ರಾಜ್ಯ ಮಟ್ಟದ ಕ್ರಿಕೆಟ್: ಯಂಗ್ ಇಲಾಹಿ ತಂಡ ಪ್ರಥಮ

334

ಹೊಸನಾವಿಕ ನ್ಯೂಸ್
ಹರಿಹರ : ಕಳೆದ ೩ದಿನಗಳಿಂದ ಹರಿಹರದ ಗಾಂಧಿ ಮೈದಾನದಲ್ಲಿ ಎನ್. ಹೆಚ್. ಶ್ರೀನಿವಾಸ್ ನಂದಿಗಾವಿ ಇವರ ಹುಟ್ಟುಹಬ್ಬದ ಪ್ರಯುಕ್ತ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದು, ಇಂದು ಅಂತಿಮ ಹಂತದ ಪಂದ್ಯದೊಂದಿಗೆ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ತೆರೆ ಎಳೆಯಲಾಯಿತು.
ಅಂತಿಮ ಪಂದ್ಯದಲ್ಲಿ ಹರಿಹರದ ‘ಯಂಗ್ ಇಲಾಹಿ’ ತಂಡ ಪ್ರಥಮ ಹಾಗೂ ‘ಸಹಾರಾ ಗುತ್ತೂರು’ ದ್ವಿತಿಯ ಸ್ಥಾನ ಪಡೆಯುವ ಮೂಲಕ ೩ ದಿನದಿಂದ ನಡೆಯುತ್ತಿದ್ದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಳು ಮುಕ್ತಾಯಗೊಂಡವು.
ಅಂತಿಮ ಹಂತದ ಪಂದ್ಯಾವಳಿ ಯನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಆಗಮಿಸಿ ಪಂದ್ಯಾವಳಿಯ ರಸದೌತಣ ವನ್ನು ಸವಿದರು. ಅಂತಿಮ ಹಂತದ ಪಂದ್ಯಾವಳಿಯ ಮುನ್ನಾ ನಂದಿಗಾವಿ ಶ್ರೀನಿವಾಸ ಇವರ ೪೧ನೇ ಹುಟ್ಟುಹಬ್ಬದ ನಿಮಿತ್ತ ಮೈದಾನದ ಮಧ್ಯಭಾಗದಲ್ಲಿ ಬೃಹತ್ ಆಕಾರದ ಕೇಕ್ ಕತ್ತರಿಸುವ ಮೂಲಕ ಅವರ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು ಶುಭ ಕೋರಿದರು.
ನಂತರ ಮಾತನಾಡಿದ ಶ್ರೀನಿವಾಸ್ ಅವರು , ಇಂದಿನ ಕ್ರಿಕೆಟ್ ಪಂದ್ಯಾವಳಿಯು ನಮ್ಮ ನಿರೀಕ್ಷೆಗಿಂತ ಹೆಚ್ಚು ಯಶಸ್ವಿಯಾಗಿ ನಡೆದಿದೆ . ನನ್ನ ಕೈಯಲ್ಲಿ ಶಕ್ತಿಯಿರುವ ತನಕ ಪ್ರತಿ ವರ್ಷವೂ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸಿಕೊಂಡು ಬರುತ್ತೇನೆ. ಇದರ ಜೊತೆಗೆ ಇತರ ಕ್ರೀಡೆಗಳಿಗೂ ಪ್ರೋತ್ಸಾಹ ನೀಡುತ್ತೇನೆ . ತಾಲ್ಲೂಕಿನಲ್ಲಿರುವ ಪ್ರತಿಭೆಗಳು ಬೆಳಕಿಗೆ ಬರಬೇಕು. ರಾಜ್ಯ, ರಾಷ್ಟ್ರೀಯ, ಅಂತರ ರಾಷ್ಟ್ರೀಯ ಮಟ್ಟ ದಲ್ಲಿ ಹರಿಹರದ ಕೀರ್ತಿ ಪತಾಕೆಯನ್ನು ಹಾರಿಸುವ ಕ್ರೀಡಾಪಟುಗಳು ಬೆಳಕಿಗೆ ಬರಬೇಕು. ಆ ನಿಟ್ಟಿನಲ್ಲಿ ನನ್ನ ಸಹಕಾರ ಸದಾ ಇರುತ್ತದೆ ಎಂದರು.
ಕೊರೊನಾ ಸಂಕಷ್ಟದಿಂದ ತಾಲ್ಲೂಕಿನ ಕೀಡಾಪಟುಗಳು ಕೆಂಗೆಟ್ಟು ಹೋಗಿದ್ದರು. ಅವರು ಮತ್ತೆ ಕ್ರೀಡೆ ಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬ ಸದುದ್ದೇಶದಿಂದ ಈ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು ಎಂದು ಶೀನಿವಾಸರವರು ಕ್ರೀಡೆಯ ಕುರಿತು ತಮ್ಮ ಅಭಿಪ್ರಾಯವನ್ನು ನಮ್ಮ ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಂಡರು.
ಇದಕ್ಕೂ ಮೊದಲು ಹರಿಹರದ ಶಾಸಕ ಎಸ್.ರಾಮಪ್ಪ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೆಲಹೊತ್ತು ಆಟಗಾರರೊಂದಿಗೆ ಕ್ರಿಕೆಟ್ ಆಟವನ್ನು ಆಡಿ ನಿರ್ಗಮಿಸಿದರು .
ಹರಿಹರದ ಸ್ನೇಹ ಬಳಗದ ಅಭಿಮಾನಿಗಳು ಹಾಗೂ ಕ್ರೀಡಾಪಟು ಗಳು ನಂದಿಗಾವಿ ಶ್ರೀನಿವಾಸ್ ಹಾಗೂ ಅವರ ಸಹೋದರ ಸತ್ಯನಾರಾಯಣ್ ಅವರಿಗೆ ಬೃಹತ್ ಗಾತ್ರದ ಹಾರವನ್ನು ಹಾಕಿ ಶುಭಕೋರಿದರು .
ಈ ಸಂದರ್ಭದಲ್ಲಿ ಕ್ರಿಕೆಟ್ ಪಂದ್ಯಾವಳಿಯ ಆಯೋಜಕರಾದ ಸ್ನೇಹ ಬಳಗದ ಸಂತೋಷ ಗುಡಿಮನೆ, ಅತಾವುಲ್ಲ, ಹುಳ್ಳಿಕಟ್ಟೆ ನಾಗರಾಜ್, ಬದ್ರಿ ಶ್ರೀನಿವಾಸ್, ಆರ್ ಕೆ ನರೇಂದ್ರ ಕುಮಾರ್, ಎಂಎಸ್ ಕೆಂಚಪ್ಪ , ಡಾ| ಕೆ ಟಿ ಮಶಪ್ಪ , ಎ ಶಿವಕುಮಾರ್ , ಎಚ್ ಜಿ ಜಯಣ್ಣ ,ಎನ್ ಜಿ ಪಂಚಾಕ್ಷರಿ , ಎನ್ ಎಂ ಸುರೇಶ್, ಎ ಪರಶುರಾಮ್ ,ಬಸವರಾಜ್ ಹಾಗೂ ನೂರಾರು ಸಂಖ್ಯೆಯ ಕ್ರಿಕೇಟ್ ಕ್ರೀಡಾಪಟುಗಳು ಕ್ರಿಕೆಟ್ ಅಭಿಮಾನಿಗಳು ಉಪಸ್ಥಿತರಿದ್ದರು .