ರಾತ್ರಿ ಹೊತ್ತು ಭೂತ ಬಂಗಲೆಯಂತೆ ಕಾಣುವ ಹರಿಹರದ ಸಾರ್ವಜನಿಕರ ಆಸ್ಪತ್ರೆ!

443

ಹರಿಹರ: ದಾವಣಗೆರೆ ಜಿಯ ನಂಬರ್ ಒನ್ ಆಸ್ಪತ್ರೆ ಎಂದು ಖ್ಯಾತಿ ಪಡೆದಿರುವ ಹರಿಹರದ ಸಾರ್ವಜನಿಕರ ಆಸ್ಪತ್ರೆ. ಈ ಆಸ್ಪತ್ರೆಯ ಹೊರಗಡೆ ದೀಪದ ಬೆಳಕಿಲ್ಲದೆ ರಾತ್ರಿಯ ಹೊತ್ತು ಭೂತ ಬಂಗಲೆಯಂತೆ ಕಾಣುತ್ತದೆ!
ಹರಿಹರದ ಸಾರ್ವಜನಿಕ ಆಸ್ಪತ್ರೆಗೆ ಸಂಬಂಧಿಸಿದಂತೆ ಸಭೆ ಸಮಾರಂಭ ಅಥವಾ ಇತರ ಯಾರೇ ಸಾರ್ವಜನಿಕರು ಬಂದು ಪ್ರಶ್ನೆ ಮಾಡಿದರೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಸೇರಿದಂತೆ ಇತರ ಸಿಬ್ಬಂದಿಗಳಿಂದ ಬರುವ ಮೊದಲ ಉತ್ತರ ನಮ್ಮ ಆಸ್ಪತ್ರೆ ಜಿಯಲ್ಲಿ ನಂಬರ್ ಒನ್ ಎಂಬ ಪ್ರಶಸ್ತಿಯನ್ನು ಪಡೆದಿದೆ ಎಂಬ ಉತ್ತರದಿಂದ ಮಾತನ್ನು ಶುರು ಮಾಡುತ್ತಾರೆ.
ಆದರೆ ಎಲ್ಲರಲ್ಲೂ ಸಾರ್ವಜನಿಕ ಆಸ್ಪತ್ರೆಗೆ ಸಂಬಂಧಿಸಿದಂತೆ ಒಂದು ಪ್ರಶ್ನೆ ಕಾಡುತ್ತಿದೆ. ಯಾವ ವಿಚಾರದಲ್ಲಿ ಆಸ್ಪತ್ರೆಯನ್ನು ನಂಬರ್ ಒನ್ ಪ್ರಶಸ್ತಿ ನೀಡಿzರೆ ಎಂಬುದೇ ಆಗಿದೆ.
ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುವುದು ಅಥವಾ ರೋಗಿಗಳಿಗೆ ಹೊರಗಡೆ ಮೆಡಿಷನ್ ತೆಗೆದುಕೊಂಡು ಬರುವಂತೆ ಚೀಟಿ ಬರೆದು ಕಳಿಸುವುದೇ? ಅಥವಾ ಆಸ್ಪತ್ರೆಯ ಬರುವಂಥ ರೋಗಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿದ್ದೇವೆ ಎಂಬ ಭ್ರಮೆಯಲೇ? ಹೀಗೆ ಹತ್ತು ಹಲವು ಪ್ರಶ್ನೆಗಳು ಸಾರ್ವಜನಿಕರಲ್ಲಿ ಕಾಡುತ್ತಿದೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊವಿಡ್ ರೋಗಿಗಳಿಗಾಗಿ ಪ್ರತ್ಯೇಕ ವಾರ್ಡುಗಳನ್ನು ಆಸ್ಪತ್ರೆಯ ಒಳಗಡೆ ತೆರೆಯಲಾಗಿದೆ. ಈ ವಾರ್ಡ್‌ಗಳು ಆಸ್ಪತ್ರೆಯ ಮಧ್ಯ ಭಾಗದ ಇರುವ ಕೋಣೆಗಳಾಗಿರುವುದರಿಂದ ಹೆರಿಗೆಗೆ ಬರುವಂತಹ ಗರ್ಭಿಣಿ ಸ್ತ್ರೀಯರಿಗೆ ಇದರಿಂದ ತುಂಬಾ ತೊಂದರೆಯಾಗುತ್ತಿದೆ. ಅದರಲ್ಲೂ ರಾತ್ರಿಯ ಸಮಯದಲ್ಲಿ ಗರ್ಭಿಣಿಯರ ಕಷ್ಟ ಕೇಳಲೇಬೇಡಿ.
ಹರಿಹರದ ಸಾರ್ವಜನಿಕ ಆಸ್ಪತ್ರೆಯ ಹೆರಿಗೆ ವಾರ್ಡ್ ಆಸ್ಪತ್ರೆಯ ಕೊನೆಯ ಭಾಗದಲ್ಲಿ ಇರುವುದರಿಂದ ಹೆರಿಗೆಗೆ ಬರುವ ಗರ್ಭಿಣಿಯರು ಆಸ್ಪತ್ರೆಯ ಹೊರಗಡೆಯೇ ದೀಪದ ಬೆಳಕಿಲ್ಲದೆ ಕತ್ತಲ ದಾರಿಯಲ್ಲಿ ನಡೆದು ಹೋಗುವಂಥ ದುಸ್ಥಿತಿ ನಿರ್ಮಾಣವಾಗಿದೆ.
ಇನ್ನು ರೋಗಿಗಳನ್ನು ನೋಡಲು ಬರುವ ಸಂಬಂಧಿಕರ ಪರಿಸ್ಥಿತಿಯಂತೂ ಕೇಳಲೇಬೇಡಿ. ಅದರಲ್ಲಿ ವಯೋ ವೃದ್ಧರು, ಅಂಗವಿಕಲರು ಕತ್ತಲ ದಾರಿಯಲ್ಲಿ ಎದ್ದು ಬಿದ್ದು ನಡೆದುಕೊಂಡು ಹೋಗಬೇಕಾಗಿದೆ.
ಹರಿಹರದ ಸಾರ್ವಜನಿಕರ ಆಸ್ಪತ್ರೆಯ ಹೊರಗಡೆ ದೀಪದ ಬೆಳಕಿಲ್ಲದೆ ವರ್ಷಗಳೇ ಕಳೆದಿದೆ. ಆದರೆ ಆಸ್ಪತ್ರೆಯವರಾಗಲಿ ಅಥವಾ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯವರು ಆಗಲಿ ಇದುವರೆಗೂ ಗಮನಹರಿಸದೇ ಇರುವುದು ಇವರಿಗೆ ಸಾರ್ವಜನಿಕರ ಆಸ್ಪತ್ರೆಯ ಮೇಲೆ ಇವರಿಗೆಷ್ಟು ಕಾಳಜಿ ಇದೆ ಎಂಬುದು ತಿಳಿಯುತ್ತದೆ .
ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಕರ್ತವ್ಯ ಜವಾಬ್ದಾರಿಗಳು ಏನು ಎಂಬುದು ಜನಸಾಮಾನ್ಯರಲ್ಲಿ ಪ್ರಶ್ನೆ ಕಾಡುತ್ತಿದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ರಕ್ಷಾ ಸಮಿತಿಯವರ ಜವಾಬ್ದಾರಿ ಅಲ್ಲವೇ? ಆದರೆ ಇವರು ತಮ್ಮ ಜವಾಬ್ದಾರಿಯನ್ನು ಮರೆತಿzರಾ?
ಆಸ್ಪತ್ರೆಯ ರಕ್ಷಾ ಸಮಿತಿಯವರು ಎದ್ದರೂ, ಬಿದ್ದರೂ, ಆಸ್ಪತ್ರೆಯ ಹೊರಗಡೆ ಹಾಗೂ ಕಚೇರಿಯ ಒಳಗಡೆ ಇರುವುದನ್ನು ಸಾರ್ವಜನಿಕರು, ರೋಗಿಗಳು ಕಂಡಿzರೆ.
ರಕ್ಷ ಸಮಿತಿಯವರಿಗೆ ಆಸ್ಪತ್ರೆಯ ಹೊರಗಡೆ ದೀಪದ ವ್ಯವಸ್ಥೆ ಇಲ್ಲದಿರುವುದು ಅವರ ಕಣ್ಣಿಗೆ ಇದುವರೆಗೂ ಕಂಡಿಲ್ಲವೇ? ಹಾಗಾದರೆ ಆಸ್ಪತ್ರೆಯ ಕಚೇರಿಯ ಒಳಗೆ ಕುಳಿತು ಮುಖ್ಯ ವೈದ್ಯಾಧಿಕಾರಿಯೊಂದಿಗೆ ಪ್ರತಿದಿನ ಚರ್ಚಿಸುವ ವಿಷಯ ವಾದರೂ ಏನು ಎಂಬ ಪ್ರಶ್ನೆ ಸಾರ್ವ ಜನಿಕ ವಲಯದಲ್ಲಿ ಕಾಡತೊಡಗಿದೆ.
ಏನೇ ಹೇಳಿ ಜಿಯಲ್ಲಿ ನಂಬರ್ ಒನ್ ಎಂಬ ಖ್ಯಾತಿ ಪಡೆದ ಹರಿಹರದ ಸಾರ್ವಜನಿಕರ ಆಸ್ಪತ್ರೆ ದೀಪದ ಬೆಳಕಿಲ್ಲದೆ ರಾತ್ರಿಯ ಹೊತ್ತು ಭೂತ ಬಂಗಲೆಯಂತೆ ಕಾಣುತ್ತಿರುವುದು ತಲೆತಗ್ಗಿಸುವ ವಿಷಯವಾಗಿದೆ.
ಇನ್ನಾದರೂ ‘ರಾಘವೇಂದ್ರ ಸ್ವಾಮಿ’ ಬೃಂದಾವನದಿಂದ ಎದ್ದು ಬಂದು ಹರಿಹರದ ಸಾರ್ವಜನಿಕರ ಆಸ್ಪತ್ರೆಗೆ ರಾತ್ರಿ ಹೊತ್ತು ಬೆಳಕು ನೀಡುವಲ್ಲಿ ಗಮನ ಹರಿಸುತ್ತಾರೆ. ಆರೋಗ್ಯ ರಕ್ಷಾ ಸಮಿತಿಯವರು ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಾ ರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ .