ಮೋತಿ ಬೇಕರಿ ಭೇಟಿ – ಪರಿಶೀಲನೆ

459

ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ಮತ್ತು ಮುಂಜಾಗ್ರತಾ ಕ್ರಮ ವಹಿಸುವ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪಿ.ಬಿ.ರಸ್ತೆಯಲ್ಲಿರುವ ಮೋತಿ ಬೇಕರಿ ಕಾರ್ಖಾನೆಗೆ ಭೇಟಿ ನೀಡಿ ವೀಕ್ಷಿಸಿದರು. ಅಲ್ಲಿ ಯಾವುದೇ ಬೇಕಿಂಗ್ ಕೆಲಸ ನಡೆಯುತ್ತಿರಲಿಲ್ಲ. ಅಲ್ಲಿದ್ದ ಕೆಲವು ಕಾರ್ಮಿಕರಿಗೂ ರಜೆ ಮೇಲೆ ತೆರಳುವಂತೆ ಹೇಳಿ, ಹಾಗೂ ಹೊರ ರಾಜ್ಯದಿಂದ ಬಂದವರಿಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದರು.