ಫೆ.೧ರಿಂದ ಕಂಪ್ಲೀಟ್ ಲಾಕ್ ಆಗುತ್ತಾ ಕರ್ನಾಟಕ..?

27

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ರಾಜ್ಯ ಫೆ. ೧ ರಿಂದ ೧೦ ದಿನಗಳ ಕಾಲ ಲಾಕ್‌ಡೌನ್ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದೆ.
ನಾಳೆ ಪ್ರಧಾನಿ ಮೋದಿ ಅವರು ಎಲ್ಲ ರಾಜ್ಯಗಳ ಸಿಎಂಗಳ ಜೊತೆ ವಿಡಿಯೋ ಕಾನರೆನ್ಸ್ ನಡೆಸಲಿದ್ದು, ಆಯಾ ರಾಜ್ಯಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯುವರು. ಕರ್ನಾಟಕದಲ್ಲಿ ಕಳೆದ ೧೦ ದಿನಗಳಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಇದನ್ನು ನಿಯಂತ್ರಿಸಲು ಲಾಕ್‌ಡೌನ್ ನಿಂದ ಮಾತ್ರ ಸಾಧ್ಯ ಎಂದು ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ.
ರಾಜಧಾನಿ ಬೆಂಗಳೂರಿನ ಪ್ರತಿದಿನ ಒಟ್ಟು ಸೋಂಕಿತರಲ್ಲಿ ಶೇ.೭೫ರಷ್ಟು ಪ್ರಕರಣಗಳು ದಾಖಲಾಗುತ್ತಿದ್ದು, ಫೆಬ್ರವರಿಯಲ್ಲಿ ಕನಿಷ್ಟ ೭೫ ಸಾವಿರದಿಂದ ಒಂದು ಲಕ್ಷದವರೆಗೂ ಇದು ದಾಟಬಹುದು. ಹೀಗಾಗಿ ತಕ್ಷಣವೇ ಸರ್ಕಾರ ಲಾಕ್‌ಡೌನ್ ಸೇರಿದಂತೆ ಕೆಲವು ಬಿಗಿಯಾದ ಕ್ರಮಗಳನು ತೆಗೆದುಕೊಳ್ಳಬೇಕೆಂದು ಸೂಚಿಸಿದೆ.
ಪ್ರಸ್ತುತ ರಾಜ್ಯದಲ್ಲಿ ಜರಿ ಮಾಡಿರುವ ವೀಕೆಂಡ್ ಕಫ್ರ್ಯೂವನ್ನು ಮುಂದುವರೆಸುವುದು, ಕಫ್ರ್ಯೂ ಸಮಯವನ್ನು ಸಾಧ್ಯವಾದರೆ ರಾತ್ರಿ ೮ರಿಂದಲೇ ಜರಿ ಮಾಡುವುದು, ಬೆಂಗಳೂರಿನ ಜೊತೆಗೆ ಕೋವಿಡ್ ಹೆಚ್ಚುತ್ತಿರುವ ಇತರ ಜಿಗಳಲ್ಲೂ ಕೆಲವು ಚಟುವಟಿಕೆಗಳಿಗೆ ನಿರ್ಬಂಧ ಹಾಕುವ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಪ್ರಕರಣಗಳಿಂದ ಜನರು ಬೇರೆ ಬೇರೆ ನಗರಗಳಿಗೆ ಗುಳೇ ಹೋಗುತ್ತಿರುವುದರಿಂದ ಗ್ರಾಮೀಣ ಭಾಗಗಳಿಗೂ ಸೋಂಕು ಹರಡ ಬಹುದೆಂಬ ಆತಂಕ ಎದುರಾಗಿದೆ. ಈ ಹಿಂದೆ ಭಾರೀ ಪ್ರಮಾಣದಲ್ಲಿ ಸೋಂಕಿತರು ೨ ಮತ್ತು ೩ನೇ ಹಂತದ ನಗರಗಳು ಹಾಗೂ ಗ್ರಾಮೀಣ ಪ್ರದೇಶಗಳಿಗೆ ಏಕಾಏಕಿ ದಾಂಗುಡಿ ಇಟ್ಟ ಪರಿಣಾಮ ಭಾರೀ ಪ್ರಮಾಣದಲ್ಲಿ ಸೋಂಕು ಹೆಚ್ಚಾಗಿತ್ತು.
ಈಗ ಆತಂಕಗೊಂಡಿರುವ ರಾಜ್ಯ ಸರ್ಕಾರ ಇದನ್ನು ನಿಯಂತ್ರಿಸಲು ಲಾಕ್‌ಡೌನ್ ಮೆರೆಹೋಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಅರಗ eನೇಂದ್ರ ಅವರು, ಕೋವಿಡ್ ಪ್ರಕರಣಗಳು ಹೀಗೆ ಹೆಚ್ಚಾಗುತ್ತಿದ್ದರೆ ಲಾಕ್‌ಡೌನ್ ಅನಿವಾರ್ಯ ಎಂದು ಹೇಳಿದ್ದರು.

      ————————————————-
ಸುದ್ದಿ , ಜಾಹೀರಾತು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ WhatsApp : 9482482182