ಮಾನವ ಹಕ್ಕು ಆಯೋಗದ ಶಿಫಾರಸ್ಸು ಅನುಷ್ಠಾನಕ್ಕೆ ಆಗ್ರಹ

293

ಶಿವಮೊಗ್ಗ : ಮಾನವ ಹಕ್ಕುಗಳ ಆಯೋಗ ಪ್ರಸಕ್ತ ವರ್ಷದ ಶಾಲೆಗಳ ಆರಂಭ ಹಾಗೂ ಕಲಿಕೆಯ ಬಗ್ಗೆ ನೀಡಿರುವ ಶಿಫಾರಸನ್ನು ಅನುಷ್ಠಾನ ಗೊಳಿಸಬೇಕು ಎಂದು ಮಾನವ ಹಕ್ಕುಗಳ ಕಮಿಟಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಪ್ರಸಕ್ತ ಸಾಲಿನ ಕಲಿಕೆಯನ್ನು ಪರೀಕ್ಷಾ ರಹಿತ ಕಲಿಕಾ ವರ್ಷವೆಂದು ಘೋಷಿಸ ಬೇಕು. ೩೦ಕ್ಕಿಂತ ಕಡಿಮೆ ಮಕ್ಕಳಿರುವ ಸರ್ಕಾರಿ ಕಿರಿಯ ಹಾಗೂ ಹಿರಿಯ ಶಾಲೆಗಳನ್ನು ಕೂಡಲೇ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಮೊದಲ ೧೫ ದಿನ ಅರ್ಧ ದಿನದ ಮಟ್ಟಿಗೆ ಶಾಲೆಗಳು ಕರ್ತವ್ಯ ನಿರ್ವಹಿಸಬೇಕು ಎಂದು ಆಯೋಗ ಸರ್ಕಾರಕ್ಕೆ ಮಾಡಿರುವ ಶಿಫಾರಸನ್ನು ಅಂಗೀಕರಿಸುವಂತೆ ಆಗ್ರಹಿಸಿ ಸರ್ಕಾರ ಶಾಲೆಗಳನ್ನು ಆರಂಭಿಸಬೇಕು ಎಂದು ಜಿಲ್ಲಾ ಆಡಳಿತದ ಮೂಲಕ ಸಿಎಂರನ್ನು ಒತ್ತಾಯಿಸಿದೆ.
ಮಕ್ಕಳು ಹೆಚ್ಚಿನ ರೋಗನಿರೋಧಕ ಶಕ್ತಿ ಹೊಂದಿರುತ್ತಾರೆ ಎಂದಿರುವ ಆಯೋಗದ ಅಭಿಪ್ರಾಯವನ್ನು ಮನ್ನಿಸಿ ಸರ್ಕಾರವು ಶಾಲೆಗಳ ಆರಂಭಕ್ಕೆ ಮುಂದಾಗಬೇಕು. ಪಾಳಿ ವ್ಯವಸ್ಥೆ ಜರಿಗೆ ತರಬೇಕು. ೧೧ ವರ್ಷ ದಾಟಿದ ಮಕ್ಕಳಿಗೆ ಕಡ್ಡಾಯವಾಗಿ ಗುಣಮಟ್ಟದ ಆಹಾರ ಒದಗಿಸಬೇಕು. ಮಕ್ಕಳಿಗೆ ರೋಗ ನಿರೋಧಕ ಮಾತ್ರೆಗಳನ್ನು ನೀಡಬೇಕು. ಶಿಕ್ಷಕರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸುವಂತೆ ಕೋರಿದರು. ಕಮಿಟಿಯ ರಾಜ್ಯಾಧ್ಯಕ್ಷ ಕೆ. ನಾಗರಾಜ್, ಜಿಲ್ಲಾ ಪ್ರಮುಖರಾದ ದಯಾನಂದ್, ಅಣ್ಣಪ್ಪ, ರಮೇಶ್, ವಿನೋದ್ ಹಾಗೂ ಇತರರಿದ್ದರು.