ಬಿಜೆಪಿಯವರು ಹಣ ಸುರಿದು ಪ್ರಚಾರ ಮಾಡಿದರೆ ನಾವು ಜನರ ಬಳಿ ಹೋಗಿ ವಿಶ್ವಾಸ ಗಳಿಸಿದ್ದೇವೆ: ಸಿದ್ದರಾಮಯ್ಯ

410

ಶಿವಮೊಗ್ಗ : ಇತ್ತೀಚೆಗೆ ನಡೆದ ಸಿರಾ ಮತ್ತು ಆರ್.ಆರ್. ನಗರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಎಂಬ ವಿಶ್ವಾಸ ನನಗಿದೆ. ನಾನು ನಾಲ್ಕೈದು ದಿ ಅ ಇದ್ದು ಗಮನಿಸಿದ್ದೇನೆ. ಬಿಜೆಪಿಯವರು ಹಣ ನೀಡಿ ಚುನಾವಣೆ ಮಾಡಿzರೆ. ಆದರೆ ನಾವು ಜನರ ಬಳಿ ಹೋಗಿದ್ದೇವೆ. ಸಿ ವೋಟರ್ ಸೇರಿದಂತೆ ಸಮೀಕ್ಷೆಗಳು ಯಾವ ಆಧಾರದ ಮೇಲೆ ನಡೆದಿದೆ ಎಂಬುದು ನನಗೆ ಗೊತ್ತಿಲ್ಲವೆಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದರು.
ನಗರದ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರ ಚುನಾವಣೆ ಫಲಿತಾಂಶ ನಿರೀಕ್ಷಿತ. ಸಮೀಕ್ಷೆಗಿಂತ ಮುಖ್ಯವಾಗಿ ಜನರು ಬದಲಾವಣೆ ಬಯಸಿದ್ದರು. ವಿಶೇಷವಾಗಿ ಯುವ ಜನತೆ ನಿತೀಶ್ ಕುಮಾರ್‌ಗೆ ವಿರುದ್ಧ ವಾಗಿದ್ದರು. ಮೋದಿ ಸರ್ಕಾರದ ಬಗ್ಗೆ ಭ್ರಮನಿರಸನಗೊಂಡಿದ್ದರು. ವಲಸಿಗರ ಸಮಸ್ಯೆ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸದಿರುವುದೂ ಮುಖ್ಯ ಕಾರಣ ಹಾಗೂ ಅಲ್ಲಿ ಆಡಳಿತ ವಿರೋಧಿ ಅಲೆ ಇತ್ತು ಎಂದರು.
ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ರಾಜಕೀಯ ಪ್ರೇರಿತ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸರು ವಿಚಾರಣೆ ನಡೆಸಿ ಚಾರ್ಜ್ ಶೀಟ್ ಹಾಕಿದ್ದರು. ಸಿಬಿಐಗೆ ವಹಿಸಿದ ಮೇಲೆ ಮತ್ತೊಮ್ಮೆ ವಿಚಾರಣೆ ಮಾಡಿ ಸಿಲುಕಿಸುವ ಕೆಲಸ ಮಾಡಿzರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಒತ್ತಡದಿಂದ ಈ ಕೆಲಸ ನಡೆದಿದೆ. ಏಕಂದರೆ ಕುಲಕರ್ಣಿ ಅವರು ಜೋಶಿ ವಿರುದ್ಧ ಸ್ಪರ್ಧಿಸಿದ್ದರು. ಇದು ಬೆದರಿಕೆ ಇಂತಹ ಬೆದರಿಕೆಯ ತಂತ್ರಗಳಿಗೆ ನಾವು ಹೆದರುವ ಪ್ರಶ್ನೆಯೇ ಇಲ್ಲ ಎಂದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಷಯಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ. ನನಗೆ ಇರುವ ಮಾಹಿತಿ ಆಧಾರದ ಮೇಲೆ ಹಾಗೆ ಹೇಳಿದ್ದೇನೆ. ಅಲ್ಲಿ ಎರಡು ಮೂರು ಗುಂಪುಗಳಿವೆ. ಮೂರ್ನಾಲ್ಕು ತಿಂಗಳ ಹಿಂದೆಯೇ ಈ ಪ್ರಯತ್ನ ನಡೆದಿದೆ. ಬಿಹಾರದ ಚುನಾವಣೆ ನಂತರ ಇದು ಮತ್ತೆ ಚಾಲ್ತಿಗೆ ಬರುವ ಸಾಧ್ಯತೆ ಇದೆ ಎಂದು ನುಡಿದರು.
ಲವ್ ಜಿಹಾದ್ ಮತ್ತು ಮತಾಂತರ ನಿಷೇಧ ಕಾಯ್ದೆ ಜಾರಿಯಿಂದ ಸಾಂವಿಧಾನಿಕವಾಗಿ ಮೂಲಭೂತ ಹಕ್ಕುಗಳಿಗೆ ಧಕ್ಕೆ ಬರಲಿದೆ. ನಾನು ಯಾವ ಜಾತಿಯಲ್ಲಿರ ಬೇಕು, ಯಾವ ಧರ್ಮದಲ್ಲಿರಬೇಕು ಎಂಬ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ನನಗೆ ಬಿಟ್ಟಿದ್ದು. ಮತ್ತು ಅದು ನನ್ನ ಹಕ್ಕು ಎಂದು ಪ್ರತಿಪಾದಿಸಿದರು.
ಶಿವಮೊಗ್ಗ ಜಿಯ ಸ್ಥಳೀಯ ಸಂಸ್ಥೆಗಳಲ್ಲಿ ಆಪರೇಷನ್ ಕಮಲದ ಬಗ್ಗೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿ, ಆಪರೇಷನ್ ಕಮಲದ ಜನಕನೇ ಯಡಿಯೂರಪ್ಪ. ಆ ಪದವೇ ಗೊತ್ತಿರಲಿಲ್ಲ. ೨೦೦೮ರಲ್ಲಿ ಅದನ್ನು ಚಾಲ್ತಿಗೆ ತಂದಿದ್ದೇ ಯಡಿಯೂರಪ್ಪ ಎಂದರಲ್ಲದೇ ಇಂತಹ ಕೀಳುಮಟ್ಟದ ರಾಜಕಾರಣ ಜನತೆಗೆ ಪರಿಚಯಿಸಿದ್ದೇ ಬಿಜೆಪಿ ಈ ಮೂಲಕ ಭವ್ಯ ಭಾರತದ ಸಂವಿಧಾನಕ್ಕೆ ಒಂದು ಕಪ್ಪುಚುಕ್ಕೆ ಇಟ್ಟಹಾಕಿದೆ ಎಂದು ಬೇಸರ ವ್ಯಕ್ತಪಡಿಸಿದರು.