ಮಾಧ್ಯಮಗಳ ಮೇಲೆ ಸರ್ಕಾರದ ದಬ್ಬಾಳಿಕೆ:ಆಮ್ ಆದ್ಮಿಪಕ್ಷ ಆಕ್ರೋಶ

469

ಶಿವಮೊಗ್ಗ: ಪವರ್ ಟಿವಿ ಮೇಲೆ ಸಿಸಿಬಿ ಪೊಲೀಸರನ್ನು ಛೂ ಬಿಟ್ಟು ಸರ್ವಾಧಿಕಾರ ತೋರುತ್ತಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.
ಮುಖ್ಯಮಂತ್ರಿಗಳ ಪುತ್ರ ವಿಜಯೇಂದ್ರ ಅವರ ಮೇಲೆ ಇರುವ ಸಾಕಷ್ಟು ಆರೋಪಗಳಿಗೆ ಸಾಕ್ಷ್ಯ ಒದಗಿಸಿದ ಹಾಗೂ ಅವರ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ ಕಾರಣಕ್ಕೆ ಪವರ್ ಟಿವಿ ಸುದ್ದಿ ವಾಹಿನಿಯ ಮುಖ್ಯಸ್ಥರ ಮನೆಯ ಮೇಲೆ ನಡೆದ ಪೊಲೀಸ್ ದಾಳಿ ಸರ್ಕಾರದ ಸರ್ವಾಧಿಕಾರಿತನವವನ್ನು ತೋರಿಸುತ್ತದೆ ಎಂದು ಆಮ್ ಆದ್ಮಿ ಪಕ್ಷ ಅಗ್ರಹಿಸಿದೆ.
ಕರ್ನಾಟಕದದಲ್ಲಿ ಇಬ್ಬರು ಮುಖ್ಯಮಂತ್ರಿಗಳಿzರೆ ಒಂದು ಯಡಿಯೂರಪ್ಪ ಅವರು ಮತ್ತೊಬ್ಬರು ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ. ಸೂಪರ್ ಸಿಎಂ ಆಗಿ ಮೆರೆಯುತ್ತಿರುವ ವಿಜಯೇಂದ್ರ ಸರ್ಕಾರದ ಆಡಳಿತದ ವಿಚಾರದಲ್ಲೂ ಮೂಗು ತೂರಿಸಿ ಮುಜುಗರ ತರುವಂತಹ ಅನೇಕ ಕೆಲಸಗಳನ್ನು ಮಾಡುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ
ಇದನ್ನು ಜನತೆಗೆ ತಿಳಿಸುವುದು ಸಂವಿಧಾನದ ನಾಲ್ಕನೇ ಅಂಗವಾದ ಮಾಧ್ಯಮದ ಜವಾಬ್ದಾರಿ. ಇಂತಹ ಮಾಧ್ಯಮದ ಮೇಲೆ ದಾಳಿ ನಡೆಸಿ ಹೆದರಿಸುವ ಕ್ರೂರ ನಡೆಯನ್ನು ಸರ್ಕಾರ ಮಾಡಿರುವುದನ್ನ ಆಮ್ ಆದ್ಮಿ ಪಕ್ಷದ ಜಿಧ್ಯಕ್ಷ ಹೆಚ್. ರವಿ ಕುಮಾರ್ ತೀವ್ರವಾಗಿ ಖಂಡಿಸುತ್ತಾರೆ.
ಮುಖ್ಯಮಂತ್ರಿಗಳಿಗೆ ತಮ್ಮ ಮಗನ ಮೇಲೆ ಭರವಸೆ ಇದ್ದರೆ ಈ ಕೂಡಲೇ ವಿಜಯೇಂದ್ರ ಅವರ ಮೇಲಿರುವ ಆರೋಪಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲಿ. ಇದೇ ರೀತಿ ಪವರ್ ಟಿವಿ ಮಾಧ್ಯಮ ಮುಖ್ಯಸ್ಥರ , ಅಧಿಕಾರಿಗಳು ಹಾಗೂ ಗುತ್ತಿಗೆದಾರರುಗಳ ಮೇಲೆ ಮೇಲಿರುವ ಆಪಾದನೆಗಳ ಬಗ್ಗೆ ಕಾನೂನಾತ್ಮಕವಾಗಿ ಕ್ರಮಗಳನ್ನು ಕೈಗೊಳ್ಳಲಿ. ಎಲ್ಲರೂ ಸಹ ಸಮಗ್ರ ವಿಚಾರಣೆಗೆ ಒಳಪಟ್ಟು ಸತ್ಯವನ್ನ ಈ ರಾಜ್ಯದ ಜನತೆ ಮುಂದೆ ಇಡಲಿ. ಅದನ್ನು ಬಿಟ್ಟು ದಮನಕಾರಿ ನೀತಿಯನ್ನು ಅನುಸರಿಸುವುದು ಸಿಎಂ ಯಡಿಯೂರಪ್ಪನವರ ಘನತೆಗೆ ತಕ್ಕುದಾದ ಶೋಭೆಯಲ್ಲ ಎಂದು ರವಿಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿzರೆ.