಡಿಗೇಡಿ ಅರೆಸ್

104

ಜೈಪುರ: ತಮಿಳುನಾಡಿನ ಊಟಿ ಬಳಿ ಡಿ.೮ರಂದು ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದ ರಕ್ಷಣಾ ಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಅಗಲಿಕೆಯಿಂದ ಇಡೀ ದೇಶವೇ ಶೋಕತಪ್ತವಾಗಿರುವ ಸಂದರ್ಭದಲ್ಲಿ ಕಿಡಿಗೇಡಿಯೊಬ್ಬ ಸಾಮಾಜಿಕ ತಾಣದಲ್ಲಿ ಅವರ ಸಾವಿನ ಸಂಭ್ರಮಾಚರಣೆಯನ್ನು ನಡೆಸಿ ಇಡೀ ದೇಶದ ಕೆಂಗಣ್ಣಿಗೆ ಗುರಿಯಾಗಿzನೆ.
ರಾಜಸ್ಥಾನ ಮೂಲದ ಜವ್ವಾದ್ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ಜನರಲ್ ರಾವತ್ ಅವರ ಚಿತ್ರವನ್ನು ಹಂಚಿಕೊಂಡಿದ್ದನು. ಇದರೊಂದಿಗೆ ಜಹನ್ನೂಮ್ ಮುಟ್ಟುವ ಮೊದಲೇ ಜೀವಂತವಾಗಿ ಸುಟ್ಟುಹೋದರು ಎಂಬ ಅವಹೇಳನಕಾರಿ ಸಾಲನ್ನೂ ಬರೆದು ಹಾಕಿದ್ದ. ಸಾಮಾಜಿಕ ಜಲತಾಣದಲ್ಲಿ ಚರ್ಚೆ ಆಗುತ್ತಿದ್ದಂತೆ ರಾಜಸ್ಥಾನದ ಟೋಂಕ್ ಪೊಲೀಸರು ಆರೋಪಿ ಜವ್ವಾದ್ ಖಾನ್‌ನನ್ನು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ.
ಇದರ ಬಳಿಕ ಟ್ವಿಟ್ಟರ್‌ನಲ್ಲಿ ಟೋಂಕ್ ಪೊಲೀಸರು ಮಾಹಿತಿ ಯನ್ನು ನೀಡಿzರೆ. ಅವಹೇಳನಕಾರಿ ಹೇಳಿಕೆಯ ಮೇಲೆ ಅಬ್ದುಲ್ ನಕ್ಕಿ ಖಾನ್‌ರ ಮಗ ಜವ್ವಾದ್ ಖಾನ್‌ನನ್ನು ಬಂಧಿ ಲಾಗಿದೆ. ೨೧ ವಯಸ್ಸಿನ ಜವ್ವಾದ್ ಖಾನ್ ರಾಜ್ ಟಾಕೀಸ್ ಬಳಿಯ ನಿವಾಸಿಯಾಗಿzನೆ. ಡಿ. ೮ರಂದು ಅವಹೇಳನಕಾರಿ ಹೇಳಿಕೆಯನ್ನು ನೀಡಿರುವ ವಿಚಾರ ನಮ್ಮ ಗಮನಕ್ಕೆ ಬಂದಿರುವುದರಿಂದ ಆರೋಪಿಯನ್ನು ಬಂಧಿಸಲು ನಾಲ್ಕು ವಿಶೇಷ ತಂಡಗಳ ರಚನೆ ಮಾಡಲಾಗಿತ್ತು. ಅವನನ್ನು ಸದ್ಯ ಬಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿzರೆ.
ಕಿಡಿಗೇಡಿ ಜವ್ವಾದ್ ಖಾನ್ ಈ ಹಿಂದೆಯೂ ಸಾಮಾಜಿಕ ಜಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ. ಪ್ರೊಫೈಲ್‌ನಲ್ಲಿ ಇಸ್ಲಾಮಿಕ್ ಮೂಲಭೂತವಾದಿ ಎಂದೂ ಬರೆದುಕೊಂಡಿzನೆ.