ಮಹಾಮಾರಿ ಕೊರೋನಾ ನಿವಾರಣೆ – ಲೋಕ ಕಲ್ಯಾಣಾರ್ಥ ವಿಶೇಷ ಪೂಜೆ

438

ಭದ್ರಾವತಿ: ಹಳೇ ನಗರದ ವೀರಶೈವ ಸೇವಾ ಸಮಿತಿ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಕೋಟೆ ಏರಿಯಾದಲ್ಲಿರುವ ಶ್ರೀ ಕೋಟೆ ಬಸವಣ್ಣ ದೇವಸ್ಥಾನ, ತಾಲ್ಲೂಕು ಕಚೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನಗಳಲ್ಲಿ ದೇಶದಲ್ಲಿ ಆವರಿಸಿರುವ ಕರೋನ ಖಾಯಿಲೆ ನಿವಾರಣೆಯಾಗುವುದು ಹಾಗು ಲೋಕ ಕಲ್ಯಾಣಾರ್ಥ ರುದ್ರಾಭಿಷೇಕ ವಿಶೇಷ ಪೂಜೆಯನ್ನು ತರೀಕೆರೆ ಹಿರೇಮಠದ ಶ್ರೀಷ.ಬ್ರ.ಜಗದೀಶ್ವರ ಶಿವಾಚಾರ್ಯ ಸ್ವಾಮಿಗಳವರ ನೇತತ್ವದಲ್ಲಿ ನಡೆಸಿದರು. ಇದೇ ಸಂಧರ್ಭದಲ್ಲಿ ಕಂಚಿ ಬಾಗೀಲು ಬಳಿ ಇರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲೂ ಸಹ ಪೂಜೆ ನಡೆಸಲಾಯಿತು.
ದೇವಾಲಯದ ಅರ್ಚಕರುಗಳಾದ ವೇ.ವಿಶ್ವನಾಥಯ್ಯ, ವೇ. ಚಿನ್ನಯ್ಯ ಹಿರೇಮಠ್, ವೇ.ಶಂಕ್ರಯ್ಯ ಶಾಹಿರೇಮಠ್, ಸಮಿತಿಯ ಅಧ್ಯಕ್ಷ ಆರ್.ಮಹೇಶ್ ಕುಮಾರ್, ಪದಾಧಿಕಾರಿಗಳಾದ ಚನ್ನೇಶ್ ಕುಮಾರ್, ನಿರಂಜನ್ (ದೀಪು), ವೇ. ವಾಗೀಶಯ್ಯ, ಚಂದ್ರಪ್ಪ, ಎಂ.ವಾಗೀಶ್ ಕೋಠಿ, ಬಾಸೀಂಗ ರುದ್ರಪ್ಪ ಇನ್ನಿತರರಿದ್ದರು.