ಭವ್ಯ ಇತಿಹಾಸವುಳ್ಳ ಕಸಾಪ ಸದಸ್ಯರಾಗುವುದೇ ಹಮ್ಮೆಯ ಸಂಗತಿ: ಕತ್ತಿಗೆ

418

ಹೊನ್ನಾಳಿ: ನಾಡು-ನುಡಿಗೆ ಸೇವೆ ಸಲ್ಲಿಸಿದ ಮಹನೀಯರನ್ನು ಸ್ಮರಿಸಿ, ಗೌರವಿಸುವುದು ಕಸಾಪ ಮಹೋದ್ದೇಶ ಗಳಂದು ಎಂದು ಕಸಾಪ ಅಧ್ಯಕ್ಷ ಕತ್ತಿಗೆ ಗಂಗಾಧರಪ್ಪ ಹೇಳಿದರು.
ತಾಲೂಕು ಕಸಾಪ ಮತ್ತು ನಿವೃತ್ತ ನೌಕರರ ಸಂಘದ ತಾಲೂಕು ಘಟಕದ ಆಶ್ರಯದಲ್ಲಿ ಇಲ್ಲಿನ ಟಿಬಿ ವೃತ್ತದ ನಿವೃತ್ತ ನೌಕರರ ಭವನದಲ್ಲಿ ಹಮ್ಮಿಕೊಂಡ ೨೦೨೦-೨೧ನೇ ಸಾಲಿನ ದತ್ತಿ ಉಪನ್ಯಾಸ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ತಮ್ಮ ಕುಟುಂಬದ ಹಿರಿಯರ ಸ್ಮರಣೆಯಲ್ಲಿ ಅನೇಕ ಸಾಹಿತ್ಯಾಭಿಮಾನಿ ಗಳು ಕಸಾಪದಲ್ಲಿ ದತ್ತಿ ನಿಧಿ ಇರಿಸು ತ್ತಾರೆ. ಅದರ ಒಂದಂಶವನ್ನು ಬಳಸಿ ಕೊಂಡು ಪ್ರತಿ ವರ್ಷ ಶಾಲಾ- ಕಾಲೇಜು ಹಾಗೂ ಇತರ ಸಂಸ್ಥೆಗಳಲ್ಲಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿ, ಸಾಹಿತ್ಯದ ರಸದೌತಣ ಬಡಿಸಲಾಗು ತ್ತದೆ. ಆದರೆ, ಪ್ರಸಕ್ತ ಸಾಲಿನಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಕ ವಾಗಿ ಹರಡುತ್ತಿರುವ ಕಾರಣ ಶಾಲಾ- ಕಾಲೇಜುಗಳಲ್ಲಿ ಕಾರ್ಯಕ್ರಮ ಸಂಘಟಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಸಾಂಕೇತಿಕವಾಗಿ ಉದ್ಘಾಟನಾ ಸಮಾರಂಭ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿಗೆ ತನ್ನದೇ ಆದ ಭವ್ಯ ಇತಿಹಾಸವಿದ್ದು, ಅದರ ಸದಸ್ಯರಾಗುವುದು ಹೆಮ್ಮೆಯ ಸಂಗತಿ. ೧೯೧೫ರಲ್ಲಿ ಕಸಾಪ ಸ್ಥಾಪನೆಯಾದಾಗ ಬೆರಳೆಣಿಕೆಯ ಸದಸ್ಯರಿದ್ದರು. ಆದರೆ, ಇಂದು ೪ ಲಕ್ಷಕ್ಕೂ ಅಧಿಕ ಸದಸ್ಯರಿದ್ದು ಕನ್ನಡ ತಾಯಿ ರಾಜ-ರಾಜೇಶ್ವರಿಯ ಸೇವೆಗೆ ಕಟಿಬದ್ಧರಾಗಿzರೆ ಎಂದು ವಿವರಿಸಿದರು.
ಶರಣರ ವಚನಗಳಲ್ಲಿ ಬದುಕಿನ ಶ್ರೇಷ್ಠತೆ ಎಂಬ ವಿಷಯ ಕುರಿತು ಸಾಹಿತಿ ಯು.ಎನ್. ಸಂಗನಾಳಮಠ ಉಪನ್ಯಾಸ ನೀಡಿ, ವಚನಗಳು ತಮ್ಮ ನುಡಿಗಳ ಮೂಲಕ ಬದುಕಿನ ಶ್ರೇಷ್ಠತೆ ಯನ್ನು ಸಾರುತ್ತವೆ. ಬದುಕಿನ ಅನುಭವಗಳು ಎಲ್ಲರಿಗೂ ಅರ್ಥ ವಾಗುವ ಸರಳ ಕನ್ನಡ ಭಾಷೆಯಲ್ಲಿ ವಚನಗಳಾಗಿ ಮೂಡಿಬಂದಿವೆ. ಅನ್ಯಾಯದ ವಿರುದ್ಧ ಸಿಡಿದೇಳಲು ಶರಣರು ವಚನಗಳ ಮೂಲಕ ಜನರಲ್ಲಿ ಜಗತಿ ಮೂಡಿಸುತ್ತಿದ್ದರು. ೧೨ನೇ ಶತಮಾನದ ವಚನ ಸಾಹಿತ್ಯ ವಿಶ್ವದ ಎ ಸಾಹಿತ್ಯಕ್ಕಿಂತಲೂ ಶ್ರೇಷ್ಠವಾ ದುದು ಎಂದು ಅಭಿಪ್ರಾಯಪಟ್ಟರು.
೧೨ನೇ ಶತಮಾನದಲ್ಲಿ ಅಲ್ಲಮಪ್ರಭುಗಳ ಅಧ್ಯಕ್ಷತೆಯಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಜಗತ್ತಿನ ಮೊದಲ ಸಂಸತ್ತು ಎಂಬ ಹಿರಿಮೆ ಹೊಂದಿದೆ. ಪುರುಷರು -ಮಹಿಳೆಯರು, ಮೇಲು-ಕೀಳು ವರ್ಗಗಳ ಜನರು ಯಾವುದೇ ಭೇದಭಾವಗಳಿಲ್ಲದೇ ಸುಮಾರು ೩೬೫ ವಚನಕಾರರು ಅಲ್ಲಿ ಕಲೆತು ಚರ್ಚೆ ನಡೆಸುತ್ತಿದ್ದರು. ಐದು ಮಹಾದ್ವಾರ ಗಳು, ಒಂದು ಸಾವಿರ ಬೃಹತ್ ಕಂಬ ಗಳನ್ನು ಹೊಂದಿದ ಭವ್ಯ ಸೌಧ ಅನುಭವ ಮಂಟಪವಾಗಿತ್ತು. ನಿತ್ಯವೂ ೯೫ ಸಾವಿರ ಜನರಿಗೆ ದಾಸೋಹ ನಡೆಯುತ್ತಿತ್ತು. ಈ ಅಂಶಗಳು ಅಲ್ಲಮಪ್ರಭುಗಳ ವಚನವೊಂದರಲ್ಲಿ ಉಖವಾಗಿವೆ ಎಂದು ವಚನ ಸಾಹಿತ್ಯದ ಉಗಮದ ಬಗ್ಗೆ ವಿವರಿಸಿದರು.
ಬಸವಣ್ಣನವರ ಪ್ರಸಿದ್ಧ ಉಕ್ತಿ ಕಾಯಕವೇ ಕೈಲಾಸ ಎಂಬ ಪದಗುಚ್ಛ ಆಯ್ದಕ್ಕಿ ಮಾರಯ್ಯ ಎಂಬ ವಚನ ಕಾರನ ಕೊಡುಗೆಯಾಗಿದೆ. ಕಾಯಕ ದಲ್ಲಿ ನಿರತನಾದೊಡೆ ಗುರುದರ್ಶ ನವನ್ನೂ ಮರೆಯಬೇಕು, ಲಿಂಗಪೂಜೆಯನ್ನೂ ಬಿಡಬೇಕು ಎಂದು ಹೇಳುವ ಮಾರಯ್ಯ, ಸತ್ಯ-ಶುದ್ಧ ಕಾಯಕ- ದಾಸೋಹಗಳೇ ಶ್ರೇಷ್ಠ ವಾದವು ಎಂಬುದನ್ನು ಪ್ರತಿಪಾದಿಸಿ zರೆ. ಮನಸೊಂದ ಮಾರಿತಂದೆ ಎಂಬ ಇನ್ನೋರ್ವ ವಚನಕಾರ ಕೂಡ ಇದೇ ರೀತಿಯ ಕ್ರಾಂತಿಕಾರಕ ಸಂಗತಿಗಳನ್ನು ತನ್ನ ವಚನಗಳಲ್ಲಿ ಪ್ರತಿಪಾದಿಸಿzನೆ ಎಂದು ತಿಳಿಸಿದರು.
ಸಕಲ ಜೀವಾತ್ಮರಿಗೆ ಲೇಸನೇ ಬಯಸುವುದೇ ಶರಣ ಧರ್ಮ. ಹಾಗಾಗಿ, ೧೨ನೇ ಶತಮಾನದ ಬಸವಣ್ಣನವರ ನೇತೃತ್ವದ ಪ್ರಮಥ ಗಣ ಇಡೀ ಜಗತ್ತನ್ನು ತನ್ನತ್ತ ಸೆಳೆಯಿತು. ಶರಣರ ವಚನಗಳಲ್ಲಿ ಬದುಕಿನ ಶ್ರೇಷ್ಠತೆಯೇ ಮೇಳೈಸಿದೆ ಎಂದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎನ್.ಎಚ್. ಗೋವಿಂದಪ್ಪ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಎಂ. ಸಿದ್ಧಯ್ಯ ವಿರಚಿತ ಕವಿದ ಕಾರ್ಮೋಡ ಕಳಚಿತು ಕಾದಂಬರಿ, ಸಾಹಿತಿ ಯು.ಎನ್. ಸಂಗನಾಳಮಠ ವಿರಚಿತ ಮಹಾನ್ ಸಾಧಕ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಕತಿ ಹಾಗೂ ಜಿ.ಎಂ. ಹಿರೇಮಠ ಸಂಪಾದಿತ ಶಿವಪೂಜ ಸ್ತೋತ್ರ ಕಾವ್ಯಾಂಜಲಿ ಕತಿಗಳನ್ನು ಲೋಕಾರ್ಪಣೆಗೊಳಿಸಿ, ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಸಾಪ ಮಾಜಿ ಅಧ್ಯಕ್ಷ ಎಂ.ಎಸ್. ರೇವಣಪ್ಪ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಎಂ. ಸಿದ್ಧಯ್ಯ, ಕಸಾಪ ಗೌರವ ಕಾರ್ಯದರ್ಶಿ ಕೆ.ಜಿ. ಕರಿಬಸಪ್ಪ ಮತ್ತಿತರರು ಮಾತನಾಡಿದರು.
ವಿದುಷಿ ಶಾಂತಾದೇವಿ ಹಿರೇಮಠ ವಚನ ಗಾಯನ ಕಾರ್ಯಕ್ರಮ ನಡೆಸಿ ಕೊಟ್ಟರು. ಶ್ರೀಮತಿ ಶ್ರೀ ಗುರುನಂಜಪ್ಪ ಗೌಡ್ರ ಹನುಮಂತಪ್ಪ, ಶ್ರೀಮತಿ ಪಂಕಜ ಶ್ರೀ ಶರತ್‌ಕುಮಾರ್ ಎಸ್.ಪಾಟೀಲ್ ದತ್ತಿ, ಕೋಟೆಹಾಳ್ ಶ್ರೀಮತಿ ಬಸಮ್ಮ ಹಂಪೋಳ್ ಶಿವಪ್ಪ ದತ್ತಿ, ದಿ. ಕೋಟೆ ಕರಿಗೌಡ್ರ ರುದ್ರಪ್ಪ ದತ್ತಿ ಕಾರ್ಯಕ್ರಮಗಳು ನಡೆದವು.
ಯು.ಎನ್. ಸಂಗನಾಳಮಠ, ಪಿ.ಎಂ. ಸಿದ್ಧಯ್ಯ, ಎನ್.ಎಚ್. ಗೋವಿಂದಪ್ಪ, ವಿದುಷಿ ಶಾಂತಾದೇವಿ ಹಿರೇಮಠ ಮತ್ತು ನಿವೃತ್ತ ಮುಖ್ಯ ಶಿಕ್ಷಕ ಜಿ.ಎಂ. ಹಿರೇಮಠ ಅವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು.