ರಾಜ್ಯ ಆರ್‍ಯವೈಶ್ಯ ನಿಗಮದ ಅಧ್ಯಕ್ಷ ಅರುಣ್ ಕಾರು ಅಪಘಾತ

452

ಶಿವಮೊಗ್ಗ : ರಾಜ್ಯ ಆರ್ಯ ವೈಶ್ಯ ನಿಗಮದ ಆಧ್ಯಕ್ಷ ಡಿ.ಎಸ್. ಅರುಣ್ ಅವರು ಸಂಚರಿಸುತ್ತಿದ್ದ ಕಾರು ಶಿರಾ ಬಳಿ ಇಂದು ಬೆಳಿಗ್ಗೆ ಅಪಘಾತ ವಾಗಿದ್ದು, ಅದೃಷ್ಟವಶಾತ್ ಡಿ.ಎಸ್. ಅರುಣ್ ಸೇರಿದಂತೆ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದ್ವಿಚಕ್ರ ವಾಹನವೊಂದು ಅಡ್ಡಬಂದ ಪರಿಣಾಮ ಅದನ್ನು ತಪ್ಪಿಸಲು ಹೋಗಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಕಾರಿ ನಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಸುದೇವ್, ಡಿ.ಎಂ. ಶಂಕರಪ್ಪ ಮೊದಲಾದವರು ಇದ್ದರು ಎಂದು ತಿಳಿದುಬಂದಿದೆ.