ಮಲೆನಾಡ ತಿರುಪತಿ: ಬೆಟ್ಟದ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಸ್ಥಾನ

229

ಲೇಖನ: ಹೆಚ್.ಸಿ. ಮುರುಳೀಧರ್
ಕಲ್ಯಾಣಾಧ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ ಶ್ರೀಮದ್ ವೆಂಕಟನಾಥಾಯ ಶ್ರೀನಿವಾಸಾಯತೇ ನಮಃ ||
ಶಿವಮೊಗ್ಗ ನಗರದ ಸವಳಂಗ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಸ್ಥಾನವು ಶಿವಮೆಗ್ಗ ಜಿಯಲ್ಲದೇ ಹೊರ ಜಿಯ ಹಾಗೂ ರಾಜ್ಯದ ಭಕ್ತಾದಿಗಳನ್ನು ತನ್ನ ವಿಶೇಷ ಶಕ್ತಿಯಿಂದ ತನ್ನತ್ತ ಸೆಳೆಯುವಂತೆ ಮಾಡಿದೆ. ಸುಮಾರು ೬೦ ವರ್ಷಗಳ ಇತಿಹಾಸ ಹೊಂದಿರುವ ಈ ದೇವಸ್ಥಾನವು ಮೂಲತಃ ಚಿತ್ರದುರ್ಗ ಜಿಯವರಾದ ಶ್ರೀ ವೀರದಾಸರ ಅಮತಹಸ್ತದಿಂದ ಸ್ಥಾಪಿತವಾಯಿತು.
ವೀರದಾಸರು : ವೀರದಾಸರು ಹೊಟ್ಟೆಪಾಡಿಗಾಗಿ ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಬಂದು ಚಾನಲ್ ಕಾಮಗಾರಿ ಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ತಮ್ಮೊಂದಿಗೆ ಕೆಲಸ ಮಾಡುವ ಕೆಲವು ವ್ಯಕ್ತಿಗಳ ಜೀವನದಲ್ಲಿ ಕಷ್ಟ ಕಾರ್ಪಣ್ಯ ಗಳು, ಸಾವು ನೋವುಗಳು ಸೇರಿದಂತೆ ಹಲವು ತೊಂದರೆಗಳನ್ನು ಅನುಭವಿಸುತ್ತಿ ದ್ದರು. ಹಾಗೆಯೇ ಅವರುಗಳು ಇದರಿಂದ ಪಾರಾಗಲು ಹರಸಾಹಸ ಪಡುತ್ತಿದ್ದರು. ಈ ಸಂದರ್ಭದಲ್ಲಿ ಅದನ್ನು ನೋಡಿ ಅವರಿಗೆ ಜೀವನದಲ್ಲಿ ಜಿಗುಪ್ಸೆ ಬಂದು ಸನ್ಯಾಸತ್ವವನ್ನು ಸ್ವೀಕಾರ ಮಾಡಿ, ಕಾಲ್ನಡಿಗೆಯಲ್ಲಿ ತಿರುಪತಿಗೆ ತಿಮ್ಮಪ್ಪನ ದರ್ಶನ ಮಾಡಲು ಹೋದರು. ತಿಮ್ಮಪ್ಪನ ದರ್ಶನದಿಂದ ವೀರದಾಸರ ಮನಸ್ಸು ತೃಪ್ತವಾಗಲಿಲ್ಲ. ಕಾರಣ ಅಲ್ಲಿಯ ಸಿಬ್ಬಂದಿಗಳು ವೀರದಾಸರಿಗೆ ಕೆಲವೇ ಕ್ಷಣಗಳ ದೇವರ ದರ್ಶನ ಮಾಡಿಸಿ, ಅಲ್ಲಿಂದ ಹೊರದಬ್ಬಿದ್ದರು.
ಆಗ, ಮನಸ್ಸಿಗೆ ತೃಪ್ತಿಯಾಗುವಷ್ಟು ದರ್ಶನ ಭಾಗ್ಯವಿಲ್ಲವೆಂದ ಮೇಲೆ ನಿನ್ನಲ್ಲಿಗೆ ಬರುವುದು ವ್ಯರ್ಥ. ಹೇ ವೈಕುಂಠನಾಥ, ನಾನಿರುವಲ್ಲಿಗೆ ನೀನು ಬರಬೇಕು. ಬಂದೇ ಬರುತ್ತೀಯಾ ಎಂಬ ಧೃಢ ನಂಬಿಕೆಯಿಂದ ಹೊರಡುತ್ತೇನೆ ಎಂದು ತಿರುಪತಿಯಲ್ಲಿಯೇ ಸಂಕಲ್ಪಿಸಿಕೊಂಡು, ಅಲ್ಲಿಂದ ನೇರವಾಗಿ ಉಡುಪಿಯ ಶ್ರೀ ಕೃಷ್ಣನ ದರ್ಶನ ಮಾಡಿ, ಪುನಃ ಶಿವಮೊಗ್ಗಕ್ಕೆ ಬಂದರು.
ದೇವಸ್ಥಾನ ಪ್ರಾರಂಭಕ್ಕೆ ಸಿದ್ಧತೆ : ಶಿವಮೊಗ್ಗ ಸಮೀಪದ ನವುಲೆ ಬೆಟ್ಟದ ಮೇಲೆ ತಮ್ಮ ಆಸ್ತಿಕ ಸಮಾನ ಮನಸ್ಕ ರೊಂದಿಗೆ ಬೆಟ್ಟದಲ್ಲಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಸ್ಥಾನವನ್ನು ಪ್ರತಿಷ್ಠಾಪನೆಯನ್ನು ಮಾಡುವ ಬಗ್ಗೆ ಚರ್ಚಿಸಿ ಅದನ್ನು ಕಾರ್ಯಗತಗೊಳಿಸಿದರು.
ಶ್ರೀ ಸ್ವಾಮಿಯ ವಿಗ್ರಹವನ್ನು ನಿರ್ಮಿಸಿಕೊಡಲು ಶಿಲ್ಪಿಯೋರ್ವರಿಗೆ ತಿರುಪತಿ ತಿಮ್ಮಪ್ಪನ ಭಾವಚಿತ್ರವನ್ನು ನೀಡಿ ಇದರಂತೆಯೇ ರೂಪಿಸಬೇಕೆಂದು ವೀರದಾಸರು ತಿಳಿಸಿದರು. ತಿರುಪತಿ ತಿಮ್ಮಪ್ಪನ ಕೈಯಲ್ಲಿ ವರದ ಹಸ್ತವಿದ್ದರೆ, ಬೆಟ್ಟದ ತಿರುಪತಿ ತಿಮ್ಮಪ್ಪನ ಕೈಯಲ್ಲಿ ಅಭಯಹಸ್ತವಿದೆ. ಒಂದು ರಾತ್ರಿ ವೀರದಾಸರ ಸ್ವಪ್ನದಲ್ಲಿ ಶ್ರೀ ವೆಂಕಟರ ಮಣ ಸ್ವಾಮಿಯು ಕಾಣಿಸಿಕೊಂಡು ನಿನ್ನ ಇಷ್ಟದಂತೆಯೇ ನಾನು ಬೆಟ್ಟದಲ್ಲಿ ನೆಲೆಸುತ್ತೇನೆ ಎಂದು ಹೇಳಿದಂತಾಯಿತು.
ದೇವಸ್ಥಾನ ಮತ್ತು ದೇವರ ವಿಗ್ರಹ ಪ್ರತಿಷ್ಠಾಪನೆ : ಅದು ೧೯೬೯ರ ಕಾಲ. ಸುಮಾರು ೧ ಹೆಕ್ಟೇರ್ ಅಂದರೆ, ೨ ಎಕರೆ ೧೯ ಗುಂಟೆ ವಿಶಾಲವಾದ ಜಗದಲ್ಲಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಸ್ಥಾನವನ್ನು ಪ್ರಾರಂಭಿಸಿದರು. ದೇವಸ್ಥಾನದ ಹೆಸರಿನಲ್ಲಿ ಸಮಿತಿ ರಚನೆ ಮಾಡಿಕೊಂಡ ವೀರದಾಸರು ತಾವೇ ಗೌರವ ಅಧ್ಯಕ್ಷರಾದರು. ಅಧ್ಯಕ್ಷರಾಗಿ ಬದರಿನಾರಾಯಣ್, ಪದಾಧಿಕಾರಿ ಗಳಾಗಿ ಠಿಕಾರೆ ರಾಮರಾವ್, ಭೈರೋಜಿರಾವ್, ಕಂಠೀರವ ಮುನಿಸ್ವಾಮಪ್ಪ, ರವಳಪ್ಪ, ರಂಗರಾಜು, ಮಹೇಶ್ವರಪ್ಪ ಸೇವೆ ಸಲ್ಲಿಸಿದರು. ಸುಮಾರು ೨೦೦೪ ಇಸವಿಯವರೆಗೂ ವಿವಿಧ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಇಲ್ಲಿ ಸೇವೆ ಸಲ್ಲಿಸಿzರೆ.
೨೦೦೪ ನೇ ಇಸ್ವಿಯಲ್ಲಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಸ್ಥಾನ ಟ್ರಸ್ಟ್ ರಚನೆಯಾಗಿ ರಿಜಿಸ್ಟರ್ ಕೂಡ ಆಯಿತು. ಅಧ್ಯಕ್ಷರಾಗಿ ನವುಲೆಯ ಎಂ. ಈಶ್ವರಪ್ಪ, ಪದಾಧಿಕಾರಿಗಳಾಗಿ ನ್ಯಾಯವಾದಿ ಹಿರಿಯೂರು ನಾಗರಾಜ್ ಸೇರಿದಂತೆ ಸುಮಾರು ೧೦ ಜನ ಸೇವೆ ಸಲ್ಲಿಸಿzರೆ. ೨ ಎಕರೆ ೧೯ ಗುಂಟೆ ವಿಶಾಲವಾದ ಜಗದಲ್ಲಿ ೧೬ ಗುಂಟೆ ಜಗ ಒತ್ತುವರಿಯಾಗಿ ಈಗ ೨ ಎಕರೆ ೩ ಗುಂಟೆ ಮಾತ್ರ ಇದೆ. ೩೦ ೪೦ ಅಡಿ ವಿಶಾಲ ಅಳತೆಯ ಜಗದಲ್ಲಿ ನೂತನವಾಗಿ ೨೦೦೪ನೇ ಇಸವಿಯಲ್ಲಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲಾಯಿತು.
ರಾಜಗೋಪುರ ಮತ್ತು ಏಕಶಿಲಾ ಗರಡುಗಂಭ ಲೋಕಾರ್ಪಣೆ :
ದೇವಸ್ಥಾನದ ಉಧ್ಘಾಟನೆಯನ್ನು ಚಿಕ್ಕಮಗಳೂರು ಜಿ ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಛಿದಾನಂದ ಸರಸ್ವತಿ ಮಹಾಸ್ವಾಮೀಜಿಗಳು ತಮ್ಮ ಅಮೃತಹಸ್ತದಿಂದ ನೆರವೇರಿಸಿದರು. ಧಾರ್ಮಿಕ ಕಾರ್ಯಕ್ರಮಗಳನ್ನು ಚಿಕ್ಕಮಗಳೂರು ಜಿ ಹಿರೇಮಗಳೂರಿನ ಶ್ರೀ ಕೋದಂಡರಾಮೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಬ್ರ.ಶ್ರೀ. ಸವ್ಯಸಾಚಿಗಳು ಮತ್ತು ತಂಡದವರು ನೆರವೇರಿಸಿದರು. ಈ ಸಂದರ್ಭದಲ್ಲಿ ಸವ್ಯಸಾಚಿಗಳು ದೇವಸ್ಥಾನದ ಗೋಪುರವನ್ನು ಶಾಸ್ತ್ರದ ಪ್ರಕಾರ ಸರಿಯಾಗಿ ನಿರ್ಮಾಣ ಮಾಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ, ಭಕ್ತಾದಿಗಳ ನೆರವಿನೊಂದಿಗೆ ಆಡಳಿತ ಮಂಡಳಿ ೨೦೦೭ರಲ್ಲಿ ರಾಜಗೋಪುರ, ೨೫ ಅಡಿ ಎತ್ತರದ ಏಕಶಿಲಾ ಗರಡುಗಂಭ ಇವುಗಳ ಲೋಕಾರ್ಪಣೆಯನ್ನು ವೇ.ಬ್ರ.ಶ್ರೀ. ಸವ್ಯಸಾಚಿಗಳವರ ನೇತತ್ವದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಶ್ರೀ ಮಹಾಲಕ್ಷ್ಮಿ ಮತ್ತು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಗಳ ಲೋಕಾರ್ಪಣೆ :
೨೦೦೯ರಲ್ಲಿ ಶ್ರೀಕ್ಷೇತ್ರ ಕೂಡಲಿಮಠದ ಶ್ರೀಮದ್‌ಜಗದ್ಗುರು ಶ್ರೀ ಸಚ್ಛಿದಾನಂದ ವಾಲಿಕೇಶ್ವರ ಭಾರತೀ ಸ್ವಾಮೀಜಿ ಮತ್ತು ಕಿರಿಯ ಯತಿಗಳಾದ ಶ್ರೀಮದ್ ಜಗದ್ಗುರು ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮೀಜಿಗಳು ತಮ್ಮ ಅಮೃತಹಸ್ತದಲ್ಲಿ ಶ್ರೀ ಮಹಾಲಕ್ಷ್ಮಿ ಮತ್ತು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಗಳನ್ನು ಲೋಕಾರ್ಪಣೆ ಗೊಳಿಸಿದರು. ಉಭಯ ದೇವಸ್ಥಾನಗಳ ಧಾರ್ಮಿಕ ವಿಧಿ-ವಿಧಾನಗಳನ್ನು ಹಿರೇಮಗಳೂರಿನ ವೇ.ಬ್ರ.ಶ್ರೀ. ಸವ್ಯಸಾಚಿಗಳು ಹಾಗೂ ಶಿವಮೊಗ್ಗದ ವೇ.ಬ್ರ.ಶ್ರೀ. ಶಂಕರಾನಂದ ಜೋಯ್ಸ್ ಮತ್ತು ತಂಡದವರು ನೆರವೇರಿಸಿದರು.
ಶ್ರೀ ಲಕ್ಷ್ಮಿವೆಂಕಟರಮಣ ದೇವಸ್ಥಾನ ದಲ್ಲಿ ವೇ.ಬ್ರ.ಶ್ರೀ. ಚಂದ್ರಶೇಖರ ಭಟ್‌ರವರು ೧೮ ವರ್ಷ, ವೇ.ಬ್ರ.ಶ್ರೀ. ಶ್ರೀನಿವಾಸ ಭಟ್‌ರವರು ೩ ವರ್ಷ, ವೇ.ಬ್ರ.ಶ್ರೀ. ಕೆ.ಪಿ. ಜಗನ್ನಾಥ ಭಟ್ ರವರು ೧೬ ವರ್ಷ ಪ್ರಧಾನ ಅರ್ಚಕರು ಗಳಾಗಿ ಸೇವೆ ಸಲ್ಲಿಸಿzರೆ. ಪ್ರಸ್ತುತ ಪ್ರಧಾನ ಅರ್ಚಕರಾಗಿ ವೇ.ಬ್ರ.ಶ್ರೀ. ಎನ್.ವಿ. ಭೀಮಸೇನರಾವ್‌ರವರು ಸೇವೆ ಸಲ್ಲಿಸುತ್ತಿzರೆ. ಶ್ರೀ ಮಹಾಲಕ್ಷ್ಮಿ ಮತ್ತು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಗಳ ಪ್ರಧಾನ ಅರ್ಚಕರಾಗಿ ವೇ.ಬ್ರ.ಶ್ರೀ. ಎಸ್.ಎಂ. ಚಂದ್ರಶೇಖರ್ ರವರು ಸೇವೆ ಸಲ್ಲಿಸುತ್ತಿzರೆ.
ಶ್ರೀ ಲಕ್ಷ್ಮಿವೆಂಕಟೇಶ್ವರ ಸ್ವಾಮಿ ದೇವಸ್ಥಾನದ ವಿಗ್ರಹ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ಪ್ರತಿ ವರ್ಷದ ಆಷಾಢ ಶುದ್ಧ ತದಿಗೆ (ಜುಲೈ ಅಥವಾ ಆಗಸ್ಟ್ ತಿಂಗಳು) ಮತ್ತು ಶ್ರೀ ಮಹಾಲಕ್ಷ್ಮಿ ಹಾಗೂ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಗಳ ವಿಗ್ರಹ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ಪ್ರತಿ ವರ್ಷದ ಜ್ಯೇಷ್ಠ ಕಷ್ಣ ಬಹುಳ ಏಕಾದಶಿಯಂದು (ಮೇ ಅಥವಾ ಜೂನ್ ತಿಂಗಳು) ವಿಜಂಭಣೆಯಿಂದ ನಡೆಯಲಿದೆ.
