ರಾಜ್ಯದಲ್ಲಿ ಕೊರೋನಾ ಸ್ಫೋಟ: ೧೮೦ಬಲಿ, ಬೆಂಗಳೂರು ೧೭,೫೫೦- ಶಿವಮೊಗ್ಗದಲ್ಲಿ ೩೮೮ ಪಾಸಿಟಿವ್ ಸ್ಪೀಕರ್ ಕಾಗೇರಿ ಬೆನ್ನೇರಿದ ಮಹಾಮಾರಿ

845

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು ಏ.೨೭ರಂದು ೩೧,೮೩೦ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇಂದು ೧೮೦ ಸೋಂಕಿತರು ಸಾವು ಕಂಡಿದ್ದಾರೆ. ಇದರೊಂದಿಗೆ ಸೋಂಕಿತರ ಸಂಖ್ಯೆ ೧೪,೦೦,೭೭೫ಕ್ಕೆ ಏರಿಕೆಯಾದರೆ, ಸಾವಿನ ಸಂಖ್ಯೆ ೧೪೮೦೭ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಇಂದು ೧೭,೫೫೦ ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ ೬,೮೭,೭೫೧ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ ೯೭ ಮಂದಿ ಬಲಿಯಾಗಿzರೆ. ರಾಜ್ಯದಲ್ಲಿ ಇಂದು ೧೦,೭೯೩ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿzರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ ೧೦,೮೪,೦೫೦ಕ್ಕೆ ಏರಿಕೆಯಾಗಿದೆ. ಇನ್ನು ೩,೦೧,೮೯೯ ಸಕ್ರೀಯ ಪ್ರಕರಣಗಳಿದ್ದು, ಈ ಪೈಕಿ ೨,೦೬೩ ಮಂದಿ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿzರೆ.
ಶಿವಮೊಗ್ಗದಲ್ಲಿ ಏ.೨೬ರಂದು ೩೪೭ಮಂದಿಯಲ್ಲಿ ಪತ್ತೆಯಾಗಿದ್ದ ಮಹಾಮಾರಿ ಏ.೨೭ರಂದು ೩೮೮ ಜನರ ಹೆಗಲೇರಿ ಕುಳಿತಿದ್ದು, ಈ ಮೂಲಕ ತನ್ನ ವೇಗ ಹೊಚ್ಚಿಸಿಕೊಂಡಿದೆ.
ಸುಮಾರು ೧೫೭೫ ಜನರಿಗೆ ನೆಗೆಟಿವ್ ಬಂದಿದ್ದು, ಈವರೆಗೆ ಜಿಲ್ಲೆಯಲ್ಲಿ ಸುಮಾರು ೩೬೬ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಸ್ಪೀಕರ್‌ಗೆ ಸೋಂಕು:
ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಶಿರಸಿಯಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು, ವರದಿ ಪಾಸಿಟಿವ್ ಬಂದಿದೆ. ಸೋಂಕು ಪತ್ತೆಯಾಗಿದ್ದರೂ ಯಾವುದೇ ರೀತಿಯ ಲಕ್ಷಣಗಳು ಇಲ್ಲ ಹಾಗೂ ಆರೋಗ್ಯವಾಗಿzರೆ. ಸರ್ಕಾರದ ಕೋವಿಡ್ ಮಾರ್ಗಸೂಚಿ ಪ್ರಕಾರ ಚಿಕಿತ್ಸೆ ಪಡೆಯುತ್ತಿzರೆ ಎಂದು ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ ತಿಳಿಸಿzರೆ.
ಸಧ್ಯ ಕಾಗೇರಿಯವರು ಹೋಮ್ ಐಸೋಲೇಶನ್‌ನಲ್ಲಿದ್ದು, ಕೋವಿಡ್ ಆಸ್ಪತ್ರೆಗೆ ದಾಖಲಾಗಿಲ್ಲ. ಇತ್ತೀಚಿಗೆ ಸಭಾಧ್ಯಕ್ಷರ ಸಂಪರ್ಕಕ್ಕೆ ಬಂದವರು ಸ್ವಯಂ ಪ್ರೇರಿತವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳ ಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸ್ಪೀಕರ್ ಕಾಗೇರಿ ಅವರು ಕಳೆದ ಎರಡು ದಿನದ ಹಿಂದೆಯಷ್ಟೇ ಸಿದ್ಧಾಪುರದ ಮನಮನೆಯಲ್ಲಿನ ಮದುವೆ ಮನೆಗೆ ಮಾಸ್ಕ್ ಇಲ್ಲದೇ ಹೋಗಿ ಕ್ಷೇತ್ರದ ಜನರಿಂದಲೇ ಟ್ರೋಲ್‌ಗೆ ಒಳಗಾಗಿ ಸುದ್ದಿಯಾಗಿ ದ್ದರು. ಇದೀಗ ಕೊರೊನಾ ಪಾಸಿಟಿವ್ ವರದಿಯಾಗಿದೆ.