ರಾಜ್ಯದ ಶೇ.೨೫ ಮಂದಿ ಅನಕ್ಷರಸ್ಥರಲ್ಲಿ ಮುಸ್ಲಿಮರೇ ಹೆಚ್ಚಿದ್ದಾರೆ: ಸಂಸದ ಬಿ.ವೈ. ರಾಘವೇಂದ್ರ

432

ಶಿವಮೊಗ್ಗ : ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಕೇವಲ ಭಾಷಣ ಮಾಡಿಕೊಂಡು ಮುಸಲ್ಮಾನ್ ಬಾಂಧವರು ಎಂದು ಹೇಳಿಕೊಂಡು ಓಡಾಡಿದರೇ ಹೊರತು ಅವರ ಜೀವನದಲ್ಲಿ ಬದಲಾವಣೆಯನ್ನ ತರಲಿಲ್ಲವೆಂದು ಸಂಸದ ಬಿ.ವೈ. ರಾಘವೇಂದ್ರ ಅವರು ಪರೋಕ್ಷವಾಗಿ ಕಾಂಗ್ರೆಸ್‌ನ್ನ ಕುಟುಕಿದರು.
ಮುಸ್ಲೀಂ ಹಾಸ್ಟೆಲ್‌ನಲ್ಲಿ ಜಿ ವಕ್ಫ್ ಬೋರ್ಡ್ ಅಧ್ಯಕ್ಷ ಅಬ್ದುಲ್ ಘನಿಯವರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂತರ ರಾಷ್ಟ್ರೀಯ ಸಾಕ್ಷರತಾ ಕಾರ್ಯಕ್ರಮ ಇತ್ತೀಚೆಗೆ ನಡೆದಿದೆ. ಅದರಲ್ಲಿ ಕೇರಳದಲ್ಲಿ ಶೇ.೯೯ ರಷ್ಟು ಸಾಕ್ಷರತೆ ಇದೆ ಎಂದು ತಿಳಿಸಿದೆ. ಕರ್ನಾಟಕದಲ್ಲಿ ಶೇ.೭೪ರಷ್ಟು ಸಾಕ್ಷರತೆ ಇದೆ ಎಂದು ಕಾರ್ಯಕ್ರಮದ ವರದಿಗಳು ತಿಳಿಸಿವೆ. ಯಾಕೆ ಇನ್ನೂ ಶೇ.೨೫ ರಷ್ಟು ಸಾಕ್ಷರತೆ ಕಡಿಮೆ ಆಗಿದೆ ಎಂದು ನೋಡಿದಾಗ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ರಾದ ಮುಸ್ಲೀಂ ಬಂಧುಗಳು ಶಿಕ್ಷಣ ದಿಂದ ದೂರವಿರೋದು ಕಂಡುಬಂದಿದೆ ಎಂದು ವಿಷಾಧಿಸಿದರು.
ಸೈಕಲ್ ಪಂಪ್ ಹೊಡೆಯುತ್ತಿ ರುವವನು ಇಂದು ಹೆಚ್ಚಾಗಿ ಮುಸ್ಲಿಂ ವರ್ಗವಾಗಿದೆ. ಬಸ್ ಸ್ಟ್ಯಾಂಡ್‌ನಲ್ಲಿ ಹಣ್ಣುಮಾರುವವನು ಇಂದು ಮುಸ್ಲೀಂ ಬಾಂಧವರಾಗಿzರೆ. ನಾನು ಯಾವುದೇ ಕೆಲಸದ ಬಗ್ಗೆ ಅವಹೇಳನ ಮಾಡುತ್ತಿಲ್ಲ. ಆಯಾ ಕೆಲಸಕ್ಕೆ ತಕ್ಕ ಗೌರವ ಇದ್ದೇ ಇರುತ್ತದೆ. ಆದರೆ ಶಿಕ್ಷಣದಿಂದ ವಂಚಿತರಾದವರು ಈ ವರ್ಗದವರೇ ಆಗಿದ್ದಾರೆ ಎಂದು ನುಡಿದರು.