ಮಾ.೧೯: ಹಳದಮ್ಮದೇವಿ ರಥೋತ್ಸವ ಸರಳ ಆಚರಣೆ

424

(ಹೊಸ ನಾವಿಕ ನ್ಯೂಸ್)
ಹೊನ್ನಾಳಿ: ಕೋವಿಡ್-೧೯ರ ಎರಡನೇ ಅಲೆ ಭೀತಿಯ ಹಿನ್ನೆಲೆ ಯಲ್ಲಿ ತಾಲೂಕಿನ ಮಾರಿಕೊಪ್ಪ ಗ್ರಾಮದ ಶ್ರೀ ಹಳದಮ್ಮ ದೇವಿ ರಥೋತ್ಸವವನ್ನು ಮಾ.೧೯ರಂದು ಈ ಬಾರಿ ಸರಳವಾಗಿ ಆಚರಿಸಲಾಗು ವುದು ಎಂದು ತಹಸೀಲ್ದಾರ್ ಬಸನಗೌಡ ಕೋಟೂರ ಹೇಳಿದರು.
ಸರಕಾರ ರೂಪಿಸಿರುವ ಕೊರೊನಾ ಮಾರ್ಗಸೂಚಿಗಳನ್ವಯ ಭಕ್ತಾದಿಗಳು ಮುಂಜಗೃತಾ ಕಾರ್ಯಕ್ರಮಗಳನ್ನು ಕೈಗೊಂಡು ರಥೋತ್ಸವದಲ್ಲಿ ಭಾಗವಹಿಸಬೇಕು. ದೇವಸ್ಥಾನದ ಆವರಣದಲ್ಲಿ ಯಾವುದೇ ರೀತಿಯ ಅಂಗಡಿ-ಮಳಿಗೆಗಳನ್ನು ಹಾಕಲು ಅನುಮತಿ ಇಲ್ಲ. ಎಲ್ಲರೂ ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿzರೆ.