ಯಾರಾಗಲಿದ್ದಾರೆ ಮುಂದಿನ ಸಿಡಿಎಸ್?

89

ನವದೆಹಲಿ: ಜನರಲ್ ಬಿಪಿನ್ ರಾವತ್ ಹೆಲಿಕಾಪ್ಟರ್ ಅವಘಡದಲ್ಲಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ತೆರವಾಗಿರುವ ಅವರ ಸ್ಥಾನಕ್ಕೆ ಸೂಕ್ತ ವ್ಯಕ್ತಿಯ ಆಯ್ಕೆ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ.
ಸೇನೆಯ ಉನ್ನತ ಸಿಡಿಎಸ್ ಹುzಗೆ ಜನರಲ್ ಎಂ.ಎಂ. ನರವಣೆ ಅವರ ಹೆಸರು ಕೇಳಿಬರುತ್ತಿದೆ. ಮುಂದಿನ ೫ ತಿಂಗಳಲ್ಲಿ ಅರ್ಮಿ ಸ್ಟಾಫ್ ಮುಖ್ಯಸ್ಥ ಹುzಯಿಂದ ನಿವತ್ತರಾಗುತ್ತಿzರೆ. ಹೀಗಾಗಿ ಸಿಡಿಎಸ್ ಆಯ್ಕೆ ಕುತೂಹಲ ಹುಟ್ಟಿಸಿದೆ.
ಆಯ್ಕೆ ಪ್ರಕ್ರಿಯೆಗಾಗಿ ಸಮಿತಿ ರಚನೆಯಾಗಿದ್ದು ಅಂತಿಮ ಹೆಸರುಗಳ ಪಟ್ಟಿಯನ್ನು ಶಿಫಾರಸ್ಸು ಮಾಡಲಿದೆ. ಸದ್ಯ ಸೇನೆಯಲ್ಲಿರುವ ಮುಖ್ಯಸ್ಥರ ನರವಣೆ ಸೀನಿಯರ್ ಆಗಿzರೆ. ಕಳೆದ ವರ್ಷ ಜನವರಿ ತಿಂಗಳಲ್ಲಿ ಜನರಲ್ ರಾವತ್ ಅವರು ಭಾರತದ ಪ್ರಥಮ ಸಿಡಿಎಸ್ ಹುz ಅಲಂಕರಿಸಿದ್ದರು. ಸೇನೆಯ ಮೂರೂ ವಿಭಾಗಗಳ ಮುಖ್ಯಸ್ಥ ಹುz ಸಿಡಿಎಸ್. ರಾವತ್ ಅವರ ಸೇವಾವಧಿ ೨೦೨೩ ಮಾರ್ಚ್ ತಿಂಗಳಲ್ಲಿ ಕೊನೆಗೊಳ್ಳುತ್ತಲಿತ್ತು.
ಸಿಡಿಎಸ್ ವಿಶೇಷತೆ ಏನು?:
ಭೂ, ವಾಯು ಹಾಗೂ ನೌಕಾ ಪಡೆಗಳಿಗೆ ಪ್ರತ್ಯೇಕ ಮುಖ್ಯಸ್ಥರಿzರೆ. ರಾಷ್ಟ್ರಪತಿಗಳು ನೇತೃತ್ವ, ಆದೇಶದಂತೆ ಮೂರು ಪಡೆಗಳು ಕಾರ್ಯನಿರ್ವಹಿಸುತ್ತಿವೆ. ಕೇಂದ್ರ ಸರ್ಕಾರ ಹಾಗೂ ಮೂರು ಪಡೆಗಳ ಮಧ್ಯೆ ಸಮನ್ವಯ ತರುವ ಕೆಲಸವನ್ನು ಸಿಡಿಎಸ್ ಮಾಡುತ್ತಿದ್ದರು. ಈ ಹುzಗೆ ಆಯ್ಕೆ ಆಗುವವರು ೪ ಸ್ಟಾರ್ ಹೊಂದಿರುವ ಮಿಲಿಟರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ.