ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ಸಲ್ಲದು: ಪೂಜಾರ್

499

ಹೊನ್ನಾಳಿ: ಬಾಲ್ಯವಿವಾಹ ಕಾನೂನು ಪ್ರಕಾರ ಅಪರಾಧ. ಆದ್ದರಿಂದ, ಎಲ್ಲರೂ ಈ ಬಗ್ಗೆ ನಿಗಾ ವಹಿಸಿ ಬಾಲ್ಯವಿವಾಹ ಆಗದಂತೆ ತಡೆಯಬೇಕು ಎಂದು ಸಿಡಿಪಿಒ ಮಹಾಂತೇಶ್ ಪೂಜಾರ್ ಹೇಳಿದರು.
ತಾಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ನಡೆಸಲುದ್ದೇಶಿಸಿದ್ದ ಬಾಲ್ಯವಿವಾಹ ತಡೆದು, ಪೋಷಕರಿಗೆ ಜಾಗೃತಿ ಮೂಡಿಸಿ, ಮಾಹಿತಿ ನೀಡಿ ಮಾತನಾಡಿದ ಅವರು, ೧೦೯೮ ಮಕ್ಕಳ ಸಹಾಯವಾಣಿಗೆ ದೂರವಾಣಿ ಕರೆ ಮೂಲಕ ದೂರು ಬಂದ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವತ್ತವಾಗಿ ಮದುವೆ ಯನ್ನು ತಡೆದಿದ್ದೇವೆ. ಯಾರೂ ಕೂಡ ಇಂಥ ಮದುವೆಗಳಿಗೆ ಪ್ರೋತ್ಸಾಹ ನೀಡಬಾರದು ಎಂದರು.
ಬಾಲಕಿಯ ಮನಸ್ಸು, ದೇಹ ವಿಕಸನಗೊಳ್ಳದ ಹೊರತು ಮದುವೆ ಸಲ್ಲದು. ಬಾಲ್ಯವಿವಾಹದಿಂದ ಅನೇಕ ಮನೋದೈಹಿಕ ತೊಂದರೆಗಳು ಕಾಣಿಸಿ ಕೊಳ್ಳುತ್ತವೆ. ೧೮ ವರ್ಷಗಳೊಳಗಿನ ಯುವತಿ ಮದುವೆ ಆದರೆ, ಜನಿಸುವ ಮಕ್ಕಳು ಸಮರ್ಪಕ ಬೆಳವಣಿಗೆ ಹೊಂದಿರುವುದಿಲ್ಲ, ಅಪೌಷ್ಟಿಕವಾಗು ತ್ತವೆ. ಯುವತಿಯ ದೇಹ ಮಗುವನ್ನು ಪೋಷಿಸುವ ಶಕ್ತಿ ಹೊಂದಿರುವುದಿಲ್ಲ. ನಾನಾ ಕಾಯಿಲೆಗಳು ಬಾಧಿಸುತ್ತವೆ. ಆದ್ದರಿಂದ, ಬಾಲ್ಯವಿವಾಹಕ್ಕೆ ಬ್ರೇಕ್ ಹಾಕಬೇಕು ಎಂದು ವಿವರಿಸಿದರು.
ಬಾಲಕಿಯ ಶಾಲಾ ದಢೀಕರಣ ಪತ್ರ ಪಡೆದುಕೊಂಡು, ಪೋಷಕರ ಮನೆಗೆ ತೆರಳಿದ ಅಧಿಕಾರಿಗಳು ಕುಟುಂಬಸ್ಥರ ಮನವೊಲಿಸಿ, ಮದುವೆ ಮಾಡುವುದಿಲ್ಲ ಎಂಬ ಮುಚ್ಚಳಿಕೆ ಪತ್ರ ಬರೆಸಿಕೊಂಡು ಎಚ್ಚರಿಕೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ರೇಣುಕಮ್ಮ ಎಂ.ದೇವಿರೆಡ್ಡಿ, ಪೊಲೀಸ್ ಇಲಾಖೆಯ ಕೆ.ಎಲ್. ಉಮೇಶ್, ಮಕ್ಕಳ ಸಹಾಯವಾಣಿಯ ಸುಜತ, ಅಂಗನವಾಡಿ ಕಾರ್ಯಕರ್ತೆ, ಗ್ರಾಮಸ್ಥರು ಉಪಸ್ಥಿತರಿದ್ದರು.