ರಾಜಾವತ್- ವೆಂಕಟೇಶ್ ಪೊಲೀಸ್ ವಶಕ್ಕೆ

417

ಶಿವಮೊಗ್ಗ : ನಗರದ ಮೆಗ್ಗಾನ್ ಆಸ್ಪತ್ರೆಯ ಮುಂಭಾಗದಲ್ಲಿ ಹೊರಗುತ್ತಿಗೆ ನೌಕರರ ಪರವಾಗಿ ನಾಯಕತ್ವ ವಹಿಸಿ ಧರಣಿ ಕುಳಿತ್ತಿದ್ದ ವಿನಯ್ ರಾಜವತ್ ಹಾಗೂ ವೆಂಕಟೇಶ್ ಎಂಬುವರನ್ನ ದೊಡ್ಡಪೇಟೆ ಪೊಲೀಸರು ಬಂಧಿಸಿzರೆ.
ಆತ್ಮಹತ್ಯೆಗೆ ಪ್ರಚೋಧನೆ (ಸೆಕ್ಷನ್ ೩೦೬) ಹಾಗೂ ೩೫೩ ಅಡಿಯಲ್ಲಿ ವಿನಯ್ ರಾಜಾವತ್‌ರನ್ನ ಪೊಲೀಸರು ಬಂಧಿಸಿರುವುದಾಗಿ ಕೇಳಿಬಂದಿದೆ. ಮೆಗ್ಗಾನ್‌ನಲ್ಲಿ ಕೋವಿಡ್-೧೯ ಪರೀಕ್ಷೆಗೆ ಇವರಿಬ್ಬರನ್ನೂ ಒಳಪಡಿಸಲಾ ಗಿದೆ. ಕೋವಿಡ್-೧೯ ಪರೀಕ್ಷೆಯಲ್ಲಿ ಇಬ್ಬರಿಗೂ ಕೊರೋನ ನೆಗೆಟಿವ್ ಬಂದಿರುವ ಹಿನ್ನಲೆಯಲ್ಲಿ ನ್ಯಾಯಾಯಲಯದ ಮುಂದೆ ಹಾಜರಿ ಪಡಿಸಲು ಪೊಲೀಸರು ಸಿದ್ಧತೆ ಪಡಿಸಿ ಕೊಳ್ಳುತ್ತಿzರೆ ಎಂದು ವರದಿಯಾಗಿದೆ.
ಸೆ.೨೧ ರಿಂದ ಸಿಮ್ಸ್‌ನ ೪೭೮ ಹೊರಗುತ್ತಿಗೆ ನೌಕರರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಿಮ್ಸ್ ನ ಮುಂಭಾಗದಲ್ಲಿ ಧರಣಿ ನಡೆಸಲಾ ಗಿತ್ತು. ಗುರುವಾರ ಸಿಎಂ ಯಡಿ ಯೂರಪ್ಪ, ಸಂಸದ ರಾಘವೇಂದ್ರ ಹಾಗೂ ಸಚಿವ ಈಶ್ವರಪ್ಪರವರ ಭಾಚಿತ್ರಕ್ಕೆ ಹೊರಗುತ್ತಿಗೆ ನೌಕರರ ರಕ್ತ ತೆಗೆದು ರಕ್ತಕ್ರಾಂತಿಗೆ ಮುಂದಾಗಿದ್ದ ವಿದ್ಯಾರ್ಥಿ ಸಂಘಟನೆಯ ನಾಯಕ ರಾಜವತ್ ಸರ್ಕಾರದ ವತಿಯಿಂದ ಯಾರು ಸಂಧಾನಕ್ಕೆ ಬಾರದಿದ್ದರೆ ಧರಣಿ ನಿರತ ಹೊರಗುತ್ತಿಗೆ ನೌಕರರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೆ ನೀಡಿದ್ದರು.
ಈ ಹಿನ್ನಲೆಯಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ ಎಂಬ ಮಾಹಿತಿ ಕೇಳಿಬಂದಿದೆ.