ಮಣ್ಣನ್ನು ತಾಯಿಗೆ ಹೋಲಿಸುತ್ತೇವೆ; ಅದು ನಮ್ಮ ಬೇಡಿಕೆ ಪೂರೈಸುತ್ತದೆ: ಡಾ| ಎಂ. ಹನುಮಂತಪ್ಪ

406

ಶಿವಮೊಗ್ಗ : ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣ ಧರ್ಮಗಳನ್ನು ಕಾಪಾಡಲು ಮಣ್ಣಿಗೆ ಸಮಗ್ರ ಪೋಷಕಾಂಶಗಳ ಪೂರೈಕೆ ಮಾಡಿ ಮಣ್ಣಿನ ಆರೋಗ್ಯ ಕಾಪಾಡ ಬೇಕು ಎಂದು ಕೃಷಿ ಮತ್ತು ತೋಟ ಗಾರಿಕೆ ವಿವಿ ಸಂಶೋಧನಾ ನಿರ್ದೇಶಕ ಡಾ. ಎಂ. ಹನುಮಂತಪ್ಪ ಹೇಳಿದರು.
ಭಾರತೀಯ ಕೃಷಿ ಅನುಸಂಧಾನ ಪರಿಷತ್, ಕೃಷಿ ಮತ್ತು ತೋಟಗಾರಿಕೆ ವಿವಿಯ, ಕೃಷಿ ವಿಜನ ಕೇಂದ್ರ, ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವೀಸ್ ಸೊಸೈಟಿ ಮತ್ತು ಕೃಷಿ ಇಲಾಖೆ ಆಶ್ರಯದಲ್ಲಿ ಕೃಷಿ ವಿಜನ ಕೇಂದ್ರದಲ್ಲಿ ಮಣ್ಣನ್ನು ಜೀವಂತ ವಾಗಿರಿಸಿ, ಮಣ್ಣಿನ ಜೀವ ವೈವಿಧ್ಯತೆ ಯನ್ನು ರಕ್ಷಿಸಿ ಎಂಬ ಧ್ಯೇಯದ ಅಡಿ `ವಿಶ್ವ ಮಣ್ಣು ದಿನಾಚರಣೆ-೨೦೨೦’ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಣ್ಣನ್ನು ಭೂಮಿ ತಾಯಿಗೆ ಹೋಲಿಸುತ್ತೇವೆ’. ಮಣ್ಣು ನಮ್ಮೆಲ್ಲರ ಬೇಡಿಕೆಗಳನ್ನು ಈಡೇರಿಸುತ್ತದೆ. ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆ ಯುಂಟಾದರೆ, ಬೆಳೆಯುವ ಬೆಳೆಗಳಲ್ಲಿಯೂ ಸಹ ಪೋಷಕಾಂಶಗಳ ಕೊರತೆ ಕಾಣುತ್ತದೆ. ಇಂತಹ ಕಡಿಮೆ ಪೋಷಕಾಂಶಯುಕ್ತ ಆಹಾರವನ್ನು ಸೇವಿಸಿದ ನಮ್ಮಲ್ಲೂ ಸಹ ಪೋಷಕಾಂಶ ಗಳ ಕೊರತೆ ಕಾಣುತ್ತದೆ ಎಂದರು.
ವಿವಿಯ ಸಹ ವಿಸ್ತರಣಾ ನಿರ್ದೇಶಕ ಡಾ. ಎಸ್. ಯು. ಪಾಟೀಲ್ ಮಾತನಾಡಿ, ಮಣ್ಣು ಜೀವಂತ ವಾಗಿದೆ. ಮಣ್ಣು ಜೀವಂತವಾಗಿರಲು ನಾವು ಜೀವಂತವಾಗಿರಬೇಕು, ನಾವು ಜೀವಂತವಾಗಿರಲು ಮಣ್ಣು ಜೀವಂತ ವಾಗಿರಬೇಕು. ಆದ್ದರಿಂದ ಮಣ್ಣಿಗೆ ಆದಷ್ಟು ಸಾವಯವ ವಸ್ತುಗಳನ್ನು ಸೇರಿಸಿ, ಮಣ್ಣಿನಲ್ಲಿರುವ ವೈವಿಧ್ಯ ಜೀವಿಗಳ ಸಂಖ್ಯೆಗಳನ್ನು ವೃದ್ಧಿಸಿ ಮಣ್ಣನ್ನು ಆರೋಗ್ಯವಂತವಾಗಿರಿಸು ವುದರ ಮೂಲಕ ಜೀವಂತವಾಗಿರಿಸ ಬೇಕು ಎಂದರು. ಸಾವಯವ ಕೃಷಿ ಹೊಸದೇನಲ್ಲ, ಇದು ನಮ್ಮ ಪೂರ್ವಜರು ಅನುಸರಿಸುತ್ತಿದ್ದ ಪದ್ಧತಿ. ಆದ್ದರಿಂದ ಮಣ್ಣು ಫಲವತ್ತಾಗಿರ ಬೇಕೆಂದರೆ ಮಣ್ಣಿಗೆ ಸಾವಯವ ಪದಾರ್ಥ ಸೇರಿಸಬೇಕು ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣ್‌ಕುಮಾರ್, ಕೃಷಿ ವಿeನ ಕೇಂದ್ರದ ಮುಖ್ಯಸ್ಥ ಡಾ.ಬಿ.ಸಿ. ಹನುಮಂತಸ್ವಾಮಿ ಮಾತನಾಡಿದರು. ರೆ| ಫಾ| ಕ್ಲಿಫರ್ಡ್ ರೋಶನ್ ಪಿಂಟೊ, ಡಾ. ಸರ್ವಜ್ಞ ಉಪಸ್ಥಿತರಿದ್ದರು.