ಬ್ರಾಂಡೆಡ್ ಕಂಪನಿಗಳ ಡೂಪ್ಲಿಕೇಟ್ ವಸ್ತು ಮಾರಾಟದ ಆರೋಪ: ಚಿರಾಗ್ ಇರಿಗೇಷನ್ ವಿವಿಧ ಇಲಾಖೆಯಿಂದ ದಾಳಿ

728

ಶಿವಮೊಗ್ಗ: ನಗರದ ಗಾರ್ಡನ್ ಏರಿಯಾದ ೧ನೇ ಕ್ರಾಸ್‌ನಲ್ಲಿರುವ ಪ್ರತಿಷ್ಠಿತ ಚಿರಾಗ್ ಇರಿಗೇಶನ್‌ನ ಶೋರೂಂ ಮತ್ತು ಗೋಡನ್ ಮೇಲೆ ಐಟಿ ಹಾಗೂ ಇತರೆ ಇಲಾಖೆಯಿಂದ ದಿಢೀರ್ ದಾಳಿ ನಡೆದಿದೆ.
ಚಿರಾಗ್ ಇರಿಗೇಷನ್ಸ್‌ನಲ್ಲಿ ಪ್ರತಿಷ್ಠಿತ ಬ್ರಾಂಡೆಡ್ ವಸ್ತುಗಳನ್ನು ನಕಲಿ ರೂಪದಲ್ಲಿ ಮಾರಾಟ ಮಾಡಿರುವ ಆರೋಪದ ಮೇಲೆ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ.
ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಕಲಾಂ ಕಂಪನಿಯ ಕಾಪಿರೈಟ್ (ಕಂಪನಿಯ ನಕಲಿ ಮಾಡುವವರ ವಿರೋಧ ಇಲಾಖೆ) ಮತ್ತು ಐಟಿ ಇಲಾಖೆ ದಾಳಿ ನಡೆಸಿದೆ.
ಮೇಲ್ನೋಟಕ್ಕೆ ಕಂಡು ಬಂದ ವಿಷಯ ಏನೆಂದರೆ ಬ್ರಾಂಡೆಡ್ ಕಂಪನಿಗಳ ಹೆಸರಿನಲ್ಲಿ ಡೂಪ್ಲಿಕೇಟ್ (ನಕಲಿ) ಮಾಡಿ ಮಾರಾಟ ಮಾಡುತ್ತಿದ್ದಾರೆಂಬ ಗಂಭೀರ ಆರೋಪಗಳು ಕೇಳಿಬಂದಿದ್ದಿರಿಂದ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ದೇಶದ ಜೀವನಾಡಿ ಹಾಗೂ ಬೆನ್ನೆಲುಬಾದ ಅನ್ನದಾತರೇ ಇವರ ಈ ವಂಚನೆಗೆ ಟಾರ್ಗೆಟ್. ಪ್ರತಿಷ್ಠಿತ ಕಂಪನಿಗಳಿಂದ ತಯಾರಾದ ಕೃಷಿಗೆ ಸಂಬಂಧಿಸಿದ ಉಪಕರಣಗಳನ್ನು ಅತಿ ಕಡಿಮೆ ದರದಲ್ಲಿ ನೀಡುವುದಾಗಿ ನಂಬಿಸಿ, ಅವರ ವಿಶ್ವಾಸಗಳಿಸಿ ನಂತರ ಇಂತಹ ಅಮಾಯಕರಿಗೆ ನಕಲಿ ವಸ್ತುಗಳನ್ನು ನೀಡುವ ಮೂಲಕ ವಂಚಿಸುತ್ತಿದ್ದರು ಎಂಬ ಆರೋಪಗಳು ಕೇಳಿಬಂದಿವೆ.
ನಾಡಿನ ರೈತರು ಇನ್ನಾದರೂ ಎಚ್ಚೆತ್ತುಕೊಂಡು ಈ ರೀತಿಯ ಆಮಿಷಗಳಿಗೆ ಬಲಿಯಾಗದೆ, ಸರಿಯಾದ ಮಾಹಿತಿ ಪಡೆದು, ತಾವು ಖರೀದಿಸುವ ವಸ್ತುಗಳ ಅಸಲಿಯತ್ತನ್ನು ಪರೀಕ್ಷಿಸಿ ಅಧಿಕೃತ ಮಾರಾಟಗಾರರಿಂದಲೇ ಖರೀದಿಸಬೇಕೆಂದು ಮನವಿ ಮಾಡಲಾಗಿದೆ.
ಜಿಲ್ಲೆಯಲ್ಲಿ ಇಂತಹ ಅದೆಷ್ಟು ನಕಲಿ ಉತ್ಪಾದಕರಿದ್ದಾರೆಂಬುದನ್ನು ಪತ್ತಿ ಹಚ್ಚಬೇಕಿದ್ದು, ಈ ರೀತಿಯ ವಂಚಕರ ಪತ್ತೆಗೆ ಅಧಿಕೃತ ಮಾರಾಟಗಾರರು ಹಾಗೂ ಗ್ರಾಹಕರು ಸಹಕರಿಸಬೇಕಿದೆ.
ಸಂಬಂಧಪಟ್ಟ ಇಲಾಖೆಗಳು ಜಿಲ್ಲೆಯಲ್ಲಿರುವ ಪ್ರತಿ ಅಂಗಡಿ ಮುಂಗಟ್ಟುಗಳನ್ನು ಪರಿಶೀಲಿಸಿ ಇಂತಹ ವಂಚಕರನ್ನು ಮಟ್ಟಹಾಕುವ ಮೂಲಕ ನಕಲಿ ಉತ್ಪಾದನೆ ಮತ್ತು ಮಾರಾಟಕ್ಕೆ ಬ್ರೇಕ್ ಹಾಕಬೇಕಿದೆ.