ಬಸವೇಶ್ವರರ ಪ್ರತಿಮೆ ಸ್ಥಾಪನೆ ಒತ್ತಾಯ

363

ಶಿವಮೊಗ್ಗ: ನಗರದ ಬಸವಶ್ವರ ಸರ್ಕಲ್‌ನಲ್ಲಿ ಜಗಜ್ಯೋತಿ ಬಸವೇಶ್ವರ ಪ್ರತಿಮೆ ಸ್ಥಾಪನೆ ಮಾಡಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾ ಉಪಾಧ್ಯಕ್ಷ ಹೆಚ್.ಎಂ. ಚಂದ್ರಶೇಖರಪ್ಪ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ನಗರದ ಪ್ರೆಸ್‌ಟ್ರಸ್ಟ್‌ನಲ್ಲಿಂದು ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಅನೇಕ ಬಾರಿ ಬಸವೇಶ್ವರರ ಪ್ರತಿಮೆ ಸ್ಥಾಪನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಲಾಗಿದ್ದು, ಅವರು ಸಕರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ, ಆದರೆ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ . ಇಂದು ನಗರಕ್ಕೆ ಭೇಟಿ ನೀಡುತ್ತಿರುವ ಅವರು ಈ ಬಗ್ಗೆ ಸೂಕ್ತ ನಿರ್ದೇಶನವನ್ನು ಜಿಲ್ಲಾಡಳಿತಕ್ಕೆ ನೀಡಬೇಕು ಎಂದು ಆಗ್ರಹಿಸಿದರು.
ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮರುಘರಾಜೇಂದ್ರ ಮಹಾ ಸ್ವಾಮಿಗಳು, ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿಯವರು ಸಹ ನಗರದಲ್ಲಿ ಬಸವೇಶ್ವರರ ಪ್ರತಿಮೆ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸುತ್ತಿದ್ದು, ಇದು ಹೋರಾಟದ ರೂಪಕ್ಕೆ ಹೋಗಲು ಅವಕಾಶ ನೀಡದೆ ಬೇಡಿಕೆ ಈಡೇರಿಸಬೇಕೆಂದರು.
ಇಂಗ್ಲೆಂಡ್‌ನಿಂದ ತಂದಿರುವ ಬಸವೇಶ್ವರರ ಪ್ರತಿಮೆ ಮಹಾನಗರ ಪಾಲಿಕೆ ಗೋಡೌನ್‌ಗೆ ಬಂದು ೨ವರ್ಷದ ಮೇಲಾಗಿದ್ದು, ಇದನ್ನು ಬಸವೇಶ್ವರ ವೃತ್ತದ ಪಕ್ಕ ಗಾಂಧಿ ಪಾರ್ಕ್ ಮುಂಭಾಗದಲ್ಲಿ ಪ್ರತಿಷ್ಠಾಪಿಸಬೇಕೆಂದು ಮನವಿ ಮಾಡಿದರು.
ಅಭಿವೃದ್ಧಿಗೆ ಒತ್ತಾಯ: ಗಾಜನೂರು ಡ್ಯಾಂ ಬಳಿ ೩೦ ಎಕರೆ ಜಾಗವನ್ನು ಕೆಆರ್‌ಎಸ್ ರೀತಿ ಅಭಿವೃದ್ಧಿ ಪಡಿಸಬೇಕು.
ಶಿವಮೊಗ್ಗದ ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬವಾಗಿದ್ದು ಅದರ ವೇಗ ಹೆಚ್ಚಿಸಬೇಕು, ಕೆಲವೆಡೆ ರಸ್ತೆಗಿಂತ ಫುಟ್‌ಪಾತ್ ದೊಡ್ಡದಾಗಿದ್ದು ರಸ್ತೆಗಳನ್ನು ವಿಶಾಲವಾಗಿಸಬೇಕು ಹಾಗೂ ಅಭಿವೃದ್ಧಿ ಪಡಿಸಬೇಕು ಎಂದರು.
ನಗರದ ಎಲ್ಲಾ ವೃತ್ತಗಳಿಗೆ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಬೇಕು,ಪಾಲಿಕೆ ಆಯುಕ್ತರು ನಗರ ಸಂಚಾರ ಮಾಡುವ ಮೂಲಕ ನಗರದ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.
ನಗರದ ಬಡವರಿಗೆ ನಿವೇಶನಗಳನ್ನು ನೀಡಬೇಕು, ನಗರದ ಯುಜಿಡಿ ಕಾಮಗಾರಿಯನ್ನು ಬೇಗ ಪೂರ್ಣಗೊಳಿಸಬೇಕು ಇಲ್ಲವಾದಲ್ಲಿ ಬೀದಿಗಿಳಿದು ಹೋರಾಟ ಮಾಡಲು ತಾವು ಸಿದ್ಧ ಎಂದು ಎಚ್ಚರಿಸಿದರು.
ಬ್ರಿಟನ್ ಕರೋನ ಹರಡುತ್ತಿರುವುದರಿಂದ ಸರ್ಕಾರ ಬ್ರಿಟನ್ ವಿಮಾನಗಳಿಂದ ಬಂದ ಜನರಿಗೆ ಸ್ಥಳಿಯವಾಗಿಯೇ ಕ್ವಾರಂಟೈನ್ ಮಾಡುವ ಮೂಲಕ ಕರೋನ ಹರಡದಂತೆ ಕ್ರಮ ಕೈಗೊಳ್ಳಬೇಕೆಂದರು.
ಸುದ್ದಿಗೋಷ್ಟಿಯಲ್ಲಿ ಬಸವಕೇಂದ್ರದ ಅಧ್ಯಕ್ಷ ಬೆನಕಪ್ಪ, ಮುಖೇಶ್ ಆರಾಧ್ಯ ಉಪಸ್ಥಿತರಿದ್ದರು.