ಮೂಗಿಗೆ ತುಪ್ಪ ಸವರುತ್ತಿರುವ ಸರ್ಕಾರ: ಆಕ್ರೋಶ

426

ದಾವಣಗೆರೆ: ರಾಜದ್ಯಾಂತ ಹಲವಾರು ವರ್ಷಗಳಿಂದ ನ್ಯಾಯಯುತವಾದ ಬೇಡಿಕೆಗಳು ಈಡೇರಿಸುವಂತೆ ಎ ಹಂತಗಳಲ್ಲಿ ಹೋರಾಟ ನಡೆಸಿದರೂ ಸಹ ಸ್ಪಂದಿಸದೇ, ಸರ್ಕಾರದ ನೌಕರ ವಿರೋಧಿ ಧೋರಣೆ ಹಾಗೂ ಒಡೆದು ಆಳುವ ಪ್ರವೃತ್ತಿ ಮಾಡುತ್ತಿರುವುದು ವಿಷಾದನೀಯ ಎಂದು ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ ತಿಳಿಸಿದರು.
ಕೊರೋನಾ ವೈರಸ್ ಹಾವಳಿ ಸಂದರ್ಭದಲ್ಲಿಯೂ ಜೀವ ಪಣಕ್ಕಿಟ್ಟು, ಕೆಲಸ ಮಾಡಿದರೂ ಅಂತಹ ಬಡ ನೌಕರರ ಬೇಡಿಕೆಗಳಿಗೆ ಸ್ಪಂದಿಸದೇ ಇದ್ದದ್ದನ್ನು ಖಂಡಿಸಿದ ಆರೋಗ್ಯ ಮತ್ತು ವೈದ್ಯಕೀಯಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘದಿಂದ ನಡೆಸಲಾಗುತ್ತಿರುವ ಅಸಹಕಾರ ಚಳುವಳಿ ಆರು ದಿನ ಪೂರೈಸಿದ್ದು, ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಈಗಾಗಲೇ ಸೆ೨೪ರಿಂದ ಕೆಲಸ ಬಹಿಷ್ಕರಿಸಿ ಅನಿರ್ಧಷ್ಠಾವಧಿ ಮುಷ್ಕರಕ್ಕೆ ಕರೆಕೊಟ್ಟಿದ್ದು ಅದರಂತೆ ಎಲ್ಲರೂ ಮನೆಯಲ್ಲಿಯೇ ಇದ್ದು, ಶಾಂತಿಯುತವಾಗಿ ಬೇಡಿಕೆ ಈಡೇರಿಸುವವರೆಗೆ ಮುಷ್ಕರವನ್ನು ಮುಂದುವರೆಸಲಾಗುತ್ತಿದೆ. ಈ ಮೊದಲು ಬೇಡಿಕೆಗಳನ್ನು ಈಡೇರಿಸುತ್ತೆವೆ ಎಂದ ಸರ್ಕಾರ, ಈಗ ಮನವಹಿಸಿ ಜೊತೆಗೆ ಅಧಿಕಾರಿಗಳ ಮೂಲಕ ಮುಷ್ಕರ ನಿರತಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ವಿರುದ್ದ ಶಿಸ್ತುಕ್ರಮ ತೆಗೆದುಕೊಳ್ಳುವ ಬಗ್ಗೆ ನಿರ್ದೇಶನ ನೀಡಿದ್ದು ವಿಷಾದನೀಯ. ಈಗ ಸರ್ಕಾರವು ಹೆಚ್.ಆರ್. ಪಾಲಿಸಿಯನ್ನು ಅಂತಿಮಗೊಳಿಸಿ ವರದಿಯನ್ನು ನೀಡಲು ಮತ್ತೆ ಮೂರು ತಿಂಗಳು ಸಮಯ ಕೇಳಿದಕ್ಕೆ ನೌಕರರು ಆಕ್ರೊಶಗೊಂಡಿzರೆ.
ಈಗಾಗಲೇ ೩ತಿಂಗಳು ಗಡವು ಮುಗಿದರು ಕೂಡ ಮತ್ತೆ ೩ ತಿಂಗಳು ಸಮಯ ಕೇಳುತ್ತಿರುವುದು ನೌಕಕರ ಮೂಗಿಗೆ ತುಪ್ಪ ಸವರುತ್ತಿರುವ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಉಪಧ್ಯಾಕ್ಷ ಡಾ|ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಡಾ| ಅಂದಾನಗೌಡ ಪಾಟೀಲ್, ಖಜಂಚಿ ಅಂಬರೀಷ್, ಜಿ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಹಾಗೂ ಸದಸ್ಯರು ಹಾಜರಿದ್ದರು.