ರಕ್ತದಾನದ ಮೂಲಕ ವಾಸವಿ ಜಯಂತಿ ಆಚರಣೆ

560

ಹೊಸನಾವಿಕ ಪತ್ರಿಕೆಗೆ ಚಂದಾದಾರರಾಗಲು ಮತ್ತು ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ: +91 948 248 2182, e-mail:hosanavika@gmail.com

ಶಿವಮೊಗ್ಗ: ವಾಸವಿ ಜಯಂತಿನಿಮಿತ್ತ ನಗರದ ವಾಸವಿ ಯುವಜನ ಸಂಘದ ವತಿಯಿಂದ ಇಂದು ರಕ್ತದಾನ ಶಿಬಿರ ನಡೆಯಿತು.
ನಗರದ ರೋಟರಿ ಬ್ಲಡ್ ಬ್ಯಾಂಕ್‌ನಲ್ಲಿ ನಡೆದ ಈ ಕಾರ್ಯಕ್ರಮದ ಉದ್ಘಾಟನೆಯನ್ನ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ. ಎಸ್. ಅರುಣ್ ನೆರವೇರಿಸಿದರು. ಕೊರೋನ ಲಾಕ್ ಡೌನ್ ಹಿನ್ನಲೆಯಲ್ಲಿ ಇತರೆ ಕಾಯಿಲೆಗಳಿಗೆ ರಕ್ತಗಳ ಕೊರತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಇಂದು ನಡೆದ ರಕ್ತದಾನ ಶಿಬಿರ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಇಂದಿನ ರಕ್ತದಾನ ಶಿಬಿರದಲ್ಲಿ ಸುಮಾರು ೮೦ ಜನರು ಇಂದು ರಕ್ತದಾನ ಮಾಡಿದ್ದು ವಿಶೇಷವಾಗಿತ್ತು. ಈ ಶಿಬಿರವು ಇಂದಿನಿಂದ ೯ ದಿನಗಳ ಕಾಲ ಈ ಶಿಬಿರ ನಡೆಯಲಿದೆ ಎಂದು ಎನ್‌ಎಸ್‌ಯುಐ ಹಾಗೂ ವಾಸವಿ ಸಂಘದ ಮುಖಂಡ ಬಾಲಾಜಿ ಅವರು ಪತ್ರಿಕೆಗೆ ತಿಳಿಸಿದ್ದಾರೆ.
ಅತಿಥಿಗಳಾಗಿ ಆರ್ಯವೈಶ್ಯ ವಾಸವಿ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಟಿ.ಎಸ್. ವೆಂಕಟಸುಬ್ಬಯ್ಯ ಶೆಟ್ಟಿ, ಸಮಾಜದ ಪ್ರಮುಖರುಗಳಾದ ಬೆಲಗೂರು ಮಂಜುನಾಥ್, ಭೂಪಾಳಂ ಶಶಿಧರ್ ,ಎಂ ಜೆ ಮಂಜುನಾಥ್, ಸಿ ಎನ್ ಶ್ರೀನಿವಾಸ್, ಎಸ್ ವಿ ನಾಗೇಂದ್ರ ಹಾಗೂ ಇತರೆ ಆರ್ಯವೈಶ್ಯ ಯುವ ಪ್ರಮುಖರು ಭಾಗವಹಿಸಿದ್ದರು.