ಯಕ್ಷಗಾನ ಕಲಾವಿದರುಗಳಿಗೆ ಆರ್ಥಿಕ ನೆರವು…

449

ಶಿವಮೊಗ್ಗ: ಕೋವಿಡ್-19 ಹರಡುವಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ಇಡೀ ರಾಜ್ಯ ಲಾಕ್ ಡೌನ್ ಆಗಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಎಲ್ಲಾ ಪ್ರಕಾರದ ಯಕ್ಷಗಾನದ ಕಲಾವಿದರುಗಳಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯು ಆರ್ಥಿಕ ಸಹಾಯ ಮಾಡಲು ನಿರ್ಧರಿಸಲಾಗಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಎಲ್ಲಾ ಪ್ರಕಾರದ ಯಕ್ಷಗಾನ ಕಲಾವಿದರು ಇ-ಮೇಲ್ ಹಾಗೂ ವಾಟ್ಸ್‍ಪ್ ಮೂಲಕ ಅರ್ಜಿ ಸಲ್ಲಿಸುವಂತೆ ಕರ್ನಾಟಕ ಯಕ್ಷಗಾನ ಅಕಾಡೆಮಿಯು ಪ್ರಕಟಣೆಯಲ್ಲಿ ತಿಳಿಸಿದೆ.
ವೃತ್ತಿನಿರತ ಕಲಾವಿದರಾಗಿದ್ದು, ಕನಿಷ್ಠ 10 ವರ್ಷ ಕಲಾ ಸೇವೆ ಮಾಡಿರಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಪಡೆಯುತ್ತಿರಬಾರದು ಮತ್ತು ಯಾವುದೇ ಸರ್ಕಾರಿ ನೌಕರರಾಗಿರಬಾರದು.
ಹೆಸರು, ವಿಳಾಸ, ಕಲಾ ಪ್ರಕಾರ, ಆಧಾರ ಸಂಖ್ಯೆ, ವರ್ಗ, ದೂರವಾಣಿ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ವಿವರಗಳನ್ನೊಂಡ ಅರ್ಜಿಯನ್ನು ಸ್ವ ವಿವರಗಳೊಂದಿಗೆ ಇಲಾಖೆಯ ಇ-ಮೇಲ್ kybabangalore@gmail.com ವಿಳಾಸ ಅಥವಾ ಅಕಾಡೆಮಿ ಅಧ್ಯಕ್ಷರ ಮೊ.ಸಂ.: 9901141091, ರಿಜಿಸ್ಟ್ರಾರ್ ಮೊ.ಸಂ.: 9448309125 ಗಳಿಗೆ ವಾಟ್ಸ್‍ಪ್ ಅಥವಾ ಮೂಲಕ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅರ್ಜಿಯನ್ನು ಏಪ್ರಿಲ್ 27 ರ ಒಳಗಾಗಿ ಸಲ್ಲಿಸುವುದು.
ಹೆಚ್ಚಿನ ವಿವರಕ್ಕಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ದೂ.ಸಂ.:080-22113146 ನ್ನು ಸಂಪರ್ಕಿಸಬಹುದಾಗಿದೆ.