ಬರುವ ಶೈಕ್ಷಣಿಕ ವರ್ಷದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಷನ್ ಹಾವಳಿ ತಪ್ಪಿಸಿ..

492

ಹೊಸನಾವಿಕ ಪತ್ರಿಕೆಗೆ ಚಂದಾದಾರರಾಗಲು ಮತ್ತು ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ: +91 948 248 2182, e-mail:hosanavika@gmail.com

ಶಿವಮೊಗ್ಗ: ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಪೋಷಕರಿಂದ ಸುಲಿಗೆಗೆ ಇಳಿಯುತ್ತಿರುವುದು ಸಾಮಾನ್ಯವಾಗಿದೆ. ಬರುವ ಶೈಕ್ಷಣಿಕ ವರ್ಷದಲ್ಲಿ ನಗರದಲ್ಲಿ ಡೊನೇಷನ್ ಹಾವಳಿ ತಪ್ಪಿಸುವಂತೆ ಎನ್ ಎಸ್ ಯು ಐ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದೆ.
ರಾಜ್ಯದಲ್ಲಿ ಖಾಸಗಿ ಶಾಲೆಗಳ ಡೊನೇಷನ್ ಹಾವಳಿ ಹೆಚ್ಚುತ್ತಲೇ ಇದ್ದು ಈ ವರ್ಷವು ಶಿವಮೊಗ್ಗದಲ್ಲಿ ಶುಲ್ಕ ಹಾವಳಿಗೆ ಖಾಸಗಿ ಶಾಲೆಗಳು ಬಾಯಿತೆರೆದುಕೊಂಡು ಕುಳಿತಿವೆ. ಕೊರೋನ ಹಿನ್ನಲೆಯಲ್ಲಿ ಖಾಸಗಿ ಶಾಲೆಗಳು ಹೆಚ್ಚಿನ ಶುಲ್ಕ ನೀಡುವಂತೆ ಪೋಷಕರ ರಕ್ತ ಹೀರುವಂತೆ ವರ್ತಿಸುತ್ತಿವೆ ಎಂದು ಸಂಘಟನೆ ಗಂಭೀರ ಆರೋಪ ಮಾಡಿದೆ.
ಕೊರೋನ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳಿಗೆ ರಾಜ್ಯ ಸರ್ಕಾರ ಶುಲ್ಕ ವಸೂಲಿ ಮಾಡಲು ಅನುಮತಿ ನೀಡಿದ್ದು ಒತ್ತಡ ನೀಡದಂತೆ ನಿರ್ಬಂಧನೆ ಹೊರಿಸಿದೆ. ಆದರೆ ಜೀವನ ನಡೆಸುವುದೇ ಕಷ್ಟವಿರುವ ಸಂದರ್ಭದಲ್ಲಿ ಮಧ್ಯಮ ವರ್ಗದ ಜನ ಹೇಗೆ ಇವರು ಕೇಳುವ ಶುಲ್ಕ ಭರಿಸಲು ಸಾಧ್ಯವೆಂದು ಸಂಘಟನೆ ಆಗ್ರಹಿಸಿದೆ.
ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಬೇಕು ಸರ್ಕಾರಿ ಶುಲ್ಕ ಮಾತ್ರ ಪೋಷಕರಿಂದ ಪಡೆಯಬೇಕೆಂದು ನಿರ್ಬಂಧಿಸಬೇಕು. ಒಂದು ವೇಳೆ ಜಿಲ್ಲಾಡಳಿತ ಈ ರೀತಿ ನಿರ್ಬಂಧ ತರುವಲ್ಲಿ ವಿಫಲವಾದರೆ ಸಂಘಟನೆ ಉಗ್ರ ಹೋರಾಟ ನಡೆಸಲಿದೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿವೆ.
ಎನ್ ಎಸ್ ಯು ಐ ರಾಜ್ಯ ಉಪಾಧ್ಯಕ್ಷ ಕೆ.ಚೇತನ್, ಜಿಲ್ಲಾಧ್ಯಕ್ಷ ಹೆಚ್ ಎಸ್ ಬಾಲಾಜಿ ಕಾರ್ಯಾಧ್ಯಕ್ಷ ವಿನಯ್, ನಗರಾಧ್ಯಕ್ಷ ವಿಜಯ್, ಗ್ರಾಮಾಂತರ ಅಧ್ಯಕ್ಷ ರವಿ, ಅಬ್ದುಲ್ ಸತ್ತರ್, ಗಿರೀಶ್ ಉಪಸ್ಥಿತರಿದ್ದರು.