ಮರಾಠ ಬಾಂಧವರಿಗೆ ಆಹಾರ ಕಿಟ್ ವಿತರಣೆ…

531

ಸುದ್ದಿ ಹಾಗೂ ಜಹೀರಾತಿಗಾಗಿ ಸಂಪರ್ಕಿಸಿ: +91 948 248 2182, +91 725 971 4220 ಇ ಮೇಲ್:hosanavika@gmail.com

ಶಿವಮೊಗ್ಗ: ಕೊರೋನಾ ಲಾಕ್‌ಡೌನ್ ನಿಮಿತ್ತ ನಗರದ ಬಿ.ಹೆಚ್. ರಸ್ತೆಯ ಶ್ರೀ ಮೈಲಾರೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಮರಾಠ ಸಮಾಜ ಬಾಂಧವರಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನುಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆಎಸ್ ಈಶ್ವರಪ್ಪನವರು ಉದ್ಘಾಟಿಸಿ ಮರಾಠ ಸಮಾಜದ ಬಡವರಿಗೆ ಆಹಾರ ಕಿಟ್ ವಿತರಿಸಿದರು.
ಕ್ಷತ್ರೀಯ ಮರಾಠ ಸಂಘದ ಅಧ್ಯಕ್ಷ ದಿನೇಶ್‌ರಾವ್ ಚೌವ್ಹಾಣ್, ಮರಾಠ ಸಮಾಜದ ನಗರ ಅಧ್ಯಕ್ಷ ಚಂದ್ರರಾವ್ ಘಾರ್ಗೆ, ಲಾಲಿಕೆ ಮೇಯರ್ ಸುವರ್ಣಾ ಶಂಕರ್, ಬಿಜೆಪಿ ನಗರ ಸಮಿತಿ ಅಧ್ಯಕ್ಷ ಜಗದೀಶಂ ಕಾನ್ವಿಲ್ಕರ್, ಸಂಘದ ಸದಸ್ಯರಾದ ಚೂಡಾಮಣಿ ಪವಾರ್, ಸುರೇಶ್‌ಬಾಬು ಮೋರೆ, ತುಕಾರಾಂ ರಾವ್, ಸಿದ್ದೋಜಿರಾವ್ ಜಾಧವ್, ರವಿ ಮೋರೆ, ಸುದೇವ್‌ರಾವ್ ನೇಮೋಜಿರಾವ್ ಸಿಂಧೆ, ಪ್ರಸಾದ್‌ರಾವ್ ಜಾಧವ್ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.