ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಗೊಳಗಾದ ಸೇತುವೆ ಸರಿಪಡಿಸಲು ಸೂಚಿಸಿದ ಡಿಸಿ ಮಹಾಂತೇಶ್ ಬಿಳಗಿ

467

ಹರಿಹರ: ಜಿಧಿಕಾರಿ ಮಹಾಂತೇಶ ಬೀಳಗಿ ಇವರು ಹರಿಹರ ತಾಲ್ಲೂಕಿನ ಬೆಳ್ಳೊಡಿ ಮತ್ತು ರಾಮತೀರ್ಥ ಗ್ರಾಮಗಳ ನಡುವೆ ಮಳೆ ಹಾನಿಯಿಂದ ಕೊಚ್ಚಿ ಹೋಗಿದ ಸೇತುವೆಯನ್ನು ವೀಕ್ಷಣೆ ಮಾಡಿ ಕೂಡಲೇ ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು .
ಕಳೆದ ವರ್ಷವೂ ಸಹ ಭಾರಿ ಮಳೆಯಿಂದ ಈ ಸೇತುವೆ ಕೊಚ್ಚಿ ಹೋಗಿತ್ತು. ಅಂದು ಸಹ ಜಿಧಿಕಾರಿ ಗಳು ಭೇಟಿ ನೀಡಿ ಸರಿಪಡಿಸುವಂತೆ ಸೂಚನೆ ನೀಡಿದ್ದರು. ಆದರೆ ಸಮರ್ಪಕವಾದ ಕೆಲಸ ಮಾತ್ರ ಆಗಿರಲಿಲ್ಲ. ಈ ಬಾರಿಯೂ ಜಿಧಿಕಾರಿಗಳು ಬಂದು ವೀಕ್ಷಣೆ ಮಾಡಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ ಹೋಗುತ್ತಾರೆ. ಮತ್ತೆ ಮುಂದಿನ ವರ್ಷ ಇದೇ ರೀತಿ ಬಂದು ಸೂಚನೆ ನೀಡುತ್ತಲೇ ಇರುತ್ತಾರೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಸಮರ್ಪಕ ಮತ್ತು ಶಾಶ್ವತವಾದ ಕೆಲಸ ಮಾತ್ರ ಇದುವರೆಗೂ ಆಗದೇ ಇರುವುದು ಕಂಡು ಅಕ್ಕಪಕ್ಕದ ಗ್ರಾಮಸ್ಥರು ಅಸಮಾಧಾನ ಹೊಂದಿzರೆ . ಜಿಧಿಕಾರಿಗಳ ಸಲಹೆ-ಸೂಚನೆಗಳನ್ನು ತಾಲ್ಲೂಕಿನ ಅಧಿಕಾರಿಗಳು ಎಷ್ಟರ ಮಟ್ಟಿಗೆ ಪ್ರಾಮಾಣಿಕವಾಗಿ ಪರಿಪಾಲನೆ ಮಾಡುತ್ತಿzರೆ ಎಂಬುವುದಕ್ಕೆ ಇದಕ್ಕಿಂತ ಒಳ್ಳೆಯ ನಿರ್ದೇಶನ ಬೇಕೇ ಎಂದು ಪ್ರಶ್ನಿಸಿದ್ದಾರೆ.
ಪ್ರತಿ ಬಾರಿಯೂ ಮಳೆಗಾಲದ ಸಂದರ್ಭದಲ್ಲಿ ಬೆಳ್ಳೂಡಿ- ರಾಮತೀರ್ಥ ರಸ್ತೆ ಕೊಚ್ಚಿಕೊಂಡು ಹೋಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಜರುಗಿಸುವುದು ಅನಿವಾರ್ಯವಾಗಿದೆ.
ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಈ ಬಾರಿಯಾದರೂ ರಾಮತೀರ್ಥ-ಬೆಳ್ಳೊಡಿ ಸೇತುವೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತಾರೆ ಕಾದು ನೋಡಬೇಕಾಗಿದೆ ಎಂದು ಅಲ್ಲಿನ ಗ್ರಾಮಸ್ಥರು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.