ಬ್ಯಾಂಕಿಂಗ್ ಸೇವೆಗಳ ಕುರಿತು ಮಾಹಿತಿ ಬಿಡುಗಡೆ

446

ಶಿವಮೊಗ್ಗ, ಮಾರ್ಚ್ ೨೪ (ಕರ್ನಾಟಕ ವಾರ್ತೆ) : ಜಿಲ್ಲೆಯಲ್ಲಿ ಕರೋನಾ ವೈರಸ್ ಹರಡದಂತೆ ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಮಟ್ಟದ ಬ್ಯಾಂಕ್‌ಗಳ ಸಮಿತಿ (ಎಸ್.ಎಲ್.ಬಿ.ಸಿ) ಸೂಚನೆಯ ಮೇರೆಗೆ ಬ್ಯಾಂಕ್‌ಗಳ ಸೇವೆಯಗಳ ಕುರಿತು ಮಾಹಿತಿ ನೀಡಿರುತ್ತಾರೆ. ಬ್ಯಾಂಕ್ ಶಾಖೆಗಳಲ್ಲಿ ಹಣ ಹಿಂತೆಗೆಯುವುದು, ಜಮಾವಣೆ ಸೇವೆ, ಚೆಕ್ ವಿಲೇವಾರಿ, ಹಣ ವರ್ಗಾವಣೆ ಸೇವೆಗಳು ಇರುತ್ತದೆ. ಬ್ಯಾಂಕಿನ ಶಾಖೆಗಳಲ್ಲಿ ನಿಯಮಿತ ಸಿಬ್ಬಂದಿಗಳು ಮಾತ್ರ ಇದ್ದು, ಗ್ರಾಹಕರು ಪ್ರತಿ ಐದು ಜನರಂತೆ ಸರದಿ ಸಾಲಿನಲ್ಲಿ ಬ್ಯಾಂಕಿನೊಳಗೆ ಪ್ರವೇಶ ಮಾಡುವುದು.  ಪಾಸ್‌ಪುಸ್ತಕ ಪ್ರಿಂಟಿಂಗ್ ಸೇವೆ ಲಭ್ಯವಿರುವುದಿಲ್ಲ. ಆದರೆ ಗ್ರಾಹಕರು ಪಾಸ್‌ಪುಸ್ತಕದೊಂದಿಗೆ ಬರಬೇಕು.  ಬ್ಯಾಂಕ್ ಗ್ರಾಹಕರ ಸೇವೆ ಹಾಗೂ ಭದ್ರತೆ ಬ್ಯಾಂಕಿನ ಆದ್ಯ ಕರ್ತವ್ಯವಾಗಿದ್ದು, ವಯಸ್ಸಾದ ವ್ಯಕ್ತಿಗಳು ಅತ್ಯಾವಶ್ಯಕವಿದ್ದಲ್ಲಿ ಮಾತ್ರ ಬ್ಯಾಂಕಿಗೆ ಭೇಟಿ ನೀಡುವುದು.  ಅನಾರೋಗ್ಯ ಪೀಡಿತ ವ್ಯಕ್ತಿಗಳು ಭೇಟಿ ನೀಡಬಾರದು.  ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಡಿಜಿಟಲ್, ಮೊಬೈಲ್, ಇಂಟರ್‌ನೆಟ್ ಬ್ಯಾಂಕಿಂಗ್ ಸೇವೆಯನ್ನು ಬಳಸಬೇಕೆಂದು ಜಿಲ್ಲಾ ಮಾರ್ಗದರ್ಶಿ ವಿಭಾಗೀಯ ಪ್ರಬಂಧಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.