ರಾಜ್ಯದೆಲ್ಲೆಡೆ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆ

466

ಬೆಂಗಳೂರು: ಮಹಾಮಾಹಿ ಕರೋನಾ ನಿಮಿತ್ತ ಲಾಕ್‌ಡೌನ್ ಹಿನ್ನಲೆಯಲ್ಲಿ ಇಂದು ರಾಜ್ಯದೆಲ್ಲೆಡೆ ಬಸವ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಜಗಜ್ಯೋತಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ನಾಡಿನ ಜನತೆಗೆ ಶುಭಾಶಯ ಕೋರಿದರು.
ವಚನ ಸಾಹಿತ್ಯದ ಸತ್ವ ಸಾರ್ವಕಾಲಿಕವಾಗಿದೆ ಎಂದ ಸಿಎಂ, ಬಸವಣ್ಣನವರ ತತ್ವಾದರ್ಶಗಳಲ್ಲಿ ಸ್ವಲ್ಪವನ್ನಾದರೂ ಜೀವನದಲ್ಲಿ ಅಳವಡಿಸಿಕೊಂಡು ಅರ್ಥಪೂರ್ಣ ಜಯಂತಿ ಆಚರಿಸೋಣ ಎಂದು ಕರೆ ನೀಡಿದರು.
ಬಸವಣ್ಣನವರ ವಚನಗಳು ಕೇವಲ ಬೋಧನೆಯಲ್ಲ, ಅವು ಕ್ರಾಂತಿ ಗೀತೆಗಳು. ಅವರು ತೋರಿಸಿಕೊಟ್ಟ ಮಾರ್ಗದಲ್ಲಿ ನಡೆದರೆ ಕಲ್ಯಾಣ ರಾಜ್ಯದ ಕನಸು ನನಸಾದೀತು. ಸಮಸ್ತ ಕನ್ನಡಿಗರಿಗೂ ಬಸವ ಜಯಂತಿಯ ಶುಭಾಶಯಗಳು ಎಂದು ಶುಭಹಾರೈಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.