ಮಾಜಿ ಶಾಸಕ ಶಾಂತನಗೌಡರ ೭೪ನೇ ಜನ್ಮದಿನ ನಿಮಿತ್ತ ರಕ್ತದಾನ …

52

ಹೊನ್ನಾಳಿ: ರಾಜಕೀಯ ಕ್ಷೇತ್ರದಲ್ಲಿರುವವರು ಸೇವಾ ಮನೋಭಾವನೆ ಮೈಗೂಡಿಸಿ ಕೊಳ್ಳಬೇಕು ಎಂದು ಹೊನ್ನಾಳಿಯ ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ಶ್ರೀ ಶಂಕರ್ ರೈಸ್‌ಮಿಲ್ಸ್ ಆವರಣದಲ್ಲಿ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಅವರ ಹುಟ್ಟುಹಬ್ಬದ ಪ್ರಯುಕ್ತ ನಡೆದ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಅವರು ಹಿರಿಯ ರಾಜಕಾರಣಿಯಾಗಿದ್ದು, ಸರಳ- ಸಜ್ಜನಿಕೆಯ ಪ್ರತಿರೂಪದಂತಿzರೆ. ಅವರ ರಾಜಕೀಯ ಜೀವನ ಇನ್ನಷ್ಟು ಉಜ್ವಲವಾಗಲಿ ಎಂದು ಹಾರೈಸಿದರು.


ಡಿ.ಜಿ. ಶಾಂತನಗೌಡ ಅವರು ಶಾಸಕರಾದ ಸಂದರ್ಭದಲ್ಲಿ ಉತ್ತಮ ಜನಸೇವೆ ಮಾಡಿzರೆ. ಅವರ ಸೇವಾ ಮನೋಭಾವ ಅನುಪಮವಾದುದು. ಮುಂದಿನ ದಿನಗಳಲ್ಲಿ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಅವರಿಂದ ಮತ್ತಷ್ಟು ಕೆಲಸಗಳು ಆಗಲಿ ಎಂದು ಹಾರೈಸಿದರು.
೭೪ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ರಾಜಕೀಯ ಮುಖಂಡರು, ತಮ್ಮ ಅಸಂಖ್ಯ ಅಭಿಮಾನಿಗಳ ಮಧ್ಯೆ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಕೆಪಿಸಿಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಚ್.ಎ. ಉಮಾಪತಿ, ಜಿಪಂ ಮಾಜಿ ಅಧ್ಯಕ್ಷ ಆರ್. ನಾಗಪ್ಪ, ಮಾಜಿ ಸದಸ್ಯರಾದ ಎಂ. ರಮೇಶ್, ದೊಡ್ಡೇರಿ ಡಿ.ಜಿ. ವಿಶ್ವನಾಥ್, ಎಪಿಎಂಸಿ ನಿರ್ದೇಶಕರಾದ ದಿಡಗೂರು ಎ.ಜಿ. ಪ್ರಕಾಶ್, ಮಾದೇನಹಳ್ಳಿ ಸೋಮಶೇಖರ್, ಮುಖಂಡರಾದ ಜಿ.ಪಿ. ವರದರಾಜಪ್ಪಗೌಡ, ಬಿ. ಸಿದ್ಧಪ್ಪ, ಡಾ.ಎಲ್. ಈಶ್ವರ ನಾಯ್ಕ, ಡಿ.ಎಸ್. ಪ್ರದೀಪ್, ಡಿ.ಎಸ್. ಸುರೇಂದ್ರ, ತರಗನಹಳ್ಳಿ ಟಿ.ಜಿ. ರಮೇಶ್‌ಗೌಡ, ಅರಕೆರೆ ಎಸ್.ಜಿ. ಮಧುಗೌಡ, ಎ.ಎಲ್. ಅಮಿತ್ ಇತರರು ಇದ್ದರು.ಹೊನ್ನಾಳಿ-ನ್ಯಾಮತಿ ತಾಲೂಕುಗಳ ವಿವಿಧ ಗ್ರಾಮ ಗಳಿಂದ ಸಹಸ್ರಾರು ಅಭಿಮಾನಿಗಳು ಆಗಮಿಸಿ, ಶುಭಕೋರಿದರು.ಇದೇ ಸಂದರ್ಭದಲ್ಲಿ ಡಿ.ಜಿ. ಶಾಂತನಗೌಡ ಅವರ ೭೪ನೇ ಹುಟ್ಟುಹಬ್ಬದ ಪ್ರಯುಕ್ತ ೭೪ ಜನರು ರಕ್ತದಾನ ಮಾಡಿದರು. ನೂರಾರು ಜನರ ಆರೋಗ್ಯ ತಪಾಸಣೆ ಮಾಡಲಾಯಿತು.