ಮಾಸ್ಕ್ ಧರಿಸದವರಿಗೆ ದಂಡದ ಬಿಸಿ ಮುಟ್ಟಿಸಿ ಕೊರೋನಾ ಜಾಗೃತಿ ಮೂಡಿಸಿದ ಪೊಲೀಸರು

295

ಹೊನ್ನಾಳಿ: ಕೊರೊನಾ ೨ನೇ ಅಲೆ ರಾಜದ್ಯಂತ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕಾರ್ಯಪ್ರವೃತ್ತವಾಗಿ ಪಟ್ಟಣದಲ್ಲಿ ಮಾಸ್ಕ್ ಧರಿಸದೇ ಓಡಾಡುತ್ತಿದ್ದ ಸಾರ್ವಜನಿಕರಿಗೆ ದಂಡ ಹಾಕಿ ಕೊರೊನಾ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿತು.
ಪಟ್ಟಣದ ಜನನಿಬಿಡ ಪ್ರದೇಶವಾದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪಿಎಸ್‌ಐ ಬಸನಗೌಡ ಬಿರಾದಾರ ನೇತೃತ್ವದಲ್ಲಿ ಮಾಸ್ಕ್ ಧರಿಸದ ಸಾರ್ವಜನಿಕರಿಗೆ ದಂಡ ವಿಧಿಸಿ ಕೊರೋನಾ ಸೊಂಕು ಕುರಿತು ಅರಿವು ಮೂಡಿಸಲಾಯಿತು.
ಯುವಕರೇ ಹೆಚ್ಚಿನ ಸಂಖ್ಯೆ ಯಲ್ಲಿ ಮಾಸ್ಕ್ ಧರಿಸದೇ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಯುವಕರನ್ನು ಕಂಡ ಪಿಎಸ್‌ಐ ಬಸನಗೌಡ ಬಿರಾದಾರ, ಯುವಕರು ಯಾವುದೇ ಕಾರಣಕ್ಕೂ ಮಾಸ್ಕ್ ಧರಿಸದೇ ಸಂಚರಿಸಬಾರದು ಎಂದು ಎಚ್ಚರಿಕೆ ನೀಡಿ ದಂಡ ವಸೂಲಿ ಮಾಡಿದರು.
೫೦ಕ್ಕೂ ಹೆಚ್ಚು ಜನರಿಗೆ ದಂಡ ಹಾಕಿ ಎಚ್ಚರಿಕೆ ನೀಡಲಾಯಿತು.