ವಿಶೇಷ ಪೂಜೆ : ಪ್ರತಿ ಶ್ರಾವಣ ಮಾಸದ ೪ ವಾರಗಳಲ್ಲೂ ಶ್ರೀ ಲಕ್ಷ್ಮಿವೆಂಕಟೇಶ್ವರ ಸ್ವಾಮಿ ಹಾಗೂ ಶ್ರೀ ಮಹಾಲಕ್ಷ್ಮಿ ಹಾಗೂ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ಗೋಪಾಲಕೃಷ್ಣ, ನವನೀತ, ವೈರಮುಡಿ, ನರಸಿಂಹ ಸ್ವಾಮಿ ಸೇರಿದಂತೆ ವಿವಿಧ ವಿಶೇಷ ಅಲಂಕಾರ ಗಳು ನಡೆಯುತ್ತವೆ. ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ ಸೇರಿದಂತೆ ಹಲವು ವಿಧಧ ಅಭಿಷೇಕಗಳು ನಡೆಯುತ್ತವೆ. ಕಾರ್ತೀಕ ಮಾಸದಲ್ಲಿ ಪ್ರತಿ ದಿನ ದೀಪೋತ್ಸವ ನಡೆಯಲಿದ್ದು, ಕಡೇ ಕಾರ್ತೀಕದ ದಿನ ಸುಮಾರು ೧೦೦೦ ಜನ ಭಕ್ತರು ಆಗಮಿಸುತ್ತಾರೆ. ಧರ್ನುಮಾಸದ ಒಂದು ತಿಂಗಳು ಪ್ರತಿದಿನ ಬೆಳಿಗ್ಗೆ ೪-೩೦ ರಿಂದ ವಿವಿಧ ಅಭಿಷೇಕಗಳು, ಅಲಂಕಾರಗಳು ನಡೆಯುತ್ತವೆ. ಬೆಳಿಗ್ಗೆ ೬ ಗಂಟೆಗೆ ಪೊಂಗಲ್ ನೈವೇದ್ಯ ಹಾಗೂ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯುತ್ತದೆ.
ವೈಕುಂಠ ಏಕಾದಶಿಯಂದು ಬೆಳಿಗ್ಗೆ ೪ ಗಂಟೆಯಿಂದ ಸುಪ್ರಭಾತ, ಪಂಚಾಮೃತಾಭಿಷೇಕ, ಅಲಂಕಾರಗಳು, ಪ್ರಕಾರೋತ್ಸವ, ವಿಶೇಷ ತುಲಾಭಾರ ಸೇವೆ, ಶ್ರೀ ಲಕ್ಷ್ಮಿವೆಂಕಟೇಶ್ವರ ಸ್ವಾಮಿಯವರ ರಾಜಬೀದಿ ಉತ್ಸವ ವಿಜಂಭಣೆಯಿಂದ ನಡೆಯುತ್ತವೆ. ವೈಕುಂಠ ಏಕಾದಶಿಯಂದು ಸುಮಾರು ೧೦ ರಿಂದ ೧೨ ಸಾವಿರ ಜನ ಭಕ್ತರು ಶ್ರೀ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ, ಪೂಜೆಗಳಲ್ಲಿ ಪಾಲ್ಗೊಂಡು ಪುನೀತರಾಗುತ್ತಾರೆ.
ಶ್ರೀ ಲಕ್ಷ್ಮಿವೆಂಕಟೇಶ್ವರ ಸ್ವಾಮಿ ಮತ್ತು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ಶನಿವಾರ ಸುಮಾರು ೫೦೦ ಜನ ಹಾಗೂ ಶ್ರೀ ಮಹಾಲಕ್ಷ್ಮಿ ಅಮ್ಮನವರ ದೇವಸ್ಥಾನದಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಸುಮಾರು ೩೦೦ ಜನ ಭಕ್ತರು ಆಗಮಿಸಿ, ದೇವರುಗಳ ಕಪಾಕಟಾಕ್ಷಕ್ಕೆ ಪಾತ್ರರಾಗುತ್ತಿzರೆ. ಪ್ರತಿ ಬುಧವಾರ ಬೆಳಿಗ್ಗೆ ೯ ರಿಂದ ೧೦ ಗಂಟೆಯ ವರೆಗೆ ಶ್ರೀ ವಿಷ್ಣುಸಹಸ್ರನಾಮ ಪಠಣ ನಡೆಯುತ್ತದೆ.
ಕಲ್ಯಾಣ ಮಂದಿರ : ಶ್ರೀ ಲಕ್ಷ್ಮಿವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಪ್ರಾಂಗಣದಲ್ಲಿ ಸುಮಾರು ೩೦೬೦ ಅಡಿ ವಿಶಾಲವಾದ ಜಗದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಶ್ರೀ ಲಕ್ಷ್ಮಿವೆಂಕಟೇಶ್ವರ ಸ್ವಾಮಿ ಕಲ್ಯಾಣ ಮಂದಿರವನ್ನು ನಿರ್ಮಿಸಲಾಗಿದ್ದು, ಇದರಲ್ಲಿ ಸುಮಾರು ೮ ಕೊಠಡಿಗಳು ಸೇವೆಗೆ ಸಿದ್ಧವಾಗಿವೆ. ಈಗಾಗಲೇ ಸುಮಾರು ೨೫೦ಕ್ಕೂ ಹೆಚ್ಚು ಮದುವೆ, ನಾಮಕರಣ ಸೇರಿದಂತೆ ಶುಭಕಾರ್ಯ ಗಳು ನಡೆದಿವೆ. ಸುಮಾರು ೨೦೦ ಜನ ಏಕಕಾಲದಲ್ಲಿ ಕುಳಿತು ಭೋಜನ ಮಾಡುವ ವಿಶಾಲವಾದ ಹಾಲ್‌ನ್ನು ಈ ಕಲ್ಯಾಣ ಮಂದಿರ ಹೊಂದಿದೆ. ಸವಳಂಗ ರಸ್ತೆಯಲ್ಲಿ ಸುಮಾರು ೨೫ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಮುಖ್ಯದ್ವಾರ ವನ್ನು ನಿರ್ಮಿಸಲಾಗಿದೆ, ಶ್ರೀ ದೇವಸ್ಥಾನದ ಪ್ರಾಂಗಣದಲ್ಲಿ ಸುಮಾರು ೫ ಮಳಿಗೆಗಳನ್ನು ನಿರ್ಮಾಣ ಮಾಡಿ, ಸಾರ್ವಜನಿಕರಿಗೆ ಬಾಡಿಗೆ ನೀಡಿ, ಬರುವ ಆದಾಯವನ್ನು ಶ್ರೀ ಸ್ವಾಮಿ ದೇವಸ್ಥಾನದ ಅಭಿವದ್ಧಿ ಕಾರ್ಯಗಳಿಗೆ ಬಳಸಲಾಗುತ್ತಿದೆ.
ಆಡಳಿತ ಮಂಡಳಿ : ಶ್ರೀ ಲಕ್ಷ್ಮಿವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಸಮಿತಿ ಗೌರವ ಅಧ್ಯಕ್ಷರಾಗಿ ಆರ್.ಜಿ. ಮಂಜುನಾಥ್, ಎಂ. ಈಶ್ವರಪ್ಪ, ಕಾರ್ಯದರ್ಶಿಯಾಗಿ ಸುಬ್ಬಯ್ಯಶೆಟ್ಟಿ, ಸಹ ಕಾರ್ಯದರ್ಶಿಯಾಗಿ ಸಿ. ಮೋಹನ್, ಖಜಂಚಿಯಾಗಿ ಜಿ.ಎಸ್. ಶಿವಾಜಿರಾವ್ ಸೇರಿದಂತೆ ೨೧ ಜನ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿzರೆ. ಪ್ರಸ್ತುತ ಸಮಿತಿ ಅಧ್ಯಕ್ಷರಾಗಿ ಎಂ. ಈಶ್ವರಪ್ಪ, ಉಪಾಧ್ಯಕ್ಷರಾಗಿ ಸಿ. ಮೋಹನ್, ನಾರಾಯಣಪ್ಪ, ಕಾರ್ಯದರ್ಶಿಯಾಗಿ ಜಯಕರ್, ಸಹ ಕಾರ್ಯದರ್ಶಿ ಯಾಗಿ ಭುವನೇಶ್ವರ್, ಪದಾಧಿಕಾರಿಗಳಾಗಿ ಕೆ. ಹೆಚ್. ಆನಂದಪ್ಪ, ವಾಸುದೇವಮೂರ್ತಿ, ಅನಂತಶಾಸ್ತ್ರಿ, ನ್ಯಾಯವಾದಿ ಆನಂದಪ್ಪ, ಎಸ್. ಎ. ವಿಶ್ವನಾಥ್, ಹರೀಶ್ ಸೇವೆ ಸಲ್ಲಿಸುತ್ತಿzರೆ.
ವಿಳಾಸ ಮತ್ತು ದೂರವಾಣಿ ಸಂಖ್ಯೆಗಳು : ನವುಲೆ ಬೆಟ್ಟದ ಶ್ರೀ ಲಕ್ಷ್ಮಿವೆಂಕಟೇಶ್ವರ ಸ್ವಾಮಿ ಹಾಗೂ ಶ್ರೀ ಮಹಾಲಕ್ಷ್ಮಿ ಹಾಗೂ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ, ಸವಳಂಗ ರಸ್ತೆ, ನವುಲೆ, ಶಿವಮೊಗ್ಗ – ೫೭೭೨೦೪ ದೂ : ೯೬೬೩೮೩೭೨೩೧, (ಅರ್ಚಕರು), ೯೨೪೨೦೬೩೨೪೨ (ಟಿ. ರವೀಂದ್ರ, ಮ್ಯಾನೇಜರ್), ೯೪೪೮೯೨೧೯೫೭ (ಅಧ್ಯಕ್ಷರು).
ಶ್ರೀ ಸ್ವಾಮಿ ದೇವಸ್ಥಾನಕ್ಕೆ ತೆರಳುವ ಮಾರ್ಗಗಳು ಮತ್ತು ಅಂತರ : ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಹೋಗುವ ಮಾರ್ಗದಲ್ಲಿ ಈ ದೇವಸ್ಥಾನವಿದೆ. ಶಿವಮೊಗ್ಗ ಬಸ್ ನಿಲ್ದಾಣದಿಂದ ಸುಮಾರು ೪ ಕಿ.ಮೀ, ರೈಲ್ವೇ ನಿಲ್ದಾಣದಿಂದ ಸುಮಾರು ೨ ಕಿ.ಮೀ, ಶಿವಮೂರ್ತಿ ಸರ್ಕಲ್‌ನಿಂದ ಸುಮಾರು ೧ ಕಿ.ಮೀ. ಅಂತರವಿದೆ.
ಶ್ರೀ ಸ್ವಾಮಿ ದೇವಸ್ಥಾನದ ದರ್ಶನದ ಸಮಯ : ಬೆಳಿಗ್ಗೆ ೭.೩೦ ರಿಂದ ೧೧ ಗಂಟೆಯವರೆಗೆ ಮತ್ತು ಸಂಜೆ ೫.೩೦ ರಿಂದ ೮.೩೦ ರವರೆಗೆ ಶ್ರೀ ಸ್ವಾಮಿ ದರ್ಶನಕ್ಕೆ ಅವಕಾಶವಿರುತ್ತದೆ.
ಸಮೀಪದ ದೇವಸ್ಥಾನಗಳು : ಶ್ರೀ ಲಕ್ಷ್ಮಿವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಬಳಿ ನವುಲೆಯ ಶಕ್ತಿ ದೇವರಾದ ಶ್ರೀ ಸುಂಕ್ಲಮ್ಮ ದೇವಿ, ಇಡಗುಂಜಿ ಗಣಪತಿ, ತ್ರಿಮೂರ್ತಿ ನಗರದ ರಾಗಿಗುಡ್ಡದಲ್ಲಿರುವ ಬ್ರಹ್ಮ, ವಿಷ್ಣು, ಮಹೇಶ್ವರ ಸ್ವಾಮಿ ದೇವಸ್ಥಾನಗಳಿವೆ.