ಮಾಸ್ಕ್ ಧರಿಸದಿದ್ದರೆ-ಉಗುಳಿದರೆ ಪಾಲಿಕೆಯಿಂದ ಫೈನ್…

531

ಶಿವಮೊಗ್ಗ: ಮಾಸ್ಕ್ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವವರಿಗೆ ಹಾಗೂ ಉಗುಳುವವರಿಗೆ ಮಹಾನಗರ ಪಾಲಿಕೆ ದಂಡ ವಿಧಿಸುತ್ತಿದೆ.
ಇಂದಿನಿಂದ ದಂಡ ವಿಧಿಸುವ ಪ್ರಕ್ರಿಯೆ ಆರಂಭಿಸುವ ಮೂಲಕ ಮಾಸ್ಕ್ ಧರಿಸದೆ ನಿರ್ಲಕ್ಷಿಸಿದವರಿಗೆ ಪಾಲಿಕೆ ಖಡಕ್ ಎಚ್ಚರಿಕೆ ನೀಡಿದೆ.
ಮಾಸ್ಕ್ ಧರಿಸದೆ ತರಕಾರಿ, ದಿನಸಿ ಖರೀದಿಗೆ ಹೋಗುವವರಿಗೆ ಮತ್ತು ವಿವಿಧ ಅಂಗಡಿಗಳಿರುವ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಹೋಗು ವವರಿಗೆ ತಲಾ ೧೦೦ರೂ. ದಂಡ ಹಾಕಲಾಗುತ್ತಿದೆ.
ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ಬರೋಬ್ಬರಿ ೫೦೦ರೂ. ದಂಡ ವಿಧಿಸಲಾಗಿದೆ.
ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳು ಈ ದಂಡ ಹಾಕುವ ಕಾರ್ಯ ನಿರ್ವಹಿಸುತ್ತಿದ್ದು, ಸ್ಥಳದಲ್ಲೇ ರಶೀದಿ ನೀಡಿ ದಂಡದ ಹಣ ಪಡೆಯಲಾಗುತ್ತಿದೆ.
ಇಂದು ನಗರದ ವಿವಿಧೆಡೆ ಮಾಸ್ಕ್ಕ್ ಹಾಕದಿದ್ದವರಿಗೆ ದಂಡ ಹಾಕಿದ್ದು, ಕೆಲವರಿಗೆ ಉಗುಳಿದ್ದಕ್ಕೂ ದಂಡ ಬಿದ್ದಿದೆ. ಸಾರ್ವಜನಿಕರಲ್ಲಿ ಶಿಸ್ತು ಮೂಡಲಿ ಕರೋನ ಬಗ್ಗೆ ಎಚ್ಚರಿಕೆ ವಹಿಸಲಿ ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಾಲಿಕೆ ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್ ತಿಳಿಸಿದ್ದಾರೆ.