ಮಾರುತಿ ಕಾರು ಕಳವು: ಆರೋಪಿಗಳ ಸೆರೆ

678

ಹೊನ್ನಾಳಿ: ದಾವಣಗೆರೆ ಕೆಟಿಜೆ ನಗರ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಳವಾಗಿದ್ದ ಕಾರೊಂದನ್ನು ಹೊನ್ನಾಳಿ ಪೊಲೀಸರು ಸೋಮವಾರ ಪಟ್ಟಣದ ಟಿ.ಬಿ. ಸರ್ಕಲ್ ಬಳಿ ವಶಪಡಿಸಿ ಕೊಂಡಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿzರೆ.
ದಾವಣಗೆರೆ ವಿನೋಬನಗರದ ಸುಫಿಯಾನ್ ಖಾನ್(೨೨), ದಾವಣಗೆರೆ ದೇವರಾಜ್ ಅರಸ್ ಬಡಾವಣೆ ಸಮೀಪದ ಶಂಕರ ಲೇಔಟ್ ನಿವಾಸಿ ಎಂ.ಕೆ. ಅಲಿ(೨೫) ಬಂಧಿತ ಆರೋಪಿಗಳು. ಬಂಧಿv ರಿಂದ ೫೦ ಸಾವಿರ ರೂ.ಗಳಷ್ಟು ಮಲ್ಯದ ಮಾರುತಿ ೮೦೦ ಕಾರನ್ನು ಜಪ್ತಿ ಮಾಡಿzರೆ.
ಸೋಮವಾರ ಪಟ್ಟಣದ ಟಿ.ಬಿ. ಸರ್ಕಲ್ ಬಳಿ ಪಿಎಸ್ಸೈ ಬಸನಗೌಡ ಬಿರಾದಾರ ಮತ್ತು ಸಿಬ್ಬಂದಿ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಮಾರುತಿ ೮೦೦ ಕಾರನ್ನು ಪರಿಶೀಲಿಸಿದಾಗ ಅದು ಕಳವು ಮಾಡಲಾದ ವಾಹನ ಎಂಬುದು ಪತ್ತೆಯಾಗಿದೆ.
ಸಿಪಿಐ ಟಿ.ವಿ. ದೇವರಾಜ್ ನೇತತ್ವದಲ್ಲಿ ಪಿಎಸ್ಸೈ ಬಸನಗೌಡ ಬಿರಾದಾರ, ಎಎಸ್ಸೈ ಜಿ.ಎನ್. ಮಾಲತೇಶಪ್ಪ, ಸಿಬ್ಬಂದಿ ಫೈರೋಜ್ ಖಾನ್, ವೆಂಕಟರಮಣ, ಶಂಕರಗೌಡ, ರಾಮಚಂದ್ರ ಜಧವ್, ಶಾಂತಕುಮಾರ್, ಜಗದೀಶ್, ಚೇತನ್‌ಕುಮಾರ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿತ್ತು.