ಬಫರ್‌ಝೋನ್ ನಿವಾಸಿಗಳಿಗೆ ಕೊರೋನಾ ಟೆಸ್ಟ್

446

ಹೊನ್ನಾಳಿ: ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಹೊನ್ನಾಳಿ ಪಟ್ಟಣಪಂಚಾಯ್ತಿ ಮತ್ತು ಆರೋಗ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕೋವಿಡ್-೧೯ ಸೋಂಕು ದೃಢಪಟ್ಟ ಮನೆ ಮತ್ತು ಅವರು ವಾಸಿಸುತ್ತಿರುವ ಏರಿಯಾಗಳ ಸುತ್ತಲೂ ವಾಸವಾಗಿರುವ ವ್ಯಕ್ತಿಗಳ ಗಂಟಲು ದ್ರವ ತೆಗೆದು ಮುಂಜಾಗ್ರತಾ ಕ್ರಮವಾಗಿ ಕೋವಿಡ್ ಪರೀಕ್ಷೆ ಮಾಡಲಾಯಿತು.
ಹೊನ್ನಾಳಿ ಮಾರಿಕೊಪ್ಪ ವತ್ತದ ಬಳಿ ದುರ್ಗಮ್ಮ ದೇವಸ್ಥಾನದ ಬಳಿಯಿರುವ ಅಂಗನವಾಡಿ ಕಟ್ಟಡದಲ್ಲಿ ಹಾಗೂ ಹಿರೇಕಲ್ಮಠ ವೃತ್ತದ ಗಂಗಾ ಸಾಮಿಲ್ ಹಿಂಭಾಗ ೪ನೇ ಅಡ್ಡ ರಸ್ತೆಯಲ್ಲಿ ಶಿಕ್ಷಕ ಕೆ.ಜೀನಹಳ್ಳಿಯವರ ಮನೆಯ ಹೊರಾಂಗಣದಲ್ಲಿ ಪರೀಕ್ಷೆ ಸಾರ್ವಜನಿಕವಾಗಿ ಕೊರೋನಾ ಪರೀಕ್ಷೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ವೀರಭದ್ರಯ್ಯ, ಕಿರಿಯ ಆರೋಗ್ಯ ಸಹಾಯಕಿ ನಾಗರತ್ನ, ಟಿಕ್ನೀಷಿಯನ್ ಶೋಭ, ಅಂಗನವಾಡಿ ಕಾರ್ಯಕರ್ತೆ ಚನ್ನಮ್ಮ, ಆಶಾP ರ್ಯಕರ್ತೆ ಭಾರತಿ ನೇತ್ರ ಇನ್ನಿತರರು ಉಪಸ್ಥಿತರಿದ್ದು ಕಾರ್ಯ ನಿರ್ವಹಿಸಿದರು.