ಬಿಜೆಪಿಗೆ ಗೋವಿನ ಬಗ್ಗೆ ಕಾಳಜಿ ಇದ್ದರೆ ಗೋ ಮಾಂಸ ರಫ್ತು ನಿಲ್ಲಿಸಲಿ: ತೀನಾ

356

ಸಾಗರ : ನಗರವ್ಯಾಪ್ತಿಯಲ್ಲಿ ನೆನಗುದಿಗೆ ಬಿದ್ದಿರುವ ಕಾಮಗಾರಿ ಯನ್ನು ಮುಂದಿನ ಒಂದು ತಿಂಗಳಿನಲ್ಲಿ ಲೋಕಾರ್ಪಣೆಗೊಳಿಸದೆ ಹೋದಲ್ಲಿ ಶಾಸಕರ ಕಚೇರಿ ಎದುರು ಪ್ರತಿಭಟನೆ ಮಾಡುತ್ತೇವೆ ಎಂದು ಕಾಂಗ್ರೆಸ್ ಮಾಜಿ ಜಿಧ್ಯಕ್ಷ ಹಾಗೂ ಸಾಗರ ಕ್ಷೇತ್ರ ಅಭಿವೃದ್ದಿ ಹೋರಾಟ ಸಮಿತಿ ಸಂಚಾಲಕ ತೀ.ನ.ಶ್ರೀನಿವಾಸ್ ಎಚ್ಚರಿಕೆ ನೀಡಿzರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರವ್ಯಾಪ್ತಿಯಲ್ಲಿ ಕಾಗೋಡು ತಿಮ್ಮಪ್ಪ ಅವರ ಅವಧಿಯಲ್ಲಿ ಮಂಜೂರಾಗಿದ್ದ ಅನೇಕ ಕಾಮಗಾರಿಗಳ ಅಭಿವೃದ್ದಿ ಕುಂಠಿತ ವಾಗಿದೆ. ಎರಡೂವರೆ ವರ್ಷದಲ್ಲಿ ಶಾಸಕರು ಕ್ಷೇತ್ರಕ್ಕೆ ತಂದ ಅನುದಾನ ಕಡಿಮೆಯಾಗಿದೆ. ಕಳೆದ ಎರಡೂವರೆ ವರ್ಷದಲ್ಲಿ ಸಾಗರ ಕ್ಷೇತ್ರದ ಅಭಿವೃದ್ದಿ ಏನಾಗಿದೆ, ಏನಾಗಿಲ್ಲ ಎನ್ನುವ ಕುರಿತು ಶಾಸಕರು ಮತ್ತು ಬಿಜೆಪಿಯವರು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಈಜುಕೊಳ ಮತ್ತು ಒಳಾಂಗಣ ಕ್ರೀಡಾಂಗಣ ಕಳಪೆಯಾಗಿದೆ ಎಂದು ಶಾಸಕರು ಬಹಿರಂಗ ಹೇಳಿಕೆ ನೀಡಿದ್ದರು. ಜೊತೆಗೆ ಖಾಸಗಿ ಬಸ್ ನಿಲ್ದಾಣ ಪೂರ್ಣಗೊಂಡಿದ್ದರೂ ಲೋಕಾರ್ಪಣೆ ಮಾಡಿಲ್ಲ. ಸಂತೆ ಮಾರುಕಟ್ಟೆ ಉಪಯೋಗಕ್ಕೆ ಬರದಂತೆ ಆಗಿದೆ. ಮೀನು ಮಾರುಕಟ್ಟೆ ಕಾಮಗಾರಿ ಪೂರ್ಣಗೊಂಡಿಲ್ಲ. ಸಮಿತಿ ವಿವಿಧ ವೈಫಲ್ಯಗಳನ್ನು ಈಗಾಗಲೆ ಶಾಸಕರ ಎದುರು ಇರಿಸಿದೆ. ಅದನ್ನು ಪೂರ್ಣಗೊಳಿಸದೆ ಹೋದಲ್ಲಿ ಬೃಹತ್ ಧರಣಿಯನ್ನು ಶಾಸಕರ ಕಚೇರಿ ಎದುರು ಹಮ್ಮಿಕೊಳ್ಳುವುದು ಅನಿವಾರ್ಯ ವಾಗುತ್ತದೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಸಾಗರ ಕ್ಷೇತ್ರಕ್ಕೆ ಅನ್ಯಾಯ ಮಾಡುತ್ತಿ zರೆ. ರೈಲ್ವೆ ಟರ್ಮಿನಲ್ ತಾಳಗುಪ್ಪಕ್ಕೆ ಬಂದಿದ್ದು ಕೋಟೆಗಂಗೂರಿಗೆ ಹೋಗಲು ಸಂಸದರ ವಿಶೇಷ ಆಸಕ್ತಿಯೆ ಕಾರಣವಾಗಿದೆ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿಹಕ್ಕು ಸಿಕ್ಕಿಲ್ಲ. ಶಿಕಾರಿಪುರದ ಪ್ರತಿಯೊಂದು ರಸ್ತೆಯೂ ಸಿಮೆಂಟ್ ರಸ್ತೆ ಮಾಡಲಾಗಿದೆ. ಅಡಿಕೆ ಹಾನಿಕಾರಕ ಎಂದು ತೆಗೆಸುತ್ತೇವೆ ಎಂದು ಹೇಳಿದವರು ಲೋಕಸಭೆಯಲ್ಲಿ ಸಣ್ಣಧ್ವನಿ ಎತ್ತಿಲ್ಲ. ಒಟ್ಟಾರೆ ಕ್ಷೇತ್ರ ವ್ಯಾಪ್ತಿಯ ಅಭಿವೃದ್ದಿ ಕುಂಠಿತವಾಗಿದೆ. ಸಾಗರ ಕ್ಷೇತ್ರಕ್ಕೆ ಮಲತಾಯಿಧೋರಣೆ ಮಾಡುತ್ತಿರುವ ಶಾಸಕರು, ಸಂಸದರು, ಜಿ ಉಸ್ತುವಾರಿ ಸಚಿವರ ಕಚೇರಿ ಎದುರು ಪ್ರತಿಭಟನೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಈಗಾಗಲೆ ಶಿವಮೊಗ್ಗದ ಪ್ರಮುಖ ವೃತ್ತಗಳಲ್ಲಿ ಬಿಜೆಪಿ ಕಾರ್ಯಕಾರಿಣಿ ಹಿನ್ನೆಲೆಯಲ್ಲಿ ಗೋವಿನ ಚಿತ್ರಗಳನ್ನು ಹಾಕಿದೆ. ಇದು ನಿಜಕ್ಕೂ ಹಾಸ್ಯಾಸ್ಪದ. ಬಿಜೆಪಿಯವರಿಗೆ ಗೋವಿನ ಬಗ್ಗೆ ಕಾಳಜಿ ಇಲ್ಲ. ಬದಲಾಗಿ ಅದನ್ನು ಮತಬ್ಯಾಂಕ್ ಆಗಿ ಪರಿವರ್ತನೆ ಮಾಡಿಕೊಳ್ಳುತ್ತಿ zರೆ. ಅತಿಹೆಚ್ಚು ಗೋಮಾಂಸ ರಫ್ತು ಬಿ.ಜೆ.ಪಿ. ಸರ್ಕಾರದ ಅವಧಿಯಲ್ಲಿಯೆ ಆಗುತ್ತಿದೆ. ಬಿಜೆಪಿಯವರಿಗೆ ಗೋವಿನ ಬಗ್ಗೆ, ಗೋಸಂತತಿ ಬಗ್ಗೆ ಇರುವುದು ಕಪಟ ನಾಟಕ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಗೋವಿನ ಬಗ್ಗೆ ಕಾಳಜಿ ಇದ್ದರೆ ಗೋಮಾಂಸ ರಫ್ತು ನಿಲ್ಲಿಸಲಿ ಎಂದು ಒತ್ತಾಯಿಸಿದ ಅವರು ಬಹುಸಂಖ್ಯಾತ ಹಿಂದುಗಳನ್ನು ಆಕರ್ಷಣೆ ಮಾಡಲು ಬಿಜೆಪಿಯವರು ಗೋವಿನ ಫೋಟೋ ಹಾಕಿಕೊಂಡಿzರೆ ಎಂದು ದೂರಿದರು.
ಕೆಎಸ್‌ಆರ್‌ಟಿಸಿ ಸಲಹಾ ಸಮಿತಿ ಮಾಜಿ ಸದಸ್ಯ ಮಹಾಬಲೇಶ್ವರ ಶೇಟ್ ಮಾತನಾಡಿ, ಸರ್ಕಾರಿ ಬಸ್‌ಗಳಲ್ಲಿ ಹಿರಿಯ ನಾಗರೀಕರಿಗೆ ಪ್ರಯಾಣಿಸುವ ವೇಳೆ ನೀಡುತ್ತಿದ್ದ ವಿನಾಯಿತಿಯನ್ನು ರಾಜ್ಯ ಸರ್ಕಾರ ರದ್ದು ಮಾಡಿರುವ ಕ್ರಮ ಖಂಡನೀಯ. ಇದರಿಂದ ಹಿರಿಯ ನಾಗರೀಕರು ಪೂರ್ಣ ಹಣ ನೀಡಿ ಸರ್ಕಾರಿ ಬಸ್‌ಗಳಲ್ಲಿ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ರಾಜ್ಯ ಸರ್ಕಾರ ಹಿರಿಯ ನಾಗರೀಕರಿಗೆ ಬಸ್ ಶುಲ್ಕವನ್ನು ಕಡಿತಗೊಳಿಸಬೇಕು ಎಂದು ಒತ್ತಾಯಿಸಿದರು.
ಗೋಷ್ಟಿಯಲ್ಲಿ ನಗರಸಭೆ ಸದಸ್ಯ ಸೈಯದ್ ಜಕೀರ್, ಪ್ರಮುಖರಾದ ಮಹ್ಮದ್ ಖಾಸಿಂ, ಎಲ್.ವಿ. ಸುಭಾಷ್, ಪುಟ್ಟಪ್ಪ, ವಸಂತ ಶೇಟ್, ಗೋಪಾಲಕಷ್ಣ ಹಾಜರಿದ್ದರು.