ಮಸೀದಿಗೆ ಬರಬೇಡಿ; ಮನೆಯಲ್ಲೇ ಪ್ರಾರ್ಥಿಸಿ

557

ಶಿವಮೊಗ್ಗ: ಕೊರೋನಾ ಹಿನ್ನೆಲೆಯಲ್ಲಿ ರಂಜನ್ ತಿಂಗಳಿನಲ್ಲಿ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆ ಸೇರಿದಂತೆ ದೈನಂದಿನ ಸಾಮೂಹಿಕ ಪ್ರಾರ್ಥನೆ ನಿರ್ಬಂಧಿಸಿದ್ದು, ಮನೆಯಲ್ಲಿಯೇ ಇದ್ದು ಎಲ್ಲಾ ರೀತಿಯ ಪ್ರಾರ್ಥನೆ/ನಮಾಜ್ ನಿರ್ವಹಿಸುವಂತೆ ಜಿಲ್ಲಾ ವಕ್ಫ್ ಸಲಹಾ ಸಮಿತಿ ಮನವಿ ಮಾಡಿದೆ.
ಪವಿತ್ರ ರಂಜನ್ ತಿಂಗಳ ಉಪವಾಸ ಆಚರಣೆಗೆ ಸಂಬಂಧಪಟ್ಟಂತೆ ಇಫ್ತಾರ್ ಕೂಟ ಏರ್ಪಡಿಸುವುದಾಗಲೀ, ಮಸೀದಿ ಸುತ್ತ ಮುತ್ತ ಆಹಾರ ಪದಾರ್ಥಗಳ ಅಂಗಡಿಗಳನ್ನು ತೆರೆಯುವುದಾಗಲೀ ಮತ್ತು ಯುವಕರು ರಾತ್ರಿ ರಸ್ತೆ, ಬೀದಿ, ಮೊಹಲ್ಲಾ ಹಾಗೂ ವೃತ್ತಗಳಲ್ಲಿ ಅನಾವಶ್ಯಕವಾಗಿ ಓಡಾಡುವುದು ಮತ್ತು ಸಾಮಾಜಿಕ ಜಲತಾಣಗಳಲ್ಲಿ ಸುಳ್ಳು ಸುದ್ಧಿಗಳನ್ನು ಪ್ರಸಾರ ಮಾಡಬಾರದು.
ಸರ್ಕಾರ, ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ನೀಡಿರುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಿ ಶಾಂತಿಯುತವಾಗಿ ರಂಜನ್ ಮಾಸಾಚರಣೆಯನ್ನು ಮಾಡಲು ಸಮಿತಿ ಅಧ್ಯಕ್ಷ ಹಬೀಬುಲ್ಲಾ.ಬಿ. ಅವರು ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿದ್ದಾರೆ.