ಯಡ್ರಾಮಿ ತಾಪಂ ಅಧ್ಯಕ್ಷ-ಉಪಾಧ್ಯಕ್ಷ ಕಾಂಗ್ರೆಸ್ ಪಕ್ಷದ ತೆಕ್ಕೆಗೆ

451

ಯಡ್ರಾಮಿ: ತಾಲೂಕ ಪಂಚಾಯತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರತ್ನಾಬಾಯಿ ಸಿದ್ದಣ್ಣ ಕವಲ್ದಾರ ಹಾಗೂ ಉಪಾಧ್ಯಕ್ಷರಾಗಿ ಅನಿತಾ ಬಾಯಿ ಶಾಂತಾರಾಮ ರಾಥೋಡ್ ಬಳಬಟ್ಟಿ ಇವರು ಅವಿರೋಧವಾಗಿ ಆಯ್ಕೆ ಯಾಗಿರುವ ಹಿನ್ನಲೆಯಲ್ಲಿ ಅವರನ್ನು ಜೇವರ್ಗಿಯ ಶಾಸಕರು ಹಾಗೂ ವಿಧಾನ ಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾ.ಅಜಯ್ ಸಿಂಗ್ ಅಭಿನಂದನೆಯನ್ನು ಸಲ್ಲಿಸಿದರು.
ಯಡ್ರಾಮಿ ತಾಲ್ಲೂಕು ಪಂಚಾಯತಿಯಲ್ಲಿ ಒಟ್ಟು ೧೨ ಸದಸ್ಯರು ಅದರಲ್ಲಿ ೯ -ಕಾಂಗ್ರೆಸ್ ಎರಡು ಬಿಜೆಪಿ-೧ ಜೆಡಿಎಸ್ ಸದಸ್ಯರು ಆಯ್ಕೆಯಾಗಿದ್ದ ರಿಂದ ೯ ಸ್ಥಾನಗಳಿಸಿದ ಕಾಂಗ್ರೆಸ್ ಬಹುಮತ ಪಡೆದಿದ್ದರಿಂದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಪಾಲಾಗಿದೆ ಎಂದು ಡಾಕ್ಟರ್ ಅಜಯ್ ಸಿಂಗ್ ತಿಳಿಸಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ ಹರನಾಳ ರುಕ್ಕುo ಪಟೇಲ್ ಇಜೇರಿ, ಯಡ್ರಾಮಿಯ ಹಾಗೂ ಜೇವರ್ಗಿಯ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ತಾಲೂಕಾಡಳಿತ ವರ್ಗದವರು ಉಪಸ್ಥಿತರಿದ್ದರು.