ಮಾದಕ ವಸ್ತು ಮಾರಾಟ ಜಾಲ ವಿರುದ್ಧ ಎಬಿವಿಪಿ ಸಹಿ ಸಂಗ್ರಹ ಅಭಿಯಾನ

438

ಶಿವಮೊಗ್ಗ: ಮಾದಕ ವಸ್ತುಗಳು ಸಮಾಜದ ಆರೋಗ್ಯಕ್ಕೆ ಹಾನಿಕಾರಕ ಹಾಗೂ ಇಂದಿನ ಯುವ ಪೀಳಿಗೆಯನ್ನು ದಾರಿತಪ್ಪಿಸುತ್ತಿವೆ. ಈ ನಿಮಿತ್ತ ಮಾದಕ ವಸ್ತು ಸಂಗ್ರಹಕಾರರ ವಿರುದ್ದ ಎಬಿವಿಪಿಯಿಂದ ನಗರದ ಶಿವಪ್ಪನಾಯಕ ವೃತ್ತದಲ್ಲಿ ಇಂದು ಸಹಿಸಂಗ್ರಹ ಅಭಿಯಾನ ನಡೆಸಲಾಯಿತು.
ಪೇಟೆ ಠಾಣೆ ಸಿಪಿಐ ವಸಂತ ಕುಮಾರ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಯುವಕರು ಮಾದಕ ವಸ್ತುಗಳಿಂದ ದೂರ ಇರಬೇಕು ತಮ್ಮ ಸುತ್ತಮುತ್ತಲಿನ ಸ್ಥಳಗಳಲ್ಲಿ ಮಾದಕ ವಸ್ತು ಮಾರಾಟ, ಸೇವನೆ, ಸಂಗ್ರಹ ಕಂಡುಬಂದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕೆಂದು ಹೇಳಿದರು.
ಮಾದಕ ವಸ್ತುಗಳ ನಿರ್ಮೂಲನೆ ಗಾಗಿ ಪೊಲೀಸ್ ಇಲಾಖೆಯಿಂದ ಎಲ್ಲ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರು, ಯುವಕರು ಕೈಜೋಡಿಸಬೇಕು ಎಂದರು.
ಹೆಚ್ಚಾಗಿ ಯುವಕರು ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವುದು ಅಘಾತಕಾರಿ ಸಂಗತಿಯಾಗಿದೆ. ಇಂತಹ ವ್ಯಸನಗಳಿಂದ ಯುವಕರು ದೂರ ಇರಬೇಕು. ಶಿಕ್ಷಣ ಇತರೆ ಚಟುವಟಿಕೆಗಳತ್ತ ಗಮನಹರಿಸ ಬೇಕು. ಮಾದಕ ವಸ್ತುಗಳ ಬಗ್ಗೆ ಮಾಹಿತಿ ದೊರೆತಲ್ಲಿ ತಿಳಿಸಬೇಕು ಎಂದು ಸಲಹೆ ನೀಡಿದರು.
ಮಾದಕ ವಸ್ತುಗಳ ದಂಧೆಯಲ್ಲಿ ಭಾಗಿಯಾದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಭಾವಿ ವ್ಯಕ್ತಿಗಳು ನಟ, ನಟಿಯರು ಭಾಗಿಯಾಗಿರು ವುದು ಪೊಲೀಸರ ತನಿಖೆಯಲ್ಲಿ ಹೊರಬಂದಿದ್ದು, ಈ ಜಾಲದಲ್ಲಿ ಭಾಗಿಯಾದವರ ವಿರುದ್ದ ಕ್ರಮ ಕೈಗೊಳ್ಳಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡಬೇಕು ಎಂದು ಒತ್ತಾಯಿಸಿ ಎಬಿವಿಪಿಯಿಂದ ಸಹಿಸಂಗ್ರಹ ಅಭಿಯಾನ ನಡೆಸಲಾಯಿತು.
ಪ್ರಮುಖರಾದ ಎಲ್.ಜಿ. ಅರವಿಂದ, ಪ್ರಜ್ವಲ್, ಕುಮಾರ ಸ್ವಾಮಿ, ನಿರಂಜನ್, ರಘುವೀರ್, ಯೊಗೀಶ್ ಇನ್ನಿತರರಿದ್ದರು.