ಮತ್ತೊಮ್ಮೆ ಜಿಲ್ಲಾಡಳಿತದ ವಿರುದ್ಧ ಸಿಡಿದೆದ್ದ ಕಾರ್ಮಿಕ ನಾಯಕ ಆಯ್ನೂರ್…

479

ಸುದ್ದಿ ಹಾಗೂ ಜಹೀರಾತಿಗಾಗಿ ಸಂಪರ್ಕಿಸಿ: +91 948 248 2182, +91 725 971 4220 ಇ ಮೇಲ್:hosanavika@gmail.com

ಶಿವಮೊಗ್ಗ: ನೇರವಾಗಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ತಾಕತ್ತು ಇದೆ ಎಂದರೆ ರಾಜಕಾರಣದ ಆಲ್‌ರೌಂಡರ್ ಎಂದೇ ಖ್ಯಾತಿ ಪಡೆದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್‌ಗೆ ಮಾತ್ರ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಅದು ಬಂಡಾಯವಲ್ಲ. ಬದಲಿಗೆ ಒಬ್ಬ ಜನನಾಯಕನಿಗೆ ಜನತೆಯ ಬಗ್ಗೆ ಇರಬೇಕಾದ ನಿಜವಾದ ಕಾಳಜಿ ಎಂದರೆ ತಪ್ಪಾಗಲಾರದು.
ಈಗ ಮತ್ತೊಮ್ಮೆ ಸ್ವಪಕ್ಷದ ವಿರುದ್ಧವೇ ಕಾರ್ಮಿಕ ನಾಯಕ ಆಯನೂರು ಮಂಜುನಾಥ್ ಭರ್ಜರಿಯಾಗಿಯೇ ಕಿಡಿಕಾರಿದ್ದಾರೆ. ಹನಸವಾಡಿಯಲ್ಲಿ ಏ.೧೧ ರಂದು ತುಂಗಾ ಎಡದಂಡೆ ನಾಲೆಯಲ್ಲಿ ಹರಿಯುತ್ತಿರುವ ನೀರಿನ ಸ್ಥಿತಿಕಂಡು ಮರುಗಿದ್ದಾರೆ. ನೀರಿನಲ್ಲಿ ನಗರದ ಜನ ಬಳಸುವ ತಾಜ್ಯ ವಸ್ತುಗಳು ತೇಲುತ್ತಿವೆ. ಆಗತಾನೆ ಹುಟ್ಟಿದ ಮಗುವನ್ನ ಅಲ್ಲಿ ಬಿಸಾಡಲಾಗಿದೆ. ಆಸ್ಪತ್ರೆಗಳ ತಾಜ್ಯವಸ್ತುಗಳನ್ನ ನದಿಯಲ್ಲಿ ಬಿಡಲಾಗಿದೆ. ಇದಕ್ಕೆ ಹೊಣೆಯಾರು ಎಂದು ಜಿಲ್ಲಾಡಳಿತವನ್ನು ಆಯನೂರು ಪ್ರಶ್ನಿಸಿದ್ದಾರೆ.
ಗ್ರಾಮಾಂತರ ನಾಲೆಯಲ್ಲಿ ಸಿಕ್ಕಿಹಾಕಿಕೊಂಡು ಕೊಳೆತು ವಾಸನೆ ಬರುತ್ತಿದ್ದರೂ ಸಹ, ಅಲ್ಲಿನ ಜನರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ ಶಾಸಕರು ಮರುಗಿದ್ದಾರೆ. ಈ ಮರುಕವನ್ನ ಜಿಲ್ಲಾಡಳಿತ ಸಣ್ಣ ನೀರಾವರಿ ಇಲಾಖೆಯ ಗಮನಕ್ಕೂ ತರಲಾಗಿದೆ. ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿಗಳ ಸಭೆಯಲ್ಲಿ ನೇರವಾಗಿ ಪ್ರಸ್ತಾಪಿಸಿ ಆಡಳಿತ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದ್ದರು.
ಈ ಭಾಗದ ಜನ ಇದೇ ನೀರನ್ನು ಬಳಸುತ್ತಿರುವುದರಿಂದ ಹಾಗೂ ವ್ಯವಸಾಯಕ್ಕೆ ಉಪಯೋಗಿಸುತ್ತಿರುವುದರಿಂದ ಕರೋನಾ ವೈರಸ್‌ಗೆ ಮೀರಿಸುವಂತ ಸಾಂಕ್ರಾಮಿಕ ರೋಗ ಈ ಭಾಗದಲ್ಲಿ ಹರಡುವ ಸಂಭವ ಹೆಚ್ಚಿರುವುದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಡಳಿತಕ್ಕೆ ಶಾಸಕರು ಕೋರಿದ್ದರು. ಇಂದಿನವರೆಗೂ ಜಿಲ್ಲಾಡಳಿತವಾಗಲಿ, ನೀರಾವರಿ ಇಲಾಖೆಯಾಗಲಿ ಈ ಬಗ್ಗೆ ಗಮನ ಹರಿಸದೇ ಇರುವುದರಿಂದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮನವಿ ಪತ್ರ ನೀಡಿ ಮತ್ತೊಮ್ಮೆ ಅಧಿಕಾರಿಗಳ ಗಮನವನ್ನ ಜನರ ಕುಡಿಯುವ ನೀರಿನ ಬಗ್ಗೆ ಹರಿಸುವ ಪ್ರಯತ್ನಕ್ಕಿಳಿದಿದ್ದಾರೆ.
ಕಾರ್ಮಿಕ ದಿನವಾದ ಮೇ ೧ ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲು ಮುಂದಾಗಿದ್ದಾರೆ ಈ ಕಾರ್ಮಿಕ ನಾಯಕ. ಇವರೊಂದಿಗೆ ಗ್ರಾಮಾಂತರ ಮಾಜಿ ಶಾಸಕರಾದ ಕೆ.ಜಿ.ಕುಮಾರಸ್ವಾಮಿ, ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ಎಂ.ಎಸ್. ಮಹೇಂದ್ರನಾಥ್,ಮಾಜಿ ಜಿಪಂ ಅಧ್ಯಕ್ಷ ಎಚ್. ಸಿ. ಬಸವರಾಜಪ್ಪ, ಮಾಜಿ ತಾಪಂ ಅಧ್ಯಕ್ಷ ಹೆಚ್. ಕೆ. ದೇವರಾಜ್, ಶಿವಮೆಗ್ಗ ಎಪಿಎಂಸಿ ನಿರ್ದೇಶಕ ಹೆಚ್. ಬಿ. ದಿನೇಶ್, ಎಸ್.ಪಿ.ಪಾಟೀಲ್, ಕೊಮ್ಮನಾಳು , ಪರಮೇಶ್ವರಪ್ಪ -ಮಡಿಕೆ ಚೀಲೂರು , ಶ್ರೀ ಶರಣೇಗೌಡ ಬೇಡರ ಹೊಸಳ್ಳಿ , ಶಿವಕುಮಾರ್ ಸೂಗೂರು, ಹಾಲಸಿದ್ದಪ್ಪ ಮೇಲಿನ ಹನಸವಾಡಿ ಮುಂತಾದವರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ .