ಮಾ.೨೫ರೊಳಗೆ ವಾಟರ್ ಬಿಲ್ ಕಟ್ಟಿ..

330

ಶಿವಮೊಗ್ಗ: ಶಿವಮೊಗ್ಗ ಜಲಮಂಡಳಿಯು ನಗರ ಗ್ರಾಹಕರಿಗೆ ನೀರಿನ ಬಾಕಿ ಕಂದಾಯ ಹಾಗೂ ಪ್ರಸಕ್ತ ಸಾಲಿನ ಕಂದಾಯವನ್ನು ಮಾ.೨೫ರೊಳಗಾಗಿ ಪಾವತಿಸುವಂತೆ ಸೂಚಿಸಿದೆ.
ನೀರಿನ ಕಂದಾಯ ಪಾವತಿಸಲು ಬಾಕಿದಾರರು ಶಿವಮೊಗ್ಗ -೧ ಕೇಂದ್ರ, ಜಲಮಂಡಳಿ ಕಚೇರಿ ಹಾಗೂ ಮಹಾನಗರ ಪಾಲಿಕೆ ಆವರಣದಲ್ಲಿರುವ ಕ್ಯಾಷ್ ಕೌಂಟರ್ ಮತ್ತು ಕರ ವಸೂಲಿಗಾರರ ಮುಖಾಂತರ ಪಾವತಿಸುವುದು. ತಪ್ಪಿದಲ್ಲಿ ಕಾನೂನು ಪ್ರಕಾರ ಮಾ.೨೬ ರಿಂದ ನೀರು ಸರಬರಾಜು ನಳದ /ಒಳಚರಂಡಿ ಸಂಪರ್ಕವನ್ನು ಕಡಿತಗೊಳಿಸಲು ಕ್ರಮ ಕೈಗೊಳ್ಳಲಾ ಗುವುದು ಎಂದು ಕ.ನ.ನೀ.ಸ ಮತ್ತು ಒ.ಚ.ಮಂ. ಕಾರ್ಯಪಾಲಕ ಅಭಿಯಂತರರು ತಿಳಿಸಿರುತ್ತಾರೆ.