ರಾಜ್ಯದಲ್ಲಿ ೧೪,೪೭೩ ಹೊಸ ಕೇಸ್; ಪಾಸಿಟಿವಿಟಿ ದರ ಶೇ.೧೦.೩೦ಕ್ಕೆ ಏರಿಕೆ

10

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು ನಿರಂತರ ಏರುತ್ತಿದ್ದು ಜ.೧೧ ರಂದು ಬೆಂಗಳೂರಿನಲ್ಲಿ ೧೦,೮೦೦ ಸೇರಿದಂತೆ ರಾಜ್ಯದಲ್ಲಿ ಒಂದೇ ದಿನ ೧೪,೪೭೩ ಹೊಸ ಕೋವಿಡ್ ಕೇಸ್ ವರದಿಯಾಗಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆ ೭೩,೨೬೦ ಕ್ಕೆ ಏರಿಕೆಯಾಗಿದ್ದು ಬೆಂಗಳೂರು ಒಂದರ ೫೯ ಸಾವಿರ ಸಕ್ರಿಯ ಪ್ರಕರಣಗಳಿವೆ.

ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, ಒಂದೇ ದಿನದಲ್ಲಿ ಕೋವಿಡ್-೧೯ ಸೋಂಕಿನಿಂದ ರಾಜದ್ಯಂತ ೫ ಮಂದಿ (ಬೆಂಗಳೂರಿನಲ್ಲಿ-೩) ಸಾವನ್ನಪ್ಪಿzರೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.೧೦.೩೦ ಕ್ಕೆ ಏರಿಕೆಯಾಗಿದೆ. ೨೪ ಗಂಟೆಗಳಲ್ಲಿ ೧,೩೫೬ ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು ಡಿಸ್ಚಾರ್ಜ್ ಆಗಿzರೆ, ಇಂದು ಒಟ್ಟು ೧,೪೦,೪೫೨ ಸೋಂಕು ಪತ್ತೆ ಪರೀಕ್ಷೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿzರೆ.

     ————————————————-
ಸುದ್ದಿ , ಜಾಹೀರಾತು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ WhatsApp : 9482482182