ಯುವರೈತ ಕೀರ್ತನ್ ನೆರವಿಗೆ ಬನ್ನಿ: ವಿನ್ಸೆಂಟ್

460

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಯುವರೈತ ಕೀರ್ತನ್ ಆಗ್ರಾದಲ್ಲಿ ಪ್ರಸಿದ್ದವಾಗಿರುವ ಪೇಟಾ ಸಿಹಿ ತಿನಿಸಿನ ಉದ್ದಿಮೆಗೆ ಪ್ರಮುಖ ಕಚ್ಚಾ ವಸ್ತುವಾದ ಬೂದುಗುಂಬಳಕಾಯಿ ಬೆಳೆಯನ್ನು ಶ್ರಮವಹಿಸಿ ಬೆಳೆಸಿದ್ದು, ಏ.೨೩ರಂದು ಬೆಳೆಯನ್ನು ಕೊಯ್ಲು (ಸುಮಾರು ೫೦ಟನ್‌ಗೂ ಅಧಿಕ) ಮಾಡಿರುತ್ತಾರೆ. ಸದ್ಯದ ಲಾಕ್‌ಡೌನ್ ಪರಿಸ್ಥಿತಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ರಾಷ್ಟ್ರ ರಾಜಧಾನಿ ದೆಹಲಿಯಿಂದ ಬರಬೇಕಾಗಿದ್ದ ಸಗಟು ವ್ಯಾಪಾರಿಗಳು ಖರೀದಿಗೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಜಿಲ್ಲಾಡಳಿತ ಈ ಯುವ ರೈತನ ನೆರವಿಗೆ ಬರಬೇಕಾಗಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ವಿನ್ಸೆಂಟ್ ರೋಡ್ರಿಗಸ್ ಅವರು ಮನವಿ ಮಾಡಿರುತ್ತಾರೆ.
ಕೋವಿಡ್-೧೯ ವೈರಸ್ ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್‌ಡೌನ್ ಹೇರಲಾದ ಹಿನ್ನೆಲೆಯಲ್ಲಿ ಈಗಾಗಲೇ ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳು ರೈತರು ಬೆಳೆದ ಬೆಳೆಯನ್ನು ನೇರವಾಗಿ ಖರೀದಿಸಿ ಸಾರ್ವಜನಿಕರಿಗೆ ವಿತರಿಸುವ ಮೂಲಕ ಸಮಾಜಮುಖಿ ಕಾರ್ಯದಲ್ಲಿ ನಿರತರಾಗಿದ್ದು, ಈ ರೈತನು ಬೆಳೆದ ಕುಂಬಳ ಕಾಯಿ ಬೆಳೆಯನ್ನು ಖರೀದಿಸುವ ಮೂಲಕ ರೈತನ ನೆರವಿಗೆ ಧಾವಿಸಲಿಚ್ಚಿಸುವವರು ಮೊ: ೯೪೪೯೭೬೪೧೨೦ / ೯೯೦೦೦೪೬೦೮೪ ಸಂಪರ್ಕಿಸಲು ಅವರು ಕೋರಿದ್ದಾರೆ.