ಭೂಮಿ ಪೂಜೆಗೆ ವಿಘ್ನಗಳು ಬಾರದಿರಲೆಂದು ಪ್ರಾರ್ಥಿಸಿ ವಿಶೇಷ ಪೂಜೆ

487

ಹೂವಿನಹಡಗಲಿ: ಅಯೋಧ್ಯೆ ಯಲ್ಲಿ ರಾಮಮಂದಿರ ಭೂಮಿ ಪೂಜೆಗೆ ಯಾವುದೇ ವಿಘ್ನಗಳು ಬಾರದಿರಲಿ ಎಂದು ತಾಲೂಕಿನ ಹೊಸಹಳ್ಳಿ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯತು.
ಬೆಳಗಿನ ಜಾವದಲ್ಲಿ ಸ್ವಾಮಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾ ಮಂಗಳಾರತಿಯನ್ನು ನೆರವೇರಿಸಲಾ ಯಿತು. ನಂತರ ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಪೂಜೆ ಶಿಲಾನ್ಯಾಸ ಕಾರ್ಯಕ್ರಮ ಸಾಂಗವಾಗಿ ನೆರವೇರುವಂತೆ ದೈವಸ್ಥರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯಲ್ಲಿ ಪ್ರಾರ್ಥಿಸಿದರು. ಯಾವ ವಿಘ್ನಗಳು ಬಾರದಂತೆ ಶ್ರೀ ರಾಮಚಂದ್ರ ದೇವರ ಮಂದಿರವು ಯಶಸ್ವಿಯಾಗಿ ಪೂರ್ಣ ಗೊಳ್ಳಲಿ ಎಂದು ಸಮಸ್ತ ಭಾರತೀಯರ ಪರವಾಗಿ ಅರಿಕೆ ಮಾಡಲಾಯಿತು. ರೋಗ ರುಜಿನಗಳು ದೂರಾಗಿ ನಾಡಿಗೆ ಮಳೆ, ಬೆಳೆ, ಆಯುರಾರೋಗ್ಯ ಸಮದ್ಧಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಲಾಯಿತು.
ಪೂಜ ಕಾರ್ಯದಲ್ಲಿ ನಿವೃತ್ತ ಶಿಕ್ಷಕ ಎಸ್.ಎಂ. ಕೂಡ್ಲಯ್ಯ, ಪಿ.ಎಂ. ಶಂಭುಲುಂಗಯ್ಯ, ಪಿ.ಎಂ.ಕಿರಣ್, ಎಸ್.ಎಂ.ಗುರುಲಿಂಗಯ್ಯ, ಪಿ.ಎಂ. ವಿನಾಯಕ, ಎಸ್.ಎಂ. ಶಿವಾನಂದಯ್ಯ, ಎಸ್.ಎಂ. ಫಕ್ಕೀರಯ್ಯ, ಉಪನ್ಯಾಸಕ ಹೆಚ್.ಎಂ. ಗುರುಬಸವರಾಜಯ್ಯ ಇತರರು ಭಾಗವಹಿಸಿದ್ದರು.