ಭದ್ರಾ ನಾಲೆ: ಎಡದಂಡೆಗೆ ಇಂದಿನಿಂದ ; ಬಲದಂಡೆಗೆ ಜ.೬ರಿಂದ ನಿರಂತರ ೧೨೦ದಿನಗಳ ಕಾಲ ನೀರು

332

ಮಲೆಬೆನ್ನೂರು: ಭದ್ರಾ ಎಡದಂಡೆ ನಾಲೆಗೆ ಭದ್ರಾ ಜಲಾಶಯದಿಂದ ಬೇಸಿಗೆ ಹಂಗಾಮಿನ ಬೆಳೆಗಳಿಗೆ ಜ.೧ರ ಇಂದಿನಿಂದ ಹಾಗೂ ಭದ್ರಾ ಬಲದಂಡೆ ನಾಲೆಗೆ ಜ.೬ ರಿಂದ ನಿರಂತರ ೧೨೦ ದಿನಗಳ ಕಾಲ ನಾಲೆಗಳಿಗೆ ನೀರು ಹರಿಸಲು ಅಧ್ಯಕ್ಷೆ ಪವಿತ್ರ ರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಕೊಳ್ಳಲಾಯಿತು.
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಅವರು ಪ್ರಾಧಿಕಾರದ ಇತಿಹಾಸದ ಮೊಟ್ಟ ಮೊದಲ ಬಾರಿಗೆ ಹರಿಹರ ತಾಲ್ಲೂಕಿನ ಮಲೆಬೆನ್ನೂರು ನೀರಾವರಿ ಇಲಾಖೆಯ ಸಭಾಂಗಣದಲ್ಲಿ ಭದ್ರಾ ಕಾಡ ಪ್ರಾಧಿಕಾರದ ೭೭ನೇ ನೀರು ಸಲಹಾ ಸಮಿತಿ ಸಭೆ ನಡೆಯಿತು.
ಕಳೆದ ಹದಿನೈದು ದಿನಗಳ ಹಿಂದೆ ಮಲೆಬೆನ್ನೂರು ಭಾಗದಲ್ಲಿ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಪತ್ರಿಕಾ ಮಿತ್ರರು ಹಾಗೂ ಅಚ್ಚುಕಟ್ಟು ಭಾಗದ ರೈತರು ನಮ್ಮ ಭಾಗದಲ್ಲಿ ಈ ಬಾರಿಯ ನೀರು ಸಲಹ ಸಮಿತಿ ಸಭೆ ನಡೆಸುವಂತೆ ಒತ್ತಾಯಿಸಿದ್ದರು. ಅದಕ್ಕೆ ಮನ್ನಣೆ ನೀಡಿ ತಕ್ಷಣವೇ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಸಭೆ ನಡೆಸುವಂತೆ ಆದೇಶಿಸಿದರು.
ಸಭೆಯಲ್ಲಿ ಪ್ರಮುಖವಾಗಿ ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟದ ಬಗ್ಗೆ ಚರ್ಚಿಸಲಾಯಿತು. ಅಧ್ಯಕ್ಷರು ಸಭೆಯನ್ನು ಕುರಿತು ಮಾತನಾಡಿ, ಪ್ರಸಕ್ತ ಸಾಲಿನ ಬೇಸಿಗೆ ಹಂಗಾಮಿಗೆ ಭದ್ರಾ ಅಚ್ಚು ಕಟ್ಟಿನ ಕೊನೆಯ ಭಾಗದ ರೈತರ ಜಮೀನುಗಳಿಗೆ ನೀರು ತಲುಪಿಸುತ್ತೇನೆ ಎಂದು ಭರವಸೆ ನೀಡಿದರು.
ಇಲಾಖೆಯ ಇಂಜಿನಿಯರ್ ಗಳಿಗೆ ಬೇಸಿಗೆಯಲ್ಲಿ ಕೇವಲ ಮೂರು ತಿಂಗಳು ಮಾತ್ರ ಕೆಲಸ ಇರುತ್ತದೆ. ಈ ಸಮಯದಲ್ಲಿ ಅಧಿಕಾರಿಗಳು ಹಗಲಿರುಳು ಶ್ರಮಸಬೇಕು ಯಾವ ಸಮಯದದರೂ ನಾನು ಸ್ಥಳಕ್ಕೆ ಭೇಟಿ ನೀಡಬಹುದು. ಈ ಮೂರು ತಿಂಗಳ ಅವಧಿಯಲ್ಲಿ ಅಧಿಕಾರಿಗಳಿಗೆ ಮಲಗುವುದಕ್ಕೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ನನ್ನ ಅಧಿಕಾರದ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಇಚ್ಚಿಸುತ್ತೇನೆ. ಇದಕ್ಕಾಗಿ ಸರ್ಕಾರವೂ ಕೂಡ ನನ್ನೊಂದಿಗೆ ೯ ಮಂದಿ ಕಾಡ ನಿರ್ದೇಶಕರನ್ನಾಗಿ ನೇಮಕ ಮಾಡಿzರೆ. ನಾವೆಲ್ಲರೂ ಒಗ್ಗೂಡಿ ಕೊನೆಯ ಭಾಗಕ್ಕೆ ನೀರು ತಲುಪಿಸಲು ಶ್ರಮಿಸುತ್ತೇವೆ ಎಂದು ಉತ್ತರಿಸಿದರು.
ಸೌಡಿಗಳ ವೇತನ ಸಮಸ್ಯೆ ಬಗ್ಗೆ ನನಗೆ ಅರಿವಿದ್ದು ಅದನ್ನು ಸರಕಾರ ದೊಂದಿಗೆ ಚರ್ಚಿಸಿ ಇತ್ಯರ್ಥಪಡಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.
ಅಕ್ರಮ ಪಂಪ್ಸೆಟ್ ತೆರವು ಗೊಳಿಸುವ ಬಗ್ಗೆ ವಿಶೇಷವಾಗಿ ಚರ್ಚೆ ನಡೆಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಅಕ್ರಮ ಪಂಪ್ಸೆಟ್ ತೆರವು ಗೊಳಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದ್ದು ಅದರ ಆದೇಶ ವನ್ನು ಇಟ್ಟುಕೊಂಡು ನ್ಯಾಯ ಪಡೆಯುವಂತೆ ಹೇಳಿದರು.
ಭದ್ರಾವತಿ ಶಿವಮೊಗ್ಗ ಭಾಗದ ಕಾಡ ಸದಸ್ಯರುಗಳು ಮುಖಂಡರುಗಳು ಎಡದಂಡೆ ನಾಲೆ ವ್ಯಾಪ್ತಿಯ ತೋಟಗಳು ಒಣಗುತ್ತಿದೆ. ಎಡದಂಡೆ ನಾಲೆಗೆ ಕೇವಲ ೩೫೦ ಕ್ಯೂಸೆಕ್ಸ್ ನೀರು ಬೇಕಾಗುತ್ತದೆ ನಾಳೆಯಿಂದಲೇ ನಾಲೆಗೆ ನೀರು ಹರಿಸಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.
ದಾವಣಗೆರೆ ಜಿಯ ಕಾಡ ಸದಸ್ಯರುಗಳು ರೈತ ಮುಖಂಡರು ಇದೀಗ ಭತ್ತದ ಸಸಿ ಮಡಿ ಮಾಡಿರುವು ದರಿಂದ ಜ. ೧೦ ಅಥವಾ ೧೫ರಿಂದ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿದರು.
ಕಳೆದ ೨೦ ವರ್ಷಗಳ ಹಿಂದೆ ಭದ್ರಾ ನಾಲೆಯಲ್ಲಿ ೧೪೫ ರಿಂದ ೧೫೦ ದಿನ ನಾಲೆಯಲ್ಲಿ ನೀರು ಹರಿಸುತ್ತಿದ್ದು ನಾಳೆಯಿಂದಲೇ ನೀರು ಹರಿಸಿದರೆ ಯಾವುದೇ ತೊಂದರೆ ಇಲ್ಲ ಎಂದು ಎಡನಾಲ ರೈತರು ಹೇಳಿದರು.
ಭದ್ರ ಡ್ಯಾಮ್ ಕುಡಿಯುವ ನೀರು ಸೇರಿದಂತೆ ವಿವಿಧ ಉದ್ದೇಶಗಳಿಗೆ ಮೀಸಲಿರಿಸಿದ್ದು ಹಿಂದಿನ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ವ್ಯತ್ಯಾಸವಿದೆ ಎಂದು ರೈತ ಮುಖಂಡ ಎಚ್. ಆರ್.ಬಸವರಾಜಪ್ಪನವರು ಇದಕ್ಕೆ ಉತ್ತರ ನೀಡಿದರು.
ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ ನೀರು ಲಿಫ್ಟ್ ಮಾಡದೆ ಕೇವಲ ಭದ್ರ ಡ್ಯಾಮಿನಿಂದ ಪ್ರತಿದಿನ ೭೦೦ ಕ್ಯೂಸೆಕ್ಸ್ ನೀರು ಹೋಗುತ್ತಿದ್ದು, ನಮಗೆ ಬೇಸಿಗೆ ಬೆಳೆಗೆ ನೀರಿನ ಕೊರತೆ ಉಂಟಾಗುತ್ತದೆ. ತಕ್ಷಣವೇ ಅಪ್ಪರ್ ಭದ್ರಾಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಲು ರೈತರು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರೈತ ಮುಖಂಡ ಬಸವರಾಜಪ್ಪ ತುಂಗಾ ಡ್ಯಾಮ್ ನಿಂದ ೧೭.೪ ಟಿಎಂಸಿ ಹಾಗೂ ಭದ್ರ ಡ್ಯಾಮಿನಿಂದ ೧೨.೫ ಟಿಎಂಸಿ ಒಟ್ಟು ೨೯ ಟಿಎಂಸಿ ನೀರು ಅಪ್ಪರ್ ಭದ್ರಾ ಗೆ ಕೊಡಲು ನಿರ್ಣಯವಾಗಿದೆ. ಭದ್ರಾ ದಿಂದ ನಿಗದಿಪಡಿಸಿದ ೧೨.೫ ಟಿಎಂಸಿ ನೀರನ್ನು ಸಹ ತುಂಗಾ ದಿಂದಲೇ ತೆಗೆದುಕೊಳ್ಳುವಂತೆ ಹೋರಾಟ ಮಾಡಬೇಕು. ಜೊತೆಗೆ ಮೂರು ದಿನಗಳೊಳಗೆ ಅಪ್ಪರ್ ಭದ್ರಾ ಗೆ ನೀರು ನಿಲ್ಲಿಸಲು ಪ್ರಯತ್ನ ಮಾಡೋಣ ಎಂದರು.
ಈಗಾಗಲೇ ಅಪ್ಪರ್ ಭದ್ರಾಗೆ ನೀರು ನಿಲ್ಲಿಸುವುದಾಗಿ ಸರ್ಕಾರದಿಂದ ಭರವಸೆ ಸಿಕ್ಕಿದ್ದು ಎಂದು ಸಚಿವ ರಮೇಶ್ ಜರಕಿಹೊಳಿ ಅವರೊಟ್ಟಿಗೆ ಮಾತನಾಡಿರುವುದಾಗಿ ಸಭೆಗೆ ತಿಳಿಸಿದರು.
ಇದಕ್ಕೆ ದನಿಗೂಡಿಸಿದ ಕಾಡ ಅಧ್ಯಕ್ಷರು ಸಚಿವರೊಂದಿಗೆ ಮಾತನಾ ಡಿದ್ದು, ನೀರು ನಿಲ್ಲಿಸಲು ಒತ್ತಾಯಿಸಿ ದ್ದೇನೆ.ಇದಕ್ಕೆ ಸಚಿವರು ಒಪ್ಪಿಗೆ ನೀಡಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿ ತಕ್ಷಣವೇ ನಿಲ್ಲಿಸಲು ಅದೇಶಿಸುತ್ತೆನೆ ಎಂದು ಹೇಳಿzರೆ ಎನ್ನುವ ವಿಷಯ ಸಭೆಯ ಗಮನಕ್ಕೆ ತಂದರು.
ಮಾಜಿ ಶಾಸಕರಾದ ಡಿಜಿ ಶಾಂತನಗೌಡ ಅವರು ಮಾತನಾಡಿ ಅಕ್ರಮ ಪಂಪ್ಸೆಟ್ ಅಳವಡಿಸಿ ಕೊಂಡಿರುವುದರಿಂದ ಕೊನೆಯ ಭಾಗಕ್ಕೆ ನೀರು ತಲುಪುವುದು ವಿಳಂಬವಾಗು ತ್ತಿದೆ ಎಂದು ಸಭೆಯ ಗಮನಕ್ಕೆ ತಂದರು.
ಭದ್ರಾ ಯೋಜನೆ ವತ್ತದ ಅಧೀಕ್ಷಕ ಅಭಿಯಂತ ಚಂದ್ರಹಾಸ್ ಮಾತನಾಡಿ ಭದ್ರ ಡ್ಯಾಮ್ ನಲ್ಲಿ ಪ್ರಸ್ತುತ ೧೭೮.೬ ಅಡಿ ನೀರಿದ್ದು, ೬೨.೪೫೬ ಟಿಎಂಸಿ ನೀರಿನ ಸಂಗ್ರಹವಿದ್ದು, ಇದರಲ್ಲಿ ೧೩ ಟಿಎಂಸಿ ಡೆಡ್ ಸ್ಟೋರೇಜ್, ಎರಡು ಟಿಎಂಸಿ ಆವಿಯಾಗಲಿದ್ದು, ಕುಡಿಯುವ ನೀರು ಹಾಗೂ ಕೈಗಾರಿಕೆ ಗಳಿಗೆ ೭.೦೪೮೪ ಟಿಎಂಸಿ ಕಳೆದರೆ ೪೪.೮೨೪ ಟಿಎಂಸಿ ನೀರನ್ನು ಕಷಿ ಬಳಕೆಗೆ ಸುಮಾರು ೧೨೦ ದಿನಗಳವರೆಗೆ ಉಪಯೋಗಿಸಬಹುದು ಎಂದರು.
ಈ ಸಭೆಯಲ್ಲಿ ಶಾಸಕರಾದ ಎಸ್ ರಾಮಪ್ಪ, ಪ್ರೊಫೆಸರ್ ಲಿಂಗಣ್ಣ ಹಾಗೂ ಎ ಕಾಡ ಸದಸ್ಯರುಗಳು, ನೀರು ಬಳಕೆದಾರರ ಸಹಕಾರ ಸಂಘಗಳ ಅಧ್ಯಕ್ಷರಾದ ದ್ಯಾವಪ್ಪ ರೆಡ್ಡಿ ಹಾಗೂ ತೇಜಸ್ವಿ ಪಟೇಲ್, ಹಾಗೂ ರಕ್ಷಣಾ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.