ಮಾನಸಿಕ ಆರೋಗ್ಯ ಮತ್ತು ಪರಿಣಾಮ ಕುರಿತು ಅರಿವು ಮೂಡಿಸುವ ಸಾಹಿತ್ಯ ರಚನೆಗೆ ಹೆಚ್ಚು ಒತ್ತು ನೀಡಬೇಕಿದೆ: ಡಾ| ವಿನಯಾ ಶ್ರೀನಿವಾಸ್

369

ಶಿವಮೆಗ್ಗ: ಮಾನಸಿಕ ಅನಾರೋಗ್ಯ ಮತ್ತು ಪರಿಣಾಮಗಳ ಬಗ್ಗೆ ಪ್ರತಿಯೊಬ್ಬರಲ್ಲಿ ಅರಿವು ಮೂಡಿಸುವ ಸಾಹಿತ್ಯ ಹೆಚ್ಚು ರಚನೆಯ ಅವಶ್ಯಕತೆ ಇದೆ ಎಂದು ಖ್ಯಾತ ವೈದ್ಯೆ ಡಾ|ವಿನಯಾ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ನಗರದ ಗೋಪಿಶೆಟ್ಟಿ ಕೊಪ್ಪದಲ್ಲಿರುವ ಚಾಲುಕ್ಯ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ದತ್ತಿಉಪನ್ಯಾಸ ಮತ್ತು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮನೋವಿeನ ಮತ್ತು ಸಾಹಿತ್ಯ ವಿಷಯ ಕುರಿತು ಉಪನ್ಯಾಸ ನೀಡಿದರು.
ಶರೀರಕ್ಕೆ ಆಗುವ ಆರೋಗ್ಯ ಸಮಸ್ಯೆಗಳನ್ನು ಶೀಘ್ರ ಗುರುತಿಸಿ ಪರಿಹರಿಸಿಕೊಳ್ಳಲು ಮುಂದಾಗುವುದು ಸಾಮಾನ್ಯ. ಆದರೆ ಮಾನಸಿಕ ಅನಾರೋಗ್ಯದ ಬಗ್ಗೆ ಬಹುತೇಕ ಜನರು ಗಮನ ಹರಿಸುವುದೇ ಇಲ್ಲ. ಕಾರಣ ಮನೋಸಮಸ್ಯೆಗಳ ಬಗ್ಗೆ ಇರುವ ತಿಳವಳಿಕೆಯ ಕೊರತೆ. ಆದ್ದರಿಂದ ಮನೋವಿeನದ ಬಗ್ಗೆ ತಿಳವಳಿಕೆ ಮೂಡಿಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.
ಕಲಿಕೆಯ ನೂನ್ಯತೆ, ಮಾದಕ ದ್ರವ್ಯ ಸೇವನೆ, ನಕರಾತ್ಮಕ ಚಿಂತನೆ, ಆತ್ಮಹತ್ಯೆಗೆತುಡಿತ ಸೇರಿದಂತೆ ಇತರೆ ವಿಷಯಗಳು ಮಾನಸಿಕ ಸಮಸ್ಯೆ ಆಗಿರುತ್ತದೆ. ಆದರೆ ಮಾನಸಿಕ ಸಮಸ್ಯೆಗಳನ್ನು ಗುರುತಿಸುವುದರಲ್ಲಿ ವಿಫಲರಾಗುತ್ತೇವೆ. ಮಾನಸಿಕ ಸಮಸ್ಯೆ ಗೊತ್ತಿದ್ದರೂ ಚಿಕಿತ್ಸೆ ಕೊಡಿಸುವುದಕ್ಕೆ ಹಿಂಜರಿಕೆ ಜಸ್ತಿ ಎಂದರು.
ಕನ್ನಡ ಸಾಹಿತ್ಯದಲ್ಲಿ ತ್ರಿವೇಣಿ, ಡಾ.ಎಂ. ಶಿವರಾಮಗೌಡ, ಡಾ. ಅನುಪಮಾ ನಿರಂಜನ, ಡಾ.ಸಿ.ಆರ್. ಚಂದ್ರಶೇಖರ, ಡಾ.ಅಶೋಕ್ ಪೈ, ಡಾ.ಕೆ.ಆರ್. ಶ್ರೀಧರ್ ಸೇರಿದಂತೆ ಅನೇಕ ಸಾಹಿತಿಗಳು ವಿಶೇಷವಾಗಿ ಮನೋವಿeನ, ಮಾನಸಿಕ ಸಮಸ್ಯೆಗಳ ಬಗ್ಗೆ ಸಾಹಿತ್ಯರಚನೆ ಮಾಡಿzರೆಎಂದು ಹೇಳಿದರು.
ಡಾ. ಅಶೋಕ ಪೈ ಅವರು ಮನೋವಿeನ ಸಾಹಿತ್ಯ ರಚನೆಯ ಜತೆಯಲ್ಲಿ ಹೆಚ್ಚು ಜನರಿಗೆ ಮಾನಸಿಕ ಸಮಸ್ಯೆಗಳ ಬಗ್ಗೆ ಜಗೃತಿ ಮೂಡಿಸಲು ದೃಶ್ಯ ಮಾಧ್ಯಮ ಹಾಗೂ ಸಿನಿಮಾದ ಮೂಲಕ ಮುಂದಾದರು. ವತ್ತಿಯ ಜತೆಯಲ್ಲಿ ಸಾಹಿತ್ಯ ಕ್ಷೇತ್ರಕ್ಕೂ ಮನೋವೈದ್ಯರು ಕೊಡುಗೆ ನೀಡುವ ಕೆಲಸ ಮಾಡಿzರೆ ಎಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ನಿವತ್ತ ಉಪನಿರ್ದೇಶಕ ಕೆ.ಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಹಿತ್ಯ ಅಧ್ಯಯನ ಮನುಷ್ಯನ ಮನಸ್ಸಿನಲ್ಲಿ ಸಕರಾತ್ಮಕ ಚಿಂತನೆ ಬೆಳೆಸುವಲ್ಲಿ ಉತ್ತಮ ಪರಿಣಾಮ ಬೀರುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ಸಾಹಿತ್ಯ ಅಧ್ಯಯನ, ಕೇಳುವಿಕೆ ಹಾಗೂ ಬರೆಯುವಿಕೆಯಲ್ಲಿ ತೊಡಗಿಸಿಕೊಂಡಲ್ಲಿ ಜೀವನದಲ್ಲಿ ಅತ್ಯಮೂಲ್ಯ ಧನಾತ್ಮಕ ಬದಲಾವಣೆ ಆಗುವುದು ನಿಶ್ಚಿತ ಎಂದು ಅಭಿಪ್ರಾಯಪಟ್ಟರು.
ಸಾಹಿತಿ ಎಂ.ಎನ್. ಸುಂದರರಾಜ್ ಅವರು ಡಿ.ವಿ. ಗುಂಡಪ್ಪನವರ ಸಾಹಿತ್ಯ ಕುರಿತು ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಡಿ.ವಿ.ಗುಂಡಪ್ಪನವರ ಕೊಡುಗೆ ಅಪಾರ. ಡಿವಿಜಿಎಂದೇ ನಾಡಿನಾದ್ಯಂತ ಚಿರಪರಿತರಾಗಿರುವ ಗುಂಡಪ್ಪನವರ ಸಾಹಿತ್ಯವು ಜೀವನಕ್ಕೆ ಮಾರ್ಗದರ್ಶನ ಆಗಬಲ್ಲವು. ಮಂಕುತಿಮ್ಮನ ಕಗ್ಗ ಕೃತಿಯು ಕನ್ನಡದ ಭಗವದ್ಗೀತೆಯ ಸ್ವರೂಪ. ಮಂಕುತಿಮ್ಮನ ಕಗ್ಗದಲ್ಲಿ ಎಲ್ಲ ರೀತಿಯಲ್ಲಿಯೂ ಜೀವನ ಸಂದೇಶಗಳಿವೆ. ಡಿವಿಜಿಯವರ ಸಾಹಿತ್ಯ ಕೃತಿಗಳ ಅಧ್ಯಯನ ಪ್ರತಿಯೊಬ್ಬರು ಮಾಡಬೇಕು ಎಂದು ತಿಳಿಸಿದರು.
ಜಿ ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಗೋಪಜ್ಜಿ ನಾಗಪ್ಪ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ. ಎಚ್.ಎಸ್. ರುದ್ರೇಶ್ ಅವರು ವೈದ್ಯಕೀಯ ಸಾಹಿತ್ಯ ಕುರಿತು ಉಪನ್ಯಾಸ ನೀಡಿದರು. ದತ್ತಿಉಪನ್ಯಾಸದ ನಂತರ ಮಾನಸ ಶಿವರಾಮಕೃಷ್ಣ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ೨೦ಕ್ಕೂ ಹೆಚ್ಚು ಜನರು ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದರು.
ಮನೋವೈದ್ಯೆ ಡಾ.ರಜನಿ ಪೈ, ಜಿ ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಮಧು ಗಣಪತಿರಾವ್ ಮಡೆನೂರು, ಕೆ.ಬಸವನಗೌಡರು, ತಾಲೂಕು ಕಸಾಪ ಕಾರ್ಯದರ್ಶಿ ಜಿ.ಎಸ್.ಅನಂತ, ಚನ್ನಬಸಪ್ಪ ನ್ಯಾಮತಿ, ಹಸನ್ ಬೆಳ್ಳಿಗನೂಡು ಮತ್ತಿತರರು ಉಪಸ್ಥಿತರಿದ್ದರು